Advertisement

ಉಡುಪಿ: ಯಕ್ಷಗಾನ ಕಲಾರಂಗದ ವಾರ್ಷಿಕ ಪ್ರಶಸ್ತಿ ಪ್ರದಾನ

12:39 AM Nov 18, 2019 | Sriram |

ಉಡುಪಿ: ಯಕ್ಷಗಾನ ಕಲಾರಂಗ ಕಲಾವಿದನ ಎರಡು ಮುಖಗಳನ್ನು ಜಗತ್ತಿಗೆ ಪರಿಚಯಿಸು ತ್ತಿದೆ. ಕಲಾವಿದನಿಗೆ ಬಣ್ಣ ಹಚ್ಚಲು ಅವಕಾಶ ನೀಡುವುದರ ಜತೆಗೆ ಅವರಿಗೆ ಪ್ರಶಸ್ತಿ ನೀಡುವ ಕೆಲಸ ಮಾಡುತ್ತಿದೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ತಿಳಿಸಿದರು.

Advertisement

ಶ್ರೀಕೃಷ್ಣ ಮಠ, ಪರ್ಯಾಯ ಪಲಿಮಾರು ಮಠ, ಯಕ್ಷಗಾನ ಕಲಾ ರಂಗದ ಸಹಯೋಗದಲ್ಲಿ ರವಿವಾರ ರಾಜಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ರಿಗೆ ವಾರ್ಷಿಕ ಪ್ರಶಸ್ತಿ ಪದಾನ ಮಾಡಿ ಅವರು ಮಾತನಾಡಿದರು.
ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಡಾ| ಜಿ. ಶಂಕರ್‌ ಅವರು “ಕಲಾಂತರಂಗ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಸಿಂಡಿಕೇಟ್‌ ಬ್ಯಾಂಕ್‌ ಮಹಾ ಪ್ರಬಂಧಕ ಭಾಸ್ಕರ ಹಂದೆ, ಕರ್ಣಾಟಕ ಬ್ಯಾಂಕಿನ ಮಹಾ ಪ್ರಬಂಧಕ ಚಂದ್ರಶೇಖರ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್‌ ರಾವ್‌ ಸ್ವಾಗತಿಸಿ, ಕಾರ್ಯದರ್ಶಿ ಮುರಲಿ ಕಡೆಕಾರ್‌ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಯಕ್ಷಗಾನ ಪ್ರದರ್ಶನಗೊಂಡಿತು.

ಪ್ರಶಸ್ತಿ ಪ್ರದಾನ
ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಅವರು “ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ’ ಯನ್ನು ಮುಂಬಯಿ ಪದವೀಧರ ಯಕ್ಷಗಾನ ಸಮಿತಿಯ ಅಧ್ಯಕ್ಷ ಎಚ್‌. ಬಿ.ಎಲ್‌. ರಾವ್‌, ಗಣ್ಯ ವ್ಯಕ್ತಿಗಳ ಸ್ಮರಣಾರ್ಥ ಸ್ಥಾಪಿಸಲಾದ “ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ಪೊಲ್ಯ ಲಕ್ಷ್ಮೀನಾರಾಯಣ, ಚೇರ್ಕಾಡಿ ಮಂಜುನಾಥ ಪ್ರಭು, ಪೆರುವಾಯಿ ನಾರಾಯಣ ಭಟ್‌, ಕೆ. ನಾರಾಯಣ ಪೂಜಾರಿ ಉಜಿರೆ, ಕೆ.ಕೆ. ಅಣ್ಣಿ ಗೌಡ‌ ಅರಸಿನಮಕ್ಕಿ, ಶೀನ ನಾಯ್ಕ ಬ್ರಹೇರಿ, ಕೆ.ಪಿ. ಹೆಗಡೆ ಕೋಟ, ನಿಡ್ಲೆ ಗೋವಿಂದ ಭಟ್‌, ಅನಂತ ಹೆಗಡೆ ನಿಟ್ಟೂರು, ಆಜ್ರಿ ಗೋಪಾಲ ಗಾಣಿಗ, ಮೂರೂರು ವಿಷ್ಣು ಭಟ್‌ ಎಂ., ಶ್ರೀಧರ ಹೆಬ್ಟಾರ ಬ್ರಹ್ಮಾವರ, ಮಹಾಬಲ ದೇವಾಡಿಗ ಕಮಲಶಿಲೆ, ಪಡ್ರೆ ಕುಮಾರು ಕಟೀಲು ಹಾಗೂ ಗಣ್ಯ ವ್ಯಕ್ತಿಗಳ ಗೌರವಾರ್ಥ ಸ್ಥಾಪಿಸಲಾದ “ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ತೊಡಿಕಾನ ವಿಶ್ವನಾಥ ಗೌಡ, ನಾಗಪ್ಪ ಗೌಡ ಗುಣವಂತೆ, ಲಕ್ಷ್ಮಣ ಕೋಟ್ಯಾನ್‌ ಸುಂಕದಕಟ್ಟೆ, ಯಕ್ಷಚೇತನ ಪ್ರಶಸ್ತಿಯನ್ನು ರಮೇಶ ರಾವ್‌ ಕೋಟ ಅವರಿಗೆ ಪ್ರದಾನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next