ಬೆಳ್ತಂಗಡಿ: ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ವತಿಯಿಂದ ಯಕ್ಷಭಾರತಿ ಕನ್ಯಾಡಿ ಸಹಯೋಗ ಹಾಗೂ ಉಜಿರೆ ಶ್ರೀ ಜನಾರ್ದನ ಕ್ಷೇತ್ರದ ಸಹಕಾರದೊಂದಿಗೆ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ 2019ರ ಫೆ. 2, 3ರಂದು ನಡೆಯಲಿರುವ ಯಕ್ಷ ಸಂಭ್ರಮದ ಸಮಾಲೋಚನ ಸಭೆ ಉಜಿರೆಯಲ್ಲಿ ಜರಗಿತು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ, ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಅರ್ಥಧಾರಿ ಜಬ್ಟಾರ್ ಸಮೋ, ಯಕ್ಷಭಾರತಿ ಅಧ್ಯಕ್ಷ ದಯಾನಂದ ಎಳಚಿತ್ತಾಯ ಉಪಸ್ಥಿತರಿದ್ದರು.
ರಾಜಾರಾಜ ಶರ್ಮ, ಮೋಹನ ಬೈಪಾಡಿತ್ತಾಯ, ರಾಘವೇಂದ್ರ ಬೈಪಾಡಿತ್ತಾಯ, ಸುರೇಶ ಕುದ್ರೆಂತಾಯ, ಮಹೇಶ ಕನ್ಯಾಡಿ, ಶಿತಿಕಂಠ ಭಟ್, ವೆಂಕಪ್ಪ ಸುವರ್ಣ, ಶರತ್‌ಕೃಷ್ಣ ಪಡ್ವೆಟ್ನಾಯ, ಹರೀಶ್ ಕೊಳ್ತಿಗೆ, ಹರಿದಾಸ ಗಾಂಭೀರ, ರತ್ನವರ್ಮ ಜೈನ್, ಶೋಭಾ ಕುದ್ರೆಂತಾಯ, ವಿಜಯಲಕ್ಷ್ಮೀ, ಭವ್ಯಾ ಹೊಳ್ಳ, ಗಂಗಾಧರ್, ವಿದ್ಯಾಕುಮಾರ್ ಕಾಂಚೋಡು, ಸಂತೋಷ ಕೇಳ್ಳರ್, ಸಾಂತೂರು ಶ್ರೀನಿವಾಸ ತಂತ್ರಿ ಮತ್ತಿತರರು ಅಭಿಪ್ರಾಯ ತಿಳಿಸಿದರು. ಕಾರ್ಯಕ್ರಮ ಸಂಯೋಜನೆ, ಖರ್ಚು- ವೆಚ್ಚಗಳ ಕುರಿತು ಚರ್ಚಿಸಲಾಯಿತು. ಯಕ್ಷ ಭಾರತಿ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ, ವಂದಿಸಿದರು.
ಯಕ್ಷಗಾನ, ತಾಳಮದ್ದಳೆ
ಅಕಾಡೆಮಿ ಅಧ್ಯಕ್ಷ, ಯಕ್ಷಗಾನ ಕಲಾವಿದ ಎಂ.ಎ. ಹೆಗಡೆ ಮಾತನಾಡಿ, ಎರಡು ದಿನಗಳ ಕಾರ್ಯಕ್ರಮದಲ್ಲಿ ಉದ್ಘಾಟನೆ, ವಿಚಾರಗೋಷ್ಠಿ, ಮಕ್ಕಳ ಯಕ್ಷಗಾನ ತಾಳಮದ್ದಳೆ, ತೆಂಕು- ಬಡಗುತಿಟ್ಟು ಯಕ್ಷಗಾನ ಪ್ರದರ್ಶನ, ಮಹಿಳಾ ತಾಳಮದ್ದಳೆ, ಮೂಡಲಪಾಯ, ವಿವಿಧ ತಿಟ್ಟು ಗಳ ಪ್ರಾತ್ಯಕ್ಷಿಕೆ ಹಾಗೂ ದೊಂದಿ ಬೆಳಕಿನ ಯಕ್ಷಗಾನ ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.