Advertisement

ದಾಂಡೇಲಿ:ಯುಜಿಡಿ ಕಾಮಗಾರಿಯಿಂದ ಹದಗೆಟ್ಟ ರಸ್ತೆ

09:02 PM Oct 05, 2021 | Team Udayavani |

ದಾಂಡೇಲಿ : ನಗರದ ಬಹುಪಾಲು ಜನತೆಯ ಹಿಡಿಶಾಪಕ್ಕೆ ಕಾರಣವಾದ ಯುಜಿಡಿ ಕಾಮಗಾರಿಯಿಂದ ನಗರದ ಜನತೆ ಹೈರಾಣರಾಗಿದ್ದಾರೆ. ಯುಜಿಡಿ ಪೈಪ್ಲೈನ್ ಆಳವಡಿಕೆಗಾಗಿ ರಸ್ತೆ ಅಗೆದು, ಪೈಪ್ಲೈನ್ ಆಳವಡಿಸಿದ ಬಳಿಕ ರಸ್ತೆಯನ್ನು ಮುಚ್ಚಲಾಗಿದ್ದರೂ ಸಮರ್ಪಕ ದುರಸ್ತಿ ಮಾಡದ ಹಿನ್ನೆಲೆಯಲ್ಲಿ ರಸ್ತೆ ತೀವ್ರ ಹದಗೆಟ್ಟು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.

Advertisement

ಮಂಗಳವಾರ ಸಂಜೆ ನಗರದ ಟೌನಶೀಪಿನ ಕಾನ್ವೆಂಟ್ ಶಾಲೆಯ ಹತ್ತಿರ ಕಾರೊಂದು ನಡು ರಸ್ತೆಯಲ್ಲೆ  ಹೂತು ಹೋಗಿ ಬಹಳಷ್ಟು ಹೊತ್ತು ಒದ್ದಾಡಿದ ಘಟನೆ ನಡೆದಿದೆ. ಪ್ರತಿದಿನ ಇಂತಹ ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಗರದ ಜನತೆಯದ್ದಾಗಿದೆ.

ನಗರದ ಸೋಮಾನಿ ವೃತ್ತದಲ್ಲಿ ಯುಜಿಡಿ ಪೈಪ್ಲೈನಿಗಾಗಿ ಅಚ್ಚುಕಟ್ಟಾಗಿ ರಸ್ತೆಯನ್ನು ಅಗೆದು, ಪೈಪ್ ಆಳವಡಿಸಿದ ಬಳಿಕ ಮುಚ್ಚಲಾಗಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದ ಇದೇ ಯುಜಿಡಿ ಕಾಮಗಾರಿ ಸಂಸ್ಥೆಯವರು ನಗರದ ಒಳ ರಸ್ತೆಗಳಲ್ಲಿ ಮಾತ್ರ ಮನಸೊ ಇಚ್ಚೆ ರಸ್ತೆಯನ್ನು ಅಗೆಯುತ್ತಿರುವುದೇ ಈ ಸಮಸ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಂಜಿನ ಮೆರವಣಿಗೆ, ಪ್ರತಿಭಟನಾ ಸಭೆ

ಪ್ರಮುಖ ವಿರೋಧ ಪಕ್ಷವು ಮೌನಂ ಸಮ್ಮತಿ ಲಕ್ಷಣಂ     ಎಂಬಂತಿರುವಾಗ ಈ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಲಿ ಎಂಬ ಜಿಜ್ಞಾಸೆಯಲ್ಲಿದ್ದಾರೆ ನಗರದ ನಾಗರಿಕರು. ಇನ್ನಾದರೂ ಯುಜಿಡಿ ಕಾಮಗಾರಿ ಗುತ್ತಿಗೆ ಸಂಸ್ಥೆಯವರು ಈ ಬಗ್ಗೆ ಗಮನ ಹರಿಸಲೆಂಬುವುದೆ ನಗರದ ಜನತೆಯ ಮನವಿಯಾಗಿದೆ. ಇವೆಲ್ಲವುಗಳ ನಡುವೆ ಸಂದರ್ಭಕ್ಕೆ ಅನುಗುಣವಾಗಿ ನಿರ್ಮಾಣವಾಗಿರುವ ದಾಂಡೇಲಿ ನಗರಕ್ಕೆ ಈ ಯುಜಿಡಿ ಯೋಜನೆ ಬೇಕಿತ್ತಾ ಎಂಬ ಪ್ರಶ್ನೆ ನಗರದ ಜನತೆಯನ್ನು ಕಾಡತೊಡಗಿರುವುದಂತೂ ಸತ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next