Advertisement

Udupi ವಾರಾಂತ್ಯ: ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ದಂಡು

11:41 PM Nov 26, 2023 | Team Udayavani |

ಮಲ್ಪೆ: ವಾರಾಂತ್ಯದ ಹಿನ್ನೆಲೆಯಲ್ಲಿ ಮಲ್ಪೆ ಬೀಚ್‌ನಲ್ಲಿ ರವಿವಾರ ಪ್ರವಾಸಿಗರ ದಂಡೇ ನೆರೆದಿತ್ತು.

Advertisement

ಶನಿವಾರ ಮತ್ತು ರವಿವಾರ ಶಾಲಾ ಮಕ್ಕಳ ಪ್ರವಾಸದ ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಬೀಚ್‌ ಕಡೆಗೆ ಬಂದಿದ್ದವು. ರಾಜ್ಯದ ವಿವಿಧ ಜಿಲ್ಲೆಗಳಿಂದ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಆಗಮಿಸಿದ್ದರು.

ಬೆಂಗಳೂರು, ಮೈಸೂರು ಭಾಗದಿಂದ ಹೆಚ್ಚಿನ ಪ್ರವಾಸಿಗರು ಆಗಮಿಸಿದ್ದು, ರವಿವಾರ ಮಧ್ಯಾಹ್ನ ಬಳಿಕ ಪ್ರವಾಸಿಗರ ಜತೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಸಾಯಂಕಾಲ ಇಲ್ಲಿನ ಸೂರ್ಯಾಸ್ತದ ಸೊಬಗು ವೀಕ್ಷಿಸಿ ಸಂಭ್ರಮಿಸಿದರು.

ಕೆಲವರು ಸಮುದ್ರಕ್ಕಿಳಿದು ಸ್ನಾನ, ನೀರಾಟದಲ್ಲಿ ತೊಡಗಿದರು. ಜಲಸಾಹಸ ಕ್ರೀಡೆ, ಪ್ರವಾಸಿ ಬೋಟಿನ ಮೇಲೆ ಜಾಲಿ ರೈಡ್‌ ಮಾಡಿ ಸಂತಸಪಟ್ಟರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next