Advertisement

ಉಜಿರೆ ಟಿ.ಬಿ. ಆಸ್ಪತ್ರೆ ಕ್ವಾರಂಟೈನ್‌ ಕೇಂದ್ರ; ಬೆಳ್ತಂಗಡಿ ಶಾಸಕರ ಮಾದರಿ ಪ್ರಯತ್ನ

11:31 AM Jul 14, 2020 | mahesh |

ಬೆಳ್ತಂಗಡಿ: ತಾಲೂಕಿನ ವ್ಯಕ್ತಿಗಳಲ್ಲಿ ಕೋವಿಡ್ ಲಕ್ಷಣ ಕಂಡುಬಂದಲ್ಲಿ ಅವರ ಆರೋಗ್ಯ ರಕ್ಷಣೆಗೆ ಉಜಿರೆ ಹಳೆಪೇಟೆ ಬಳಿಯ ಟಿ.ಬಿ. ಆಸ್ಪತ್ರೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರ ನೆರವಿನಿಂದ ಸಿದ್ಧಪಡಿಸಲಾಗಿದೆ ಎಂದು ಶಾಸಕ ಹರೀಶ್‌ ಪೂಂಜ ತಿಳಿಸಿದ್ದಾರೆ.

Advertisement

ಧರ್ಮಸ್ಥಳದ ಅಂಗ ಸಂಸ್ಥೆಯಾದ ಲಾೖಲ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಹಳೇ ಕ್ಷಯ ರೋಗ ಆಸ್ಪತ್ರೆಗೆ ರವಿವಾರ ಕೋವಿಡ್‌ ಸೋಂಕು ದೃಢ ಪಟ್ಟರೂ ಗುಣಲಕ್ಷಣವಿಲ್ಲದೇ ಆರೋಗ್ಯವಾಗಿರುವ 6 ಮಂದಿಯನ್ನು ಸ್ಥಳಾಂತರಿಸಿ ಬಳಿಕ ಮಾತನಾಡಿದರು. ಆರೋಗ್ಯ ಸೇವಾ ನಿರತರಿಗೂ ಕೋವಿಡ್ ಬಂದಿರುವುದು ಆತಂಕಕಾರಿ ವಿಷಯ. ತಾಲೂಕಿನಲ್ಲಿ ಪಾಸಿಟಿವ್‌ ಪ್ರಕರಣ ಬಂದವರಿಗೆ ಬೇರೆಯೆ ವಾಸ್ತವ್ಯಕ್ಕೆ ವ್ಯವಸ್ಥೆ ಮತ್ತು ಚಿಕಿತ್ಸೆ ನೀಡಲು ಚಿಂತಿಸಿದ್ದು ಅದಕ್ಕಾಗಿ ನಾನು ಮತ್ತು ಜಿಲ್ಲಾಡಳಿತ ಡಾ| ಹೆಗ್ಗಡೆಯವರಲ್ಲಿ ಲಾೖಲದ ಹಳೆ ಕ್ಷಯ ಆಸ್ಪತ್ರೆಯನ್ನು ನೀಡುವಂತೆ ವಿನಂತಿಸಿದ್ದೆ. ಅದಕ್ಕೆ ಅವರು ಒಪ್ಪಿದ್ದಾರೆ. ಇಲ್ಲಿ 159 ಮಂದಿಗೆ ಉತ್ತಮವಾದ ಸೌಕರ್ಯದೊಂದಿಗೆ ಚಿಕಿತ್ಸೆ ನೀಡಬಹುದಾಗಿದೆ. ಊಟ, ಉಪಾಹಾರದ ವ್ಯವಸ್ಥೆಯನ್ನು ಡಾ| ಹೆಗ್ಗಡೆಯವರೇ ಭರಿಸುತ್ತಿದ್ದಾರೆ. 10 ದಿನಗಳ ಬಳಿಕ ಸ್ವಂತ ಖರ್ಚಿನಲ್ಲಿ ಮತ್ತೂಮ್ಮೆ ಗಂಟಲ ಮಾದರಿ ಪರೀಕ್ಷೆ ನಡೆಸಿ ಸಂಪೂರ್ಣ ಗುಣಮುಖರಾಗುವವರೆಗೆ 14 ದಿನ ಕ್ವಾರಂಟೈನ್‌ ಸೌಲಭ್ಯ ನೀಡಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next