Advertisement

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

10:49 AM Dec 20, 2024 | Team Udayavani |

ಉಪೇಂದ್ರ ನಿರ್ದೇಶನದ ಯು-ಐ ಚಿತ್ರದ ಕಂಟೆಂಟ್‌ ಕುರಿತು ಉಪ್ಪಿ ಮಾತನಾಡಿದ್ದು ಕಡಿಮೆ. ಅಲ್ಲೊಂದು, ಇಲ್ಲೊಂದು ಅಂಶವನ್ನಷ್ಟೇ ಬಿಟ್ಟುಕೊಟ್ಟಿದ್ದಾರೆ. ಇಂದು ತೆರೆಕಾಣುತ್ತಿರುವ ಯು-ಐ ಕುರಿತಾದ ಕೆಲವು ಹೈಲೈಟ್ಸ್‌…

Advertisement

ಒಂಬತ್ತು ವರ್ಷಗಳ ನಂತರ ಉಪೇಂದ್ರ ನಿರ್ದೇಶನ ಮಾಡಿರುವ ಸಿನಿಮಾವಿದು. ನಿರ್ದೇಶನದ ಜೊತೆಗೆ ನಟನೆಯೂ ಅವರದ್ದೇ.

ತಾಂತ್ರಿಕವಾಗಿ ತುಂಬಾ ಅಪ್‌ಡೇಟ್‌ ಆಗಿರುವ ಸಿನಿಮಾ. ಇವತ್ತಿನ ಆಧುನಿಕ ತಂತ್ರಜ್ಞಾನವನ್ನು ಉಪೇಂದ್ರ ಈ ಚಿತ್ರದಲ್ಲಿ ಚೆನ್ನಾಗಿ ಬಳಸಿಕೊಂಡಿರುವುದು ಚಿತ್ರದ ತುಣುಕುಗಳಲ್ಲಿ ಕಾಣುತ್ತಿದೆ.

ಸಿಂಬಲ್‌ ಮೂಲಕ ಸಿನಿಮಾ ಟೈಟಲ್‌ ಇಡುವುದರಲ್ಲಿ ಉಪೇಂದ್ರ ನಿಸ್ಸೀಮರು. ಈ ಬಾರಿಯೂ ಯು-ಐ ಎನ್ನುವುದುನ್ನು ಚಿಹ್ನೆಯ ಮೂಲಕ ಇಟ್ಟು ಗಮನ ಸೆಳೆದ ಚಿತ್ರವಿದು.

ಟೈಟಲ್‌ ನೋಡಿದವರಿಂದ ನೀನು, ನಾನು ಅಥವಾ ನಾನು- ನೀನು ಎಂಬ ಅರ್ಥಬರುತ್ತಿದೆ. ಚಿತ್ರದಲ್ಲಿ ಉಪೇಂದ್ರ ಅವರು ಹೊಸದೇನೋ ಹೇಳಿರುವ ನಿರೀಕ್ಷೆ ಇದೆ.

Advertisement

ಮನರಂಜನೆಯ ಜೊತೆಗೆ ಚಿತ್ರದಲ್ಲಿ ಒಂದು ಗಂಭೀರವಾದ ಅಂಶವಿದೆ ಎಂದು ಉಪೇಂದ್ರ ಹೇಳುತ್ತಲೇ ಬಂದಿದ್ದಾರೆ. ಆ ಅಂಶ ಅರ್ಥವಾದರೆ ನೀವು ಸೂಪರ್‌ ಎಂಬ ಉದ್ಗಾರ ಕೂಡಾ ಉಪೇಂದ್ರ ಅವರಿಂದ ಬಂದಿದೆ.

ಮೊದಲು ನೀವು ನಿಮ್ಮನ್ನು ನಂಬಿ. ನಿಮ್ಮೊಳಗಿನ ಶಕ್ತಿಯನ್ನು ಬಡಿದೆಬ್ಬಿಸಿ…ಈ ಜಗತ್ತಿನಲ್ಲಿ ನಿಮಗಿಂತ ಸ್ಟ್ರಾಂಗ್‌ ಯಾರೂ ಇಲ್ಲ. ಎಲ್ಲರ ಸಲಹೆ ಪಡೆಯಿರಿ. ಆದರೆ, ನಿಮ್ಮನ್ನು ನೀವು ನಂಬಿ ಎಂಬ ಸಂದೇಶ ಕೂಡಾ ಈ ಚಿತ್ರದಲ್ಲಿದೆ ಎನ್ನಲಾಗಿದೆ.

ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ರಿಲೀಸ್‌ ಆಗುತ್ತಿರುವ ಸಿನಿಮಾ. ಅಮೀರ್‌ ಖಾನ್‌ ಸೇರಿದಂತೆ ಬೇರೆ ಬೇರೆ ಭಾಷೆಯ ನಿರ್ದೇಶಕರು ಈ ಸಿನಿಮಾ ಮೇಲೆ ಒಂದು ಕಣ್ಣಿಟ್ಟಿರುವುದು ಸುಳ್ಳಲ್ಲ.

“ಯು-ಐ’ ಚಿತ್ರ ತಲೆಗೆ ಹುಳ ಬಿಡಲ್ಲ, ಬದಲಾಗಿ ತಲೆ ಯೊಳಗೆ ತುಂಬಿಕೊಂಡಿರುವ ಹುಳವನ್ನು ತೆಗೆಯುತ್ತದೆ. ಇದು ಕನ್‌ಫ್ಯೂಸ್‌ ಮಾಡುವ ಸಿನಿಮಾವಲ್ಲ, ಕನ್ವಿನ್ಸ್‌ ಮಾಡುವ ಸಿನಿಮಾ ಎಂಬ ವಾದ ಉಪ್ಪಿಯದ್ದು.

ಹಂಗೆರಿಯ ಪ್ರಮುಖ ನಗರ ಬುಡಾ ಪೆಸ್ಟ್‌ ನಲ್ಲಿ ಹಾಡಿನ ರೆಕಾರ್ಡ್‌ ಮಾಡಲಾಗಿದೆ. 90-ಪೀಸ್‌ ಆರ್ಕೆಸ್ಟ್ರಾ ಬಳಸಿ ಸಂಗೀತವನ್ನು ರೆಕಾರ್ಡ್‌ ಮಾಡಲಾಗಿದೆ.

ಮುಂಗಡ ಬುಕ್ಕಿಂಗ್‌ನಲ್ಲಿ ಅತಿ ವೇಗವಾಗಿ ಟಿಕೆಟ್‌ಗಳು ಮಾರಾಟವಾದ ಖ್ಯಾತಿ ಕೂಡಾ ಯು-ಐ ಚಿತ್ರದ್ದು.

ವೀನಸ್‌ ಎಂಟರ್‌ಟೈನರ್ ಹಾಗೂ ಲಹರಿ ಫಿಲಂಸ್‌ ಚಿತ್ರವನ್ನು ಬಿಗ್‌ ಬಜೆಟ್‌ನಲ್ಲಿ ನಿರ್ಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next