Advertisement
ಯುಗಾದಿಯಿಂದ 9ನೇ ದಿನ ರಾಮನವಮಿ ಆಚರಿಸಲಾಗುವುದು.ಯುಗಾದಿ ಸತ್ಕಾರ್ಯಗಳಿಗೆ ಸೂಕ್ತ ದಿನ. ಈದಿನ ಸಾಡೇತೀನ ಮುಹೂರ್ತ ಇರುವುದರಿಂದಸೀಮಂತ, ನಾಮಕರಣ ಸೇರಿದಂತೆ ಯಾವುದೇಶುಭ ಕಾರ್ಯ ಮಾಡಬೇಕಾದರೂಪಂಚಾಂಗ ನೋಡಬೇಕಾಗಿಲ್ಲ. ಇಡೀ ದಿನ ಪ್ರಶಸ್ತವಾಗಿರುವುದು. ಭೂಮಿಪೂಜೆ, ಹೊಲ ಖರೀದಿ, ಕೃಷಿ ಚಟುವಟಿಕೆ ಆರಂಭ, ಸಾಮಗ್ರಿ ಖರೀದಿ, ಚಿನ್ನ ಖರೀದಿಯನ್ನು ಯುಗಾದಿಯಂದೇ ಮಾಡಲಾಗುತ್ತದೆ.
Related Articles
Advertisement
ಪಂಚಾಂಗ ಶ್ರವಣ :
ಯುಗಾದಿಯಂದು ಹೊಸ ಪಂಚಾಂಗ ಪೂಜೆನಡೆಯುವುದು. ಸಂಜೆ ಪಂಚಾಂಗ ಶ್ರವಣ ಮಾಡುವುದು ಹಿರಿಯರ ಸಂಪ್ರದಾಯ. ಪಂಚಾಂಗ ಶ್ರವಣ ಮಾಡಿದರೆ ಪುಣ್ಯ ಲಭಿಸುತ್ತದೆ ಎಂಬುದು ನಂಬಿಕೆ. ಹೊಸ ಸಂವತ್ಸರದಲ್ಲಿ ಮಳೆ-ಬೆಳೆ, ತೇಜಿ-ಮಂದಿ ಸಂಗತಿಗಳು, ರಾಶಿ ಫಲಗಳ ಕುರಿತು ಗುರುಗಳು ಮಾಡುವಪಂಚಾಂಗ ಪಠಣವನ್ನು ಕೇಳುವುದು ವಾಡಿಕೆ. ಯುಗಾದಿಯಿಂದ ಹೊಸಪಂಚಾಂಗ ಬಳಕೆ ಆರಂಭವಾಗುತ್ತದೆ. ದೇವಸ್ಥಾನಗಳಲ್ಲಿ ಯುಗಾದಿಯಂದುವಿಶೇಷ ಪೂಜೆ ಮಾಡಲಾಗುತ್ತದೆ. ಭಕ್ತಾದಿಗಳು ಹೊಸ ವರ್ಷದ ಒಳಿತಿಗಾಗಿ ದೇವರಲ್ಲಿ ಕೋರುತ್ತಾರೆ.
ಗ್ರಾಮೀಣರ ಯುಗಾದಿ :
ಗ್ರಾಮೀಣ ಭಾಗದಲ್ಲಿ ಯುಗಾದಿಗೆ ಮಹತ್ವವಿದೆ. ಯುಗಾದಿಯಿಂದ ಹೊಸ ವರ್ಷದ ಹೊಸಲೆಕ್ಕ ಆರಂಭವಾಗುತ್ತದೆ. ನಗರಗಳಲ್ಲಿ ನಡೆಯುವವ್ಯಾಪಾರ-ವಹಿವಾಟಿನಲ್ಲಿ ದೀಪಾವಳಿಗೆ ಹೊಸ ಲೆಕ್ಕ ಆರಂಭಗೊಂಡರೆ ಹಳ್ಳಿಪ್ರದೇಶದಲ್ಲಿ ಯುಗಾದಿಗೆ ಹೊಸ ಲೆಕ್ಕ. ಉಗಾದಿ ಉದ್ರಿ ಚುಕ್ತಾ ಮಾಡಿ ಹೊಸಲೆಕ್ಕ ಶುರುವಾಗುವುದು ಇಂದಿನಿಂದ. ಕೈಗಡ, ಅಂಗಡಿ, ಮುಂಗಟ್ಟು ಉದ್ರಿ ವ್ಯವಹಾರ ಕೊನೆಗೊಳಿಸಿ ಹೊಸ ವ್ಯವಹಾರ ಆರಂಭಗೊಳಿಸಲಾಗುತ್ತದೆ.
ಕೃಷಿ ಚಟುವಟಿಕೆಗಳು ಕೂಡ ಶುಭದಿನದಿಂದ ಆರಂಭಗೊಳ್ಳುತ್ತವೆ. ರಾಶಿ ಮುಗಿದ ನಂತರ ಮುಂದಿನ ಪೀಕಿಗೆ ಭೂಮಿಯನ್ನು ಹದಗೊಳಿಸುವ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಹೊಲಗಳನ್ನು ಉತ್ತಿ ಬಿತ್ತಲು ರೈತರಿಗೆ ಕೊಡುವವರೂಇದೇ ದಿನದಿಂದ ವ್ಯವಹಾರ ಆರಂಭಿಸುತ್ತಾರೆ. ಯುಗಾದಿಯ ಸಂಜೆ ಹೊಲದಮಾಲೀಕರು, ಹೊಲ ಮಾಡುವ ರೈತರು ಹಾಗೂ ಹಿರಿಯರು ಸೇರಿ ಇಂತಿಷ್ಟುವರ್ಷ, ಇಂತಿಷ್ಟು ಪ್ರಮಾಣದ ಪೀಕು (ಧಾನ್ಯ ಇತ್ಯಾದಿ) ನೀಡುವ ಕರಾರು ಮಾಡಿಹೊಲ ರೈತರ ಸುಪರ್ದಿಗೆ ಒಪ್ಪಿಸುತ್ತಾರೆ. ಹೊಲ, ಗದ್ದೆಗಳಿಗೆ ತೆರಳಿ ಭೂ ತಾಯಿಗೆಪೂಜೆ ಸಲ್ಲಿಸುತ್ತಾರೆ. ಗ್ರಾಮದೇವತೆಗೆ ಪೂಜೆ ಸಲ್ಲಿಸಿ, ಮುಂದಿನ ವರ್ಷ ಸಮೃದ್ಧ ಮಳೆ, ಬೆಳೆ ನೀಡುವಂತೆ ಕೋರುತ್ತಾರೆ. ನವದಂಪತಿಗಳು ಪತ್ನಿಯ ತವರಿಗೆಹೋಗಿ ಹಿರಿಯರ ಆಶೀರ್ವಾದ ಪಡೆಯುತ್ತಾರೆ. ಮನೆಯಲ್ಲಿ ನವವಿವಾಹಿತರಊಟೋಪಚಾರ ನಡೆಯುತ್ತದೆ. ಅಲ್ಲದೇ ಮನೆಯ ಹಿರಿಯರು ಉಡುಗೊರೆ ಕೊಟ್ಟು, ನವದಂಪತಿಯನ್ನು ಆಶೀರ್ವದಿಸುತ್ತಾರೆ.