ನವದೆಹಲಿ: ಆಧಾರ್ ನೀಡುವ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ)ಗೆ ಇನ್ನು ಒಂದು ಕೋಟಿ ರೂ. ವರೆಗೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಯುಐಡಿಎಐ (ದಂಡ ವಿಧಿಸುವ ಅಧಿಕಾರ) ನಿಯಮಗಳು 2021ಕ್ಕೆ ನ.2ರಂದು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಎರಡು ವರ್ಷಗಳ ಹಿಂದೆ ಈ ಬಗೆಗಿನ ಕಾಯ್ದೆಗೆ ಅಂಗೀಕಾರ ಸಿಕ್ಕಿತ್ತು.
ಅಂಗೀಕಾರಗೊಂಡ ಕಾಯ್ದೆಯ ಪ್ರಕಾರ, ಯುಐಡಿಎಐ ಕೋರಿದ ಮಾಹಿತಿಯನ್ನು ಸಲ್ಲಿಕೆ ಮಾಡದ ಅಥವಾ ಆಧಾರ್ ವ್ಯವಸ್ಥೆಯಲ್ಲಿನ ನಿಯಮಗಳನ್ನು ಪಾಲನೆ ಮಾಡದವರಿ ಗೆ 1 ಕೋಟಿ ರೂ.ವರೆಗೆ ದಂಡ ವಿಧಿಸುವ ಅವಕಾಶ ಕಲ್ಪಿಸಲಾಗಿದೆ. ಅದಕ್ಕಾಗಿ ಪ್ರಾಧಿಕಾರದ ವತಿಯಿಂದ ದಂಡ ವಿಧಿಸುವ ಬಗ್ಗೆ ಸೂಕ್ತ ಅಧಿಕಾರಿಯನ್ನು ನೇಮಕ ಮಾಡಬೇಕಾಗುತ್ತದೆ.
ಆ ಅಧಿಕಾರಿ ಭಾರತ ಸರ್ಕಾರದಲ್ಲಿ ಜಂಟಿ ಕಾರ್ಯದರ್ಶಿ ಹುದ್ದೆಯಲ್ಲಿರಬೇಕು ಮತ್ತು ಆ ಅಧಿಕಾರಿಗೆ ಹತ್ತು ವರ್ಷಗಳ ಕಾಲ ಅಧಿಕಾರದ ಅನುಭವ ಇರಬೇಕಾಗುತ್ತದೆ.
ಇದನ್ನೂ ಓದಿ:ಕೇದರಾನಾಥಕ್ಕೆ ಭೇಟಿ ಕೊಟ್ಟ ಸಾರಾ ಅಲಿಖಾನ್ ಫುಲ್ ಟ್ರೋಲ್
ದಂಡ ವಿಧಿಸುವ ಮೊದಲು ಆ ಅಧಿಕಾರಿ ನಿಯಮ ಉಲ್ಲಂಘಿ ಸಿದ ಘಟಕಕ್ಕೆ ಕಾರಣ ಕೇಳಿ ನೊಟೀಸ್ ಜಾರಿ ಮಾಡಬೇಕಾಗುತ್ತದೆ. ಜತೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸುವ ಅಧಿಕಾರ ಕೂಡ ಇದೆ. ಸಂಬಂಧಿತ ಅಧಿಕಾರಿ ದಂಡ ವಿಧಿಸಿ ನೀಡಿದ ಆದೇಶವನ್ನು ದೂರಸಂಪರ್ಕ ವ್ಯಾಜ್ಯ ಪರಿಹಾರ ಮತ್ತು ಮೇಲ್ಮನವಿ ಪ್ರಾಧಿಕಾರ (ಟಿಡಿಎಸ್‌ಎಟಿ)ಕ್ಕೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಅಧಿಕಾರ ಇದೆ.