Advertisement
ಸ್ಥಳೀಯರಿಂದ ಹಿಡಿದು ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದ ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ಪ್ರಸಿದ್ಧ ಕಲಾವಿದರ ಯಕ್ಷಗಾನ, ನೃತ್ಯ ರೂಪಕ, ನೃತ್ಯ ವೈವಿಧ್ಯ, ಹರಿಕಥೆ ಸಹಿತ ಕಲೆ ಮತ್ತು ಸಂಸ್ಕೃತಿಯ ಕಾರ್ಯಕ್ರಮಗಳಿಗೆ ಉತ್ತಮ ಸ್ಪಂದನೆ ದೊರೆತಿದೆ.
Related Articles
ಅ. 11ರಂದು ಮಹಾನವಮಿಯಂದು ಸಂಜೆ 6.30ಕ್ಕೆ ಕಲಾಮೃತ ಮಂಗಳೂರು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8 ಕ್ಕೆ ಹಿನ್ನೆಲೆ ಗಾಯಕ ಅಜಯ್ ವಾರಿಯರ್ ಬೆಂಗಳೂರು ಮತ್ತು ತಂಡದಿಂದ ಸಂಗೀತ ರಸ ಸಂಜೆ ಇರಲಿದೆ.
Advertisement
ಮನರಂಜಿಸಿದ ಹೆಣ್ಮಕ್ಕಳ ಹುಲಿ ಕುಣಿತ ಮತ್ತು ಕುಸ್ತಿ ಸ್ಪರ್ಧೆಪ್ರಥಮ ಬಾರಿಗೆ ನಡೆದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಕುಸ್ತಿ ಸ್ಪರ್ಧೆಯು ಕರಾವಳಿಯ ಇತಿಹಾಸದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ, ಸಾರ್ವಜನಿಕರಿಗೆ ಚಿತ್ರಕಲಾ ಸ್ಪರ್ಧೆ, ಹೆಣ್ಣು ಮಕ್ಕಳ ಹುಲಿ ಕುಣಿತ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಸಾಮೂಹಿಕ ದಾಂಡಿಯಾ ನೃತ್ಯ, ವಿಸ್ಮಯ ಜಾದೂ, ಶತವೀಣಾವಲ್ಲರಿ ಹೆಚ್ಚಿನ ಜನಾಕರ್ಷಣೆಗೆ ಕಾರಣವಾಗಿದೆ. ಇಂದಿನ ಕಾರ್ಯಕ್ರಮ
ಅ. 10ರಂದು ಬೆಳಿಗ್ಗೆ 9 ಗಂಟೆಗೆ ನಿತ್ಯ ಚಂಡಿಕಾಹೋಮ, 9.30ರಿಂದ ಭಜನೆ, 12 ಗಂಟೆಗೆ ನವದುರ್ಗೆಯರು, ಶಾರದಾ ಮಾತೆಗೆೆ ಮಹಾ ಮಂಗ ಳಾರತಿ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ. ಸಂಜೆ 5 ಕ್ಕೆ ಭಾಗ್ಯಶ್ರೀ ಐತಾಳ್ ಅವರ ಪ್ರವಚನ, 5.45ರಿಂದ 6.15ರವರೆಗೆ ಸಾಮೂಹಿಕ ಕುಂಕುಮಾರ್ಚನೆ, ಸಂಜೆ 6.30ರಿಂದ 7.30ರ ತನಕ ಮಂಗ ಳೂರಿನ ಕೀರ್ತನಕಾರ ಡಾ| ಎಸ್. ಪಿ. ಗುರುದಾಸ್ ಅವರಿಂದ “ಲಕ್ಷ್ಮೀ ಕಲ್ಯಾಣ’ ಹರಿಕಥೆ, 7.30ರಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ನಡೆಯಲಿದೆ.