Advertisement

ಉದ್ಯಾವರ : ಹೆದ್ದಾರಿಯಲ್ಲಿ  ಅಪಾಯಕಾರಿ ಗುಂಡಿ

11:43 AM Aug 25, 2018 | |

ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಗ್ಯಾಸ್‌ ಬಂಕ್‌ ಎದುರುಗಡೆ ಗುಂಡಿ ಕಂಡು ಬರುತ್ತಿದ್ದು, ದ್ವಿಚಕ್ರ ಸವಾರರ ಸಹಿತ ಇತರೇ ವಾಹನ ಚಾಲಕರು ಅಪಾಯವನ್ನು ಎದುರಿಸುವಂತಾಗಿದೆ.ತುಸು ಆಳವಾದ ಹೊಂಡ ಇದಾಗಿದ್ದು, ಹೆದ್ದಾರಿಯ ವಿಭಾಜಕದ ಪಕ್ಕದಲ್ಲಿಯೇ ಇದ್ದು ವಾಹನ ಸವಾರರು ಸರಿಯಾಗಿ ಲೆಕ್ಕಿಸದೆ ಅಪಾಯಕ್ಕೀಡಾಗುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.

Advertisement

ಮಳೆ ಬಂದ ಸಂದರ್ಭ ಈ ಗುಂಡಿಯಲ್ಲಿ ನೀರು ನಿಂತು ರಸ್ತೆ ಯಾವುದು ಹೊಂಡ ಯಾವುದು ಎಂದು ತಿಳಿಯದ ಪರಿಸ್ಥಿತಿ ಇದ್ದು, ಕತ್ತಲಾಗುತ್ತಿದ್ದಂತೆಯೇ ಈ ಭಾಗದಲ್ಲಿ ಸಂಚಾರವು ದುಸ್ತರವಾಗುತ್ತಿದೆ. ಕಳೆದ ಸುಮಾರು 25 ದಿನಗಳಿಂದಲೂ ಈ ಹೆದ್ದಾರಿ ಗುಂಡಿಯು ಬಾಯ್ದೆರೆದಿದ್ದು, ಆ.23ರ ರಾತ್ರಿ ಓರ್ವ ದ್ವಿಚಕ್ರ ಸವಾರ  ಈ ಗುಂಡಿಗೆ ಬಿದ್ದಿದ್ದು ತೀವ್ರ ತರಹದ ಗಾಯಗೊಂಡು ಉಡುಪಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು.

ಇದೀಗ ಅಪಾಯವನ್ನು ತಡೆಯುವ ನಿಟ್ಟಿನಲ್ಲಿ ಬ್ಯಾರಿಕೇಡನ್ನು ಹೆದ್ದಾರಿ ನಡುವೆ ಇರಿಸಲಾಗಿದ್ದು, ಸ್ವಲ್ಪಮಟ್ಟಿನ ನಿರಾಳತೆ ಕಂಡುಬರುತ್ತದೆ. ಇಷ್ಟೆಲ್ಲಾ ಅಪಾಯಕಾರಿ ಸನ್ನಿವೇಶ ಹೆದ್ದಾರಿಯಲ್ಲಿ ನಿರ್ಮಾಣವಾಗಿದ್ದರೂ ಸಂಬಂಧ ಪಟ್ಟ ಇಲಾಖೆಯು ನಿರ್ವಹಣೆಯನ್ನು ಮಾಡದೆ ಇನ್ನಷ್ಟು ಅಪಾಯವನ್ನು ನಿತ್ಯ ಸವಾರರು ಎದುರಿಸುವಂತಾಗಿದೆ.
ಇಲ್ಲಿನ ಗುಂಡಿ ಸಹಿತ ಹೆದ್ದಾರಿಯ ಇತರೆಡೆಗಳಲ್ಲಿಯೂ ಕಂಡು ಬರುವ ಗುಂಡಿಗಳನ್ನು ಸಂಬಂಧಪಟ್ಟ ಇಲಾಖೆ ಇನ್ನಾದರೂ ಎಚ್ಚೆತ್ತು ಸರಿಪಡಿಸಿ ವಾಹನ ಸವಾರರ ಸುಗಮ ರಸ್ತೆ ಸಂಚಾರಕ್ಕೆ  ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next