ಕಟಪಾಡಿ: ಉದ್ಯಾವರ ಗ್ರಾಮ ಪಂಚಾಯತ್ ಶುಕ್ರವಾರ ಗ್ರಾಮಸ್ಥರು ಬೀಗ ಹಾಕಿದ ಘಟನೆ ಬಗ್ಗೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ, ತಾ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಾತುಕತೆ ನಡೆಸಿದರು.
ಕಚೇರಿ ತೆರೆಯಲು ಗ್ರಾಮಸ್ಥರು ನಿರಾಕರಿಸಿದ್ದು, ಜಿಲ್ಲಾಧಿಕಾರಿ ಸ್ಥಳಕ್ಕಾಗಮಿಸುವಂತೆ ಪಟ್ಟು ಹಿಡಿದಿದ್ದಾರೆ. ಸಾರ್ವಜನಿಕ ವಿರೋಧಿ ಕೆಲಸ ಮಾಡಸಿದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಆಗ್ರಹ ನಡೆಸಿದರು.
ಇದನ್ನೂ ಓದಿ:ಪಶ್ಚಿಮಬಂಗಾಳ: 100 ಗ್ರಾಂ ಕೊಕೇನ್ ಸಹಿತ ಬಿಜೆಪಿ ಯುವಮೋರ್ಚಾ ನಾಯಕಿ ಬಂಧನ
ಸಾರ್ವಜನಿಕರ, ಗ್ರಾಮಸಭೆಯ, ಪಂಚಾಯತಿ ಸಭೆಗಳ, ನಿರ್ಣಯಕ್ಕೂ ಮೀರಿ ಸಾರ್ವಜನಿಕ ವಿರೋಧಿ ಹಾಗೂ ಪರಿಸರಕ್ಕೆ ಮಾರಕವಾದ ಉದ್ಯಮಗಳಿಗೆ ಆಡಳಿತಾಧಿಕಾರಿ ಪರವಾನಿಗೆ ನೀಡಿರುವುದನ್ನು ವಿರೋಧಿಸಿ ಸಾರ್ವಜನಿಕರು ಶುಕ್ರವಾರ ಸಂಜೆ ಗ್ರಾಮ ಪಂಚಾಯತ್ ಕಚೇರಿಗೆ ಬೀಗ ಜಡಿದು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.
ಇದನ್ನೂ ಓದಿ: ಮಂಗಳೂರು ವಿ.ನಿಲ್ದಾಣ: ಟ್ರಾಲಿ ಬ್ಯಾಗ್ ಚಕ್ರದಲ್ಲಿ 19 ಲಕ್ಷ ರೂ. ಮೌಲ್ಯದ ಚಿನ್ನ ಸಾಗಾಟ