ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ (Upendra) ನಟನೆಯ ‘ಯುಐ’ ಸಿನಿಮಾದ (UI Movie) ಸಿನಿಮಾದ ʼವಾರ್ನರ್ʼ ರಿಲೀಸ್ ಆಗಿದೆ.
ಈಗಾಗಲೇ ತನ್ನ ಟೈಟಲ್‌ನಿಂದಲೇ ಸಖತ್ ಸದ್ದು ಮಾಡಿರುವ ʼಯುಐʼ ಸಿನಿಮಾ ರಿಲೀಸ್‌ಗೂ ಮುನ್ನ ವಿಭಿನ್ನ ಪ್ರಚಾರದಿಂದ ಸದ್ದು ಮಾಡಿದೆ. ʼಚಿಕ್ಕದು – ದೊಡ್ಡದುʼ ಎನ್ನುವ ಹಾಡಿನ ಪ್ರೋಮೊ ಬಿಟ್ಟು ತಲೆಗೆ ಹುಳು ಬಿಟ್ಟಿದ್ದ ಉಪ್ಪಿ ಆ ಬಳಿಕ ಟೀಸರ್, ʼಟ್ರೋಲ್ʼ ಹಾಡನ್ನು ರಿಲೀಸ್ ಗಮನ ಸೆಳೆದಿದ್ದರು. ಬರೀ ಕತ್ತಲೆಯಲ್ಲೇ ಸೌಂಡ್ ಹಾಕಿ ಟೀಸರ್ ಎಂದಿದ್ದರು.
ಇದೀಗ ಟ್ರೇಲರ್ ಅಲ್ಲ ಇದು ʼವಾರ್ನರ್ʼ ಎಂದು ಉಪ್ಪಿ ಸಿನಿಮಾ ಯಾವ ರೀತಿ ಇರಲಿದೆ ಎಂದು ಝಲಕ್ ಬಿಟ್ಟಿದ್ದಾರೆ.
ಕಲಿಯುಗದ ಕಥೆಯನ್ನು ವಿಭಿನ್ನವಾಗಿ ಉಪ್ಪಿ ಹೇಳಲಿದ್ದಾರೆ ಎನ್ನುವ ಮಾತಿಗೆ ತಕ್ಕಂತೆ ʼಯುಐʼ ವಾರ್ನರ್ʼ ನಲ್ಲಿ 2040 ರಲ್ಲಿ ಜಗತ್ತು ಹೇಗಿರಲಿದೆ ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ.
ಟೆಕ್ನಾಲಜಿಗಳು ಮುಂದುವರೆದಂತೆ ಬಡವರು ಬಡರಾಗಿಯೇ ಉಳಿಯುತ್ತಾರೆ ಇದೇ ಅಂಶವನ್ನು ಉಪ್ಪಿ ಜಾಗತಿಕ ತಾಪಮಾನ, ಕೋವಿಡ್ 19, ಹಣದುಬ್ಬರ, ಎಐ, ನಿರುದ್ಯೋಗ, ಯುದ್ಧದ ಪರಿಣಾಮ ಬಡ ಜನರ ಮೇಲೆ ಭವಿಷ್ಯದಲ್ಲಿ ಯಾವ ರೀತಿಯ ಪರಿಣಾಮ ಬೀಳಲಿದೆ ಎನ್ನುವುದನ್ನು ಉಪ್ಪಿ ಹೇಳಿದ್ದಾರೆ.
ಅನ್ನ, ನೀರಿಗಾಗಿ ಜನ 2040ರ ವೇಳೆಗೆ ಹಾತೊರೆಯುತ್ತಾರೆ. ಹಸಿವಿಗಾಗಿ ಹೋರಾಡುತ್ತಾರೆ. ಜಾತಿ, ಧರ್ಮಗಳ ಮೋಹ, ಟೆಕ್ನಾಲಜಿಗಳು ಭವಿಷ್ಯದಲ್ಲಿ ಯಾವ ರೀತಿ ಜನಸಾಮಾನ್ಯರ ಮೇಲೆ ಪರಿಣಾಮ ಬೀಳಬಹುದು ಎನ್ನುವುದನ್ನು ಉಪ್ಪಿ ಇಲ್ಲಿ ಹೇಳಿದ್ದಾರೆ.
ಉಳ್ಳವರು ಮಂಗಳ ಗ್ರಹಕ್ಕೆ ಹೋಗುತ್ತಾರೆ. ಇಲ್ಲದವರು ಏನು ಇಲ್ಲವಾಗಿಯೇ ಬದುಕುತ್ತಾರೆ. ಹಣವಂತರ ಜಗತ್ತು ಬೇರೆ. ಜನ ಸಾಮಾನ್ಯರ ಬದುಕೇ ಬೇರೆ ಎನ್ನುವುದನ್ನು ಯುದ್ಧ ಮುಗಿದ ಸನ್ನಿವೇಶದ ದೃಶ್ಯಗಳ ಮೂಲಕ ʼವಾರ್ನರ್ʼ ನಲ್ಲಿ ತೋರಿಸಲಾಗಿದೆ.
ಉಪ್ಪಿ ಇಲ್ಲಿ ಅಧಿಕಾರ ಹಿಡಿದ ಸರ್ವಾಧಿಕಾರಿಯಂತೆ ಕಾಣಿಸಿಕೊಂಡಿದ್ದಾರೆ. ಜನ ಧಿಕ್ಕಾರ ಕೂಗಿದರೂ ಅದಕ್ಕೆ ಕ್ಯಾರೇ ಎನ್ನದೇ ಜನರ ಮೇಲೆಯೇ ಫೈಯರ್ ಮಾಡಿದ್ದಾರೆ.
ಉಪ್ಪಿ ಅವರ ಕಾನ್ಸೆಪ್ಟ್ ನೋಡಿ ಪ್ರೇಕ್ಷಕರು ಈ ರೀತಿ ಯೋಚನೆ ಮಾಡೋಕೆ ಉಪ್ಪಿ ಅವರಿಂದಲೇ ಸಾಧ್ಯವೆಂದು ಹೇಳುತ್ತಿದ್ದಾರೆ.
ಉಪೇಂದ್ರ ನಿರ್ದೇಶನದ ʼಯುಐʼ ಸಿನಿಮಾಕ್ಕೆ ಕೆ.ಪಿ ಶ್ರೀಕಾಂತ್, ಜಿ.ಮನೋಹರನ್ ಬಂಡವಾಳ ಹಾಕಿದ್ದಾರೆ. ರೀಷ್ಮಾ ನಾಣಯ್ಯ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಡಿಸೆಂಬರ್ 20 ರಂದು ಸಿನಿಮಾ ರಿಲೀಸ್ ಆಗಲಿದೆ.