Advertisement

Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು

03:11 PM Dec 19, 2024 | Team Udayavani |

ಉಡುಪಿ: ನಗರ ಭಾಗದಲ್ಲಿರುವ ಕೆಲವೊಂದು ಸರಕಾರಿ ಕಟ್ಟಡಗಳು ಪೂರ್ಣಗೊಂಡಿದ್ದರೂ ಉದ್ಘಾಟನೆ ಭಾಗ್ಯ ಮಾತ್ರ ಇನ್ನೂ ಸಿಗಲಿಲ್ಲ.

Advertisement

ಜಿಲ್ಲಾಸ್ಪತ್ರೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಈಗಾಗಲೇ ಶೇ.90ರಷ್ಟು ಪೂರ್ಣಗೊಂಡಿದೆ. 115 ಕೋಟಿ ರೂ. ವೆಚ್ಚದಲ್ಲಿ 250 ಬೆಡ್‌ಗಳ ಆಸ್ಪತ್ರೆ ಇದಾಗಿದೆ. ಹೊಸ ಆಸ್ಪತ್ರೆಗೆ ಅಗತ್ಯವಿರುವ ಉಪಕರಣಗಳು, ಒಳಾಂಗಣ ಹಾಗೂ ಇತರ ಸೌಲಭ್ಯಗಳಿಗೆ ಅನುದಾನದ ಅಗತ್ಯವಿದೆ. ವೈದ್ಯರು, ತಜ್ಞರು, ನಾನ್‌ ಮೆಡಿಕಲ್‌ ಸಿಬಂದಿ ನೇಮಕದ ಬಗ್ಗೆಯೂ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದ್ದು, ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಈ ವರ್ಷದ ಜೂನ್‌ ತಿಂಗಳೊಳಗೆ ಉದ್ಘಾಟಿಸುವ ಗುರಿ ಹೊಂದಲಾಗಿತ್ತು. ಅನಂತರ ಅದು ವರ್ಷಾಂತ್ಯಕ್ಕೆ ವಿಸ್ತರಣೆಯಾಯಿತು. ಪ್ರಸ್ತುತ ಈ ವರ್ಷಾಂತ್ಯವಾಗುತ್ತಿದ್ದು, ಹೊಸ ಕಟ್ಟಡದ ಯಾವಾಗ ಉದ್ಘಾಟನೆಯಾಗುತ್ತದೆ ಎಂಬ ಕುತೂಹಲ ಜನರಲ್ಲಿದೆ.

ಜಿಲ್ಲಾಸ್ಪತ್ರೆ ಕಟ್ಟಡ

ಗಣಿ ಇಲಾಖೆ ಕಟ್ಟಡ
ದೊಡ್ಡಣಗುಡ್ಡೆಯ ಚಕ್ರತೀರ್ಥದಲ್ಲಿ 2 ವರ್ಷಗಳ ಹಿಂದೆ ಸುಮಾರು 2 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಟ್ಟಡ ನಿರ್ಮಾಣ ಸಂಪೂರ್ಣಗೊಂಡಿದ್ದರೂ ಇದುವರೆಗೂ ಉದ್ಘಾಟನೆಯಾಗಿಲ್ಲ. ಕಟ್ಟಡ ಸಂಪೂರ್ಣಗೊಂಡು ಬಣ್ಣ ಬಳಿದು ಕಾಂಪೌಂಡ್‌ಗಳನ್ನೂ ಇಲ್ಲಿ ನಿರ್ಮಾಣ ಮಾಡಲಾಗಿದೆ. ಸುತ್ತಲೂ ಪೊದೆಗಳು ಬೆಳೆದುನಿಂತಿದ್ದು, ಗಣಿ ಇಲಾಖೆಯ ಸಚಿವರ ಆಗಮನಕ್ಕೆ ಕಾಯುವಂತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next