Advertisement

UI Movie: ಉಪ್ಪಿ ನಿವಾಸದ ಮುಂದೆ ಜಮಾಯಿಸಿದ ಫ್ಯಾನ್ಸ್; ಕೊನೆಗೂ ಟೀಸರ್‌ ಡೇಟ್‌ ಅನೌನ್ಸ್

03:16 PM Sep 11, 2023 | Team Udayavani |

ಬೆಂಗಳೂರು: ರಿಯಲ್‌ ಸ್ಟಾರ್‌ ಉಪೇಂದ್ರ ಅವರ ʼಯುಐʼ ಸಿನಿಮಾದ ನಿರೀಕ್ಷೆ ಹೆಚ್ಚಾಗುತ್ತಿದ್ದು. ಸಿನಿಮಾ ರಿಲೀಸ್‌ ಗೂ ಮುನ್ನ ವಿಭಿನ್ನವಾಗಿ ಪ್ರಚಾರದಲ್ಲಿ ಚಿತ್ರತಂಡ ನಿರತವಾಗಿದೆ.ಇತ್ತೀಚೆಗೆ ಟೀಸರ್‌ ರಿಲೀಸ್‌ ಮಾಡುವ ವಿಚಾರದಲ್ಲಿ ನಿರ್ಮಾಪಕರೊಂದಿಗೆ ಮಾತುಕತೆ ನಡೆಸುವ ಡಿಫ್ರೆಂಟ್‌ ನಮೂನೆಯ ವಿಡಿಯೋವೊಂದನ್ನು ಚಿತ್ರತಂಡ ರಿಲೀಸ್‌ ಮಾಡಿತ್ತು. “ಫಸ್ಟ್‌ ಲುಕ್‌ ಟೀಸರ್‌ ಬಿಡಲೇಬೇಕಾ? ನೇರವಾಗಿ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿಬಿಡೋಣ” ಎಂದಿದ್ದರು. “ಸುಳ್ಳಿಗೆ ಹೈಪ್‌ ತರಬೇಕು, ಸತ್ಯಕ್ಕೆ ತಾನಾಗಿಯೇ ಹೈಪ್‌ ಸಿಗುತ್ತೆ”ಉಪ್ಪಿ ಎಂದು ಹೇಳಿದ್ದರು.

Advertisement

ಇದೀಗ ಅಂಥದ್ದೇ ವಿಡಿಯೋವೊಂದನ್ನು ಬಿಟ್ಟಿದ್ದಾರೆ. ಇದರಲ್ಲಿ ಅಭಿಮಾನಿಗಳು ಉಪ್ಪಿ ಅವರ ನಿವಾಸದ ಮುಂದೆ ಜಮಾಯಿಸಿದ್ದು ಟೀಸರ್‌ ರಿಲೀಸ್‌ ಮಾಡಲೇಬೇಕು ಎಂದು ಹಟ ಹಿಡಿದಿದ್ದಾರೆ.

ಥಿಯೇಟರ್‌ ನಲ್ಲಿ ನೀವೆಲ್ಲ ತಲೆ ಎತ್ತಿ ಸಿನಿಮಾ ನೋಡ್ಬೇಕು. ಆ ಕಾರಣದಿಂದ ನಾನು ಸಿನಿಮಾದ ಟೀಸರ್‌ ಬಿಟ್ಟಿಲ್ಲ ಎಂದು ಉಪ್ಪಿ ಎಂದಿದ್ದಾರೆ. ಅದಕ್ಕೆ ಅಭಿಮಾನಿಗಳು ಒಂದು ಕ್ಷಣ ಹೌದೆಂದು ಸುಮ್ಮನಾಗಿ ಮತ್ತೆ ಟೀಸರ್‌ ಬೇಕೆಂದು ಕೇಳಿದ್ದಾರೆ. ಇದಕ್ಕೆ ಕೊನೆಗೂ ಮಣಿದಿರುವ ಉಪೇಂದ್ರ ಟೀಸರ್‌ ರಿಲೀಸ್‌ ಡೇಟ್‌ ನ್ನು ಅನೌನ್ಸ್‌ ಮಾಡಿದ್ದಾರೆ.

ಸೆಪ್ಟೆಂಬರ್ 18ರಂದು ಮಧ್ಯಾಹ್ನ 3 ಗಂಟೆಗೆ ಊರ್ವಶಿ ಥಿಯೇಟರ್​ನಲ್ಲಿ ಟೀಸರ್ ರಿಲೀಸ್ ಆಗಲಿದೆ ಎಂದು ಉಪ್ಪಿ ಹೇಳಿದ್ದಾರೆ. ಅಂದಹಾಗೆ ಸೆ.18 ರಂದು ರಿಯಲ್‌ ಸ್ಟಾರ್‌ ಉಪ್ಪಿ ಅವರ ಹುಟ್ಟುಹಬ್ಬವಿದೆ.

ಈ ಚಿತ್ರವನ್ನು ಕೆ.ಪಿ. ಶ್ರೀಕಾಂತ್​ ಮತ್ತು ಜಿ. ಮನೋಹರನ್​ ಅವರು ನಿರ್ಮಾಣ ಮಾಡುತ್ತಿದ್ದಾರೆ. ʼಯುಐʼ ಮೂಲಕ ಉಪ್ಪಿ ಬಹು ಸಮಯದ ಬಳಿಕ ಮತ್ತೆ ನಿರ್ದೇಶನಕ್ಕೆ ಕಂಬ್ಯಾಕ್‌ ಮಾಡುತ್ತಿದ್ದಾರೆ.

Advertisement

ಸಿನಿಮಾದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು,ನಿಧಿ ಸುಬ್ಬಯ್ಯ, ಇಂದ್ರಜಿತ್ ಲಂಕೇಶ್ ಹಾಗೂ ಪ್ರಶಾಂತ್ ಸಂಬರಗಿ ಮುಂತಾದವರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next