Advertisement

Udupi; ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವ ಸಂಪನ್ನ

12:47 AM Feb 01, 2024 | Team Udayavani |

ಉಡುಪಿ: ಕಿದಿಯೂರು ಹೊಟೇಲ್ಸ್‌ನ ಕಾರಣಿಕ ಶ್ರೀ ನಾಗ ಸಾನ್ನಿಧ್ಯದಲ್ಲಿ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವು ಧಾರ್ಮಿಕ ವಿಧಿ ವಿಧಾನ, ನಾಗದೇವರ ದರ್ಶನ ಸೇವೆಯ ಮೂಲಕ ಬುಧವಾರ ಸಂಪನ್ನಗೊಂಡಿತು.

Advertisement

ಜ. 26ರ ಬೆಳಗ್ಗೆ ಶ್ರೀ ನಾಗ ಸಾನ್ನಿಧ್ಯದಲ್ಲಿ ಸಾಮೂಹಿಕ ಪ್ರಾರ್ಥನೆ, ವಿವಿಧ ಹೋಮ ಹವನಾದಿಗಳು ನಡೆದು ಜ. 31ರಂದು ಅಷ್ಟೋತ್ತರ ಶತಕಲಶಾಭಿಷೇಕ ಸಹಿತ ಬ್ರಹ್ಮಕುಂಭಾಭಿಷೇಕ, ಮಹಾಪೂಜೆ, ಹಾಲಿಟ್ಟು ಸೇವೆ, ಗಂಗಾರತಿ ಯ ಅನಂತರ ಅಷ್ಟಪವಿತ್ರ ನಾಗಮಂಡ ಲೋತ್ಸವ ನೆರವೇರಿತು.

ಕಿದಿಯೂರು ಹೊಟೇಲ್ಸ್‌ನ ಎಂಡಿ ಭುವನೇಂದ್ರ ಕಿದಿಯೂರು ಅವರ ಸೇವಾರ್ಥ ನಾಗಮಂಡಲೋತ್ಸವ ಆಯೋಜನ ಸಮಿತಿ ಗೌರವಾಧ್ಯಕ್ಷ ಡಾ| ಜಿ. ಶಂಕರ್‌ ನೇತೃತ್ವದಲ್ಲಿ ಜೋತಿಷ ವಿದ್ವಾನ್‌ ವೇ|ಮೂ| ಕಬಿಯಾಡಿ ಜಯರಾಮ ಆಚಾರ್ಯ ಅವರ ಮಾರ್ಗದರ್ಶನದಲ್ಲಿ ಶ್ರೀ ನಾಗದೇವರಿಗೆ ನೂತನವಾಗಿ ನಿರ್ಮಿಸಲಾದ ಭವ್ಯ ರಜತ ಮಂಟಪ, ರಜತ ಕವಚಗಳ ಮತ್ತು ಸ್ವರ್ಣಲೇಪಿತ ರಜತ ಪ್ರಭಾವಳಿಯಲ್ಲಿ ರಜತ ಬಲಿಮೂರ್ತಿಯ ಸಮರ್ಪಣೆ ನಡೆಯಿತು.

ವೇ|ಮೂ| ರಮಾನಂದ ಭಟ್‌ ಬೆಳ್ಳರ್ಪಾಡಿ, ವೇ|ಮೂ| ಮುರಳೀಧರ ಭಟ್‌ ಅಲೆವೂರು ಅವರ ನಾಗ ದರ್ಶನದೊಂದಿಗೆ ಮುದ್ದೂರು ವೈದ್ಯನಾಥೇಶ್ವರ ಡಮರುಗ ಬಳಗದ ಕೃಷ್ಣಪ್ರಸಾದ್‌ ವೈದ್ಯರ ನೇತೃತ್ವದ ಬಾಲಕೃಷ್ಣ ವೈದ್ಯ, ನಟರಾಜ ವೈದ್ಯರ ನಾಗಕನ್ನಿಕಾ ನರ್ತನದೊಂದಿಗೆ ನೆರವೇರಿತು.

ಶ್ರೀ ನಾಗ ಸಾನ್ನಿಧ್ಯದಲ್ಲಿ ಬ್ರಹ್ಮಕಲಶ ಪೂಜೆ, ಅದಿವಾಸ ಸಹಿತ ಪ್ರಧಾನ ಹೋಮ, ಮೆರವಣಿಗೆ ನಾಗದರ್ಶನ, ಸಾನ್ನಿಧ್ಯದಲ್ಲಿ ದರ್ಶನ ಸೇವೆಡೆಯಿತು. ಮಧ್ಯಾಹ್ನ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಪಲ್ಲಪೂಜೆ ಮಾಡಿದರು. 50 ಸಾವಿರಕ್ಕೂ ಮಿಕ್ಕಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.

Advertisement

ಗಂಗಾಜಲ ಸಂಪ್ರೋಕ್ಷಣೆ
ಕಾಶೀ ವಾರಾಣಸಿಯಿಂದ ತರಿಸ ಲಾದ ಪವಿತ್ರ ಗಂಗಾಜಲವನ್ನು ಭಕ್ತರಿಗೆ ಸಂಪ್ರೋಕ್ಷಣೆ ನಡೆಸಿ, (ನಾಗರಕ್ಷೆ) ದಾರ ವಿತರಿಸಲಾಯಿತು. ಸಂಜೆ ಹಾಲಿಟ್ಟು ಸೇವೆ, ಬಲಿ ಉತ್ಸವ, ಸೇವಾಕರ್ತರ ಪರಿವಾರದವರು ನಾಗಮಂಡಲದ ಸುತ್ತಲೂ ದೀಪ ಪ್ರಜ್ವಲಿಸಿ ಸಂಕಲ್ಪ ದೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ನಾಗಮಂಡಲದ ಮಂಟಪದಲ್ಲಿ ವಾರಾಣಸಿಯ ಅರ್ಚಕ ವೃಂದದವ ರಿಂದ ಅಕರ್ಷಕ ಗಂಗಾರತಿ ನಡೆಯಿತು.

ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ ಉಪಸ್ಥಿತರಿದ್ದರು.

ಹೀರಾ ಬಿ. ಕಿದಿಯೂರು, ಪುತ್ರ ಡಾ| ಬೃಜೇಶ್‌ ಕಿದಿಯೂರು ಮತ್ತು ಡಾ| ಶ್ವೇತಾ ಬ್ರಿಜೇಶ್‌ ದಂಪತಿ, ಪುತ್ರ ಡಾ| ಯಜ್ಞೇಶ್ ಬಿ. ಕಿದಿಯೂರು ಮತ್ತು ಶಿಲ್ಪಾ ಯಜ್ಞೆàಶ್‌ ದಂಪತಿ, ಪುತ್ರ ಜಿತೇಶ್‌ ಬಿ. ಕಿದಿಯೂರು ಮತ್ತು ಪ್ರಿಯಾಂಕಾ ಜಿತೇಶ್‌ ದಂಪತಿ, ಪುತ್ರಿ ಡಾ| ಭವ್ಯಶ್ರೀ ಅಭಿನ್‌ ಕಿದಿಯೂರು ಮತ್ತು ಡಾ| ಅಭಿನ್‌ ದೇವದಾಸ್‌ ಶ್ರೀಯಾನ್‌, ಸಮಿತಿ ಪ್ರಧಾನ ಕಾರ್ಯದರ್ಶಿ ಯುವರಾಜ್‌ ಸಾಲ್ಯಾನ್‌ ಮಸ್ಕತ್‌ ಹಾಗೂ ಕುಟುಂಬ ಸದಸ್ಯರು, ಆಯೋಜನ ಸಮಿತಿ ಪದಾಧಿಕಾರಿಗಳು, ಗಣ್ಯರು, ಹೊಟೇಲ್ಸ್‌ನ ಅಧಿಕಾರಿಗಳು, ಸಿಬಂದಿ, ಕಾರ್ಯಕರ್ತರು, ಸ್ವಯಂಸೇವಕರು, ಭಕ್ತರು ಭಾಗವಹಿಸಿದ್ದರು.

ಅಚ್ಚುಕಟ್ಟಿನ ವ್ಯವಸ್ಥೆ
ಕಿದಿಯೂರು ಹೊಟೇಲ್ಸ್‌ ಸಂಕೀರ್ಣ ಸೇರಿ ಕೇವಲ 50 ಸೆಂಟ್ಸ್‌ ಜಾಗದಲ್ಲಿ ನಗರದ ಹೃದಯ ಭಾಗದಲ್ಲಿ ವಾಹನ ಮತ್ತು ಜನಜಂಗುಳಿಯ ನಡುವೆ ಅತ್ಯಂತ ವ್ಯವಸ್ಥಿತವಾಗಿ ಅಚ್ಚುಕಟ್ಟಿನಿಂದ ಅದ್ದೂರಿಯಾದ ನಾಗಮಂಡಲೋತ್ಸವ ನೆರವೇರಿರುವುದು ವಿಶೇಷ. ನಾಗಮಂಡ ಲೋತ್ಸವದ ಯಶಸ್ಸಿನಲ್ಲಿ ಭುವನೇಂದ್ರ ಕಿದಿಯೂರು ಅವರ ಅಭಿಮಾನಿ ಸ್ವಯಂಸೇವಕರ ಶ್ರಮ ಬಹಳಷ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next