ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಈ ವರ್ಷ ಶಾಪಿಂಗ್ ಎಲ್ಲಿ? ಅನ್ನೋ ಯೋಚನೆಯನ್ನೂ ತರುತ್ತಿದೆಯೇ? ಅಂತ ಹಾಡಿಕೊಳ್ಳೋ ಶಾಪಿಂಗ್ ಪ್ರಿಯರಿಗೆ ಈ ಸುದ್ದಿ ಬೆಲ್ಲದಷ್ಟೇ ಸಿಹಿ. ಯಾಕಂದ್ರೆ, ವರ್ಷಾರಂಭದ ಖುಷಿಯನ್ನು ಹೆಚ್ಚಿಸಲು, ಬಝೊàನಿಫೈ ಸಂಸ್ಥೆ ವತಿಯಿಂದ “ಯುಗಾದಿ ಶಾಪಿಂಗ್ ಮೇಳ’ ನಡೆಯುತ್ತಿದ್ದು, ಒಂದೇ ಸೂರಿನಡಿಯಲ್ಲಿ ಎಲ್ಲ ವಸ್ತುಗಳೂ ದೊರೆಯಲಿವೆ.
ಕೊಯಮತ್ತೂರಿನ ರೇಷ್ಮೆ ಸೀರೆ, ಕಲಾಂಕಾರಿ ಸೀರೆ, ಕಾಟನ್ ಕುರ್ತಿ, ಡಿಸೈನರ್ ಕುರ್ತಿಗಳು, ಫುಲ್ಕಾರಿಯಿಂದ ಹಿಡಿದು ಬಂದಾನಿವರೆಗಿನ ವಸ್ತ್ರಗಳು ಇಲ್ಲಿವೆ. ಅಲಂಕಾರಿಕ ವಸ್ತುಗಳು, ಫ್ಯಾಶನ್ ಜ್ಯುವೆಲ್ಲರಿಗಳು, ಗೃಹಾಲಂಕಾರ ವಸ್ತುಗಳು ಪ್ರಮುಖವಾಗಿ ಲ್ಯಾಂಪ್‌ಶೇಡ್, ಮಧುಬನಿ ಪೇಂಟಿಂಗ್, ಇರಾನಿ ಕಾಪೆìಟ್‌ಗಳು ಮಾರಾಟಕ್ಕಿವೆ. ಸುಮಾರು 90ಕ್ಕೂ ಅಧಿಕ ಪಾಪ್ ಅಪ್ ಮಳಿಗೆಗಳಿದ್ದು, ಹಬ್ಬಕ್ಕೆ ಬೇಕಾದ ಎಲ್ಲ ವಸ್ತುಗಳು ಸಿಗಲಿವೆ. ವಾಹನ ಖರೀದಿ ಜೊತೆಗೆ ಆಟೋ ಎಕ್ಸ್‌ಪೋ ಕೂಡ ನಡೆಯಲಿದ್ದು, ಬೈಸಿಕಲ್, ಮೋಟಾರ್ ಸೈಕಲ್ ಹಾಗೂ ಕಾರುಗಳನ್ನು ಪ್ರದರ್ಶನಕ್ಕಿರಿಸಲಾಗಿದೆ.
ಎಲ್ಲಿ?: ಇಲಾನ್ ಕನ್ವೆನ್ಷನ್ ಹಾಲ್, ಬ್ರಿಗೇಡ್ ಮಿಲೇನಿಯಂ ಮುಂಭಾಗ, ಜೆಪಿ ನಗರ 7ನೇ ಹಂತ
ಯಾವಾಗ?: ಮಾ.10-11, ಬೆ.10.30-8
ಪ್ರವೇಶ: ಉಚಿತ
ಗೋ ಫಾರ್ ಗೋಮಿ ತೆನಿ ಸೀರೆ
“ಗೋಮಿ ತೆನಿ’ ಎನ್ನುವುದು ಉತ್ತರ ಕರ್ನಾಟಕದ ಕಡೆಯ ಮಹಿಳೆಯರು 12ನೇ ಶತಮಾನದಿಂದಲೇ ಉಡುತ್ತಿದ್ದ ಸೀರೆ. ಸಾಂಪ್ರದಾಯಿಕ ಮತ್ತು ನೈಸರ್ಗಿಕ ವಿಧಾನಗಳನ್ನು ಬಳಸಿ ತಯಾರಾಗುತ್ತಿದ್ದ ಈ ಸೀರೆಗಳು ಕರ್ನಾಟಕದ ಹೆಮ್ಮೆ. ಜೋಳದ ತೆನೆಯ ಚಿತ್ರಗಳನ್ನು ಸೀರೆಯ ಅಂಚಿನಲ್ಲಿ ಮೂಡಿಸಿ ಅದಕ್ಕೊಂದು ಗ್ರಾಮ್ಯ ಪರಂಪರೆಯ ಸ್ಪರ್ಶ ನೀಡುತ್ತಿದ್ದ ಈ ಸೀರೆಯನ್ನು ಮತ್ತೆ ಈಗಿನ ಕಾಲದವರಿಗೆ ಪರಿಚಯಿಸುವ ಕೆಲಸವನ್ನು ಮಾಡುತ್ತಿರುವವರು ಹೇಮಲತಾ ಜೈನ್. ಹಿಂದೆ ಯಾವ ಯಾವ ಕಚ್ಚಾವಸ್ತುಗಳನ್ನು ಬಳಸಿ, ಡೈಯಿಂಗ್ ತಂತ್ರಗಳನ್ನು ಬಳಸುತ್ತಿದ್ದರೋ ಅದನ್ನು ಗೊತ್ತು ಮಾಡಿಕೊಂಡು, ಹಳ್ಳಿಯ ನೇಕಾರರ ಸಹಯೋಗದಲ್ಲಿ ಆ ಸೀರೆಗಳ ತಯಾರಿಯಲ್ಲಿ ತೊಡಗಿದ್ದಾರೆ. ಆ ಸೀರೆಗಳ ಪ್ರದರ್ಶನ ಮತ್ತು ಮಾರಾಟ ನಗರದಲ್ಲಿ ನಡೆಯುತ್ತಿದೆ.
ಎಲ್ಲಿ?: ಶ್ರೀ ಭೂಮ, 17ನೇ ಕ್ರಾಸ್ ಮಲ್ಲೇಶ್ವರ
ಯಾವಾಗ?: ಮಾ.10, ಬೆಳಗ್ಗೆ 11- ಸಂಜೆ 7