Advertisement
ನಗರಸಭೆಯ 35 ವಾರ್ಡ್‌ಗಳಿಗೆ ಮಳೆಗಾಲದಲ್ಲಿ ತುರ್ತು ಸ್ಪಂದನೆಗೆ ಅನುಕೂಲವಾಗುವಂತೆ ಆ್ಯಪ್ ಸಿದ್ಧ ಪಡಿಸಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಆ್ಯಪ್ ಪರಿಶೀಲನೆ ನಡೆಸಲಾಗಿದೆ. ಮುಂದಿನ 15 ದಿನದಲ್ಲಿ ನಗರಸಭೆಯ ಜನರು ಗೂಗಲ್ ಪ್ಲೇ ಸ್ಟೋರಿನಿಂದ Udupihelp.com ಆ್ಯಪ್ ಡೌನ್‌ಲೋಡ್ ಮಾಡಬಹುದಾಗಿದೆ.
ಮರ ಬಿದ್ದು ಮನೆ ಹಾನಿ, ವಿದ್ಯುತ್ ಕಂಬ ಹಾನಿ ಸೇರಿದಂತೆ ವಿವಿಧ ದೂರಗಳನ್ನು ಈ ಆ್ಯಪ್ ಮುಖಾಂತರ ದಾಖಲು ಮಾಡ ಬೇಕು. ತಮ್ಮ ಮೊಬೈಲ್ ಜಿಪಿಆರ್‌ಎಸ್ ಮೂಲಕ ಸ್ಥಳದ ಲೈವ್ ಲೊಕೇಶನ್ ಹಾಗೂ ಫೋಟೋವನ್ನು ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿ ವಿವರ ನೀಡಬೇಕು. 6 ಗಂಟೆಯಲ್ಲಿ ಪರಿಹಾರ
ದೂರು ದಾಖಲಿಸಿದ ಆರು ಗಂಟೆಯ ಒಳಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದನೆ ನೀಡಲಿದ್ದಾರೆ. ಅಧಿಕಾರಿ ಗಳು ಕೆಲಸವಾದ ತತ್‌ಕ್ಷಣ ಸ್ಥಳದ ಫೋಟೋ ಆ್ಯಪ್‌ನಲ್ಲಿ ಆಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ. ಇದರಿಂದಾಗಿ ಸಂಬಂಧಪಟ್ಟ ಅಧಿಕಾರಿ ಗಳು ಇನ್ನಷ್ಟು ಜವಾಬ್ದಾರಿಯುತವಾಗಿ ಕೆಲಸ ಮಾಡಲಿದ್ದಾರೆ.
Related Articles
ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ Udupihelp.com ಆ್ಯಪ್ ಬಳಸಿಕೊಂಡು ದೂರು ಇತ್ಯರ್ಥ ಮಾಡುವ ಪ್ರಯತ್ನ ಕೈಗೊಂಡಿದೆ. ನಗರಸಭೆ ವ್ಯಾಪ್ತಿಯಲ್ಲಿ ಯಶಸ್ವಿಯಾದರೆ ಆ್ಯಪ್‌ನ್ನು ಮುಂದಿನ ದಿನದಲ್ಲಿ ಜಿಲ್ಲೆಗೆ ವಿಸ್ತರಿಸುವ ಗುರಿಯಿದೆ.
Advertisement
ಹಳೆ ಪದ್ಧತಿಯಿಂದ ಮುಕ್ತಿನಗರಸಭೆ ವ್ಯಾಪಿಯ ಜನರು ಮಳೆಗಾಲದ ಹಾನಿ ದೂರುಗಳನ್ನು ದಾಖಲಿಸಲು ತಾಲೂಕು ಕಚೇರಿಯನ್ನು ಅವಲಂಬಿಸಬೇಕಾಗಿತ್ತು. ಕಚೇರಿಯ ದೂರವಾಣಿ ಸಂಖ್ಯೆ ದುರಸ್ತಿಯಾಗದೆ ದೂರು ದಾಖಲು ಮಾಡಲು ವಾರಗಟ್ಟಲೆ ಜನರು ಕಾದಿರುವುದೂ ಇದೆ. ಎನ್‌ಡಿಆರ್‌ಎಫ್ ತಂಡ
ಪ್ರತಿವರ್ಷ ಮಳೆಗಾಲದಲ್ಲಿ ತುರ್ತು ಸೇವೆಗಾಗಿ ಎನ್‌ಡಿಆರ್‌ಎಫ್ ತಂಡ ಗುಂಟೂರಿನಿಂದ ಉಡುಪಿಗೆ ಧಾವಿಸಬೇಕಾಗಿತ್ತು. ಆದರೆ ಈ ಬಾರಿ ಉಡುಪಿ ಹಾಗೂ ದ.ಕ. ಜಿಲ್ಲೆಗೆ ಅನುಕೂಲವಾಗುವಂತೆ ಎನ್‌ಡಿಆರ್‌ಎಫ್ ತಂಡ ಸುರತ್ಕಲ್‌ಗೆ ಆಗಮಿಸಲಿದ್ದು ಈಗಾಗಲೇ ಮಂಗಳೂರಿಗೆ ಆಗಮಿಸಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ. ಜಿಲ್ಲೆಗೆ ವಿಸ್ತರಿಸುವ ಗುರಿ
ಉಡುಪಿ ಹೆಲ್ಫ್ ಡಾಟ್ ಕಾಂ (Udupihelp.com) ಆ್ಯಪ್ ಮೂಲಕ ಪ್ರಾಯೋಗಿಕವಾಗಿ ನಗರಸಭೆ ವ್ಯಾಪ್ತಿಯಲ್ಲಿ ಆಳವಡಿಸಲಾಗುತ್ತದೆ. ಮುಂದಿನ ದಿನದಲ್ಲಿ ಜಿಲ್ಲೆಗೆ ವಿಸ್ತರಿಸುವ ಗುರಿಯಿದೆ.
ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾಧಿಕಾರಿ. ದೂರು ದಾಖಲಾದ ತತ್‌ಕ್ಷಣ ಸ್ಪಂದನೆ
ಮಳೆಗಾಲದ ದೂರುಗಳಿಗೆ ತುರ್ತು ಸ್ಪಂದನೆ ನೀಡಲು ಜಿಲ್ಲಾಡಳಿತದಿಂದ ಆ್ಯಪ್ ಜಾರಿಗೆ ತರುತ್ತಿರುವುದು ಶ್ಲಾಘನೀಯ. ದೂರು ದಾಖಲಾದ ತತ್‌ಕ್ಷಣ ಸ್ಪಂದಿಸುವಂತೆ ನೋಡಿಕೊಳ್ಳಬೇಕಾಗಿದೆ.
ರಾಘವೇಂದ್ರ ಭಟ್, ಕಡಿಯಾಳಿ.