Advertisement

ಮಾಸ್ಕ್ ಧರಿಸದೆ ಓಡಾಡುವವರಿಗೆ ಮಾಸ್ಕ್ ವಿತರಿಸಿದ ಉಡುಪಿ ಪೊಲೀಸರು

01:44 PM Mar 25, 2021 | Team Udayavani |

ಉಡುಪಿ: ಉಡುಪಿಯಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತಿದ್ದು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮಾಸ್ಕ್ ಧರಿಸದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಇಂದು ಉಡುಪಿಯಲ್ಲಿ ಸಂಚಾರ ಪೊಲೀಸರು ಕಾನೂನು ಸುವ್ಯವಸ್ಥೆಯ ಜೊತೆಗೆ ಮಾಸ್ಕ್ ಜಾಗೃತಿ ಮೂಡಿಸಿದರು

Advertisement

ಟ್ರಾಫಿಕ್ ಎಸ್.ಐ ಅಬ್ದುಲ್ ಖಾದರ್ ನೇತೃತ್ವದಲ್ಲಿ ಉಡುಪಿ ಸಂಚಾರ ಠಾಣಾ ಪೋಲಿಸರು ಉಡುಪಿಯ ಕಲ್ಸಂಕ, ಸರ್ವಿಸ್ ಬಸ್  ನಿಲ್ದಾಣದ ಬಳಿ ಮಾಸ್ಕ್ ಧರಿಸದವರ ವಿರುದ್ದ ದಂಡ ಹಾಕುವುದರ ಜೊತೆಗೆ ಸಾರ್ವಜನಿಕರಿಗೆ ಮಾಸ್ಕ್ ಅನ್ನು ವಿತರಿಸಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಿದರು.

ಇದನ್ನೂ ಓದಿ:ಕೋವಿಡ್ ಸೋಂಕು ತಡೆಗೆ ಬೆಂಗಳೂರಿನಲ್ಲಿ ಹೊಸ ನಿಯಮಗಳು: ನೆಗೆಟಿವ್ ವರದಿ ಕಡ್ಡಾಯ, ಕೈಗೆ ಸೀಲ್

ಈ ಸಂದರ್ಭದಲ್ಲಿ ಹಲವಾರು ಮಂದಿ ಮಾಸ್ಕ್ ಇದ್ದರೂ ಕೂಡ ಮಾಸ್ಕ್ ಧರಿಸದೇ ವಾಹನ ಚಲಾಯಿಸುವುದು ಕಂಡು ಬಂದಿತು.  ಬಸ್ ಗಳಲ್ಲಿ ಮಾಸ್ಕ್ ಧರಿಸದೆ ಪ್ರಯಾಣ ನಡೆಸಲು ಅವಕಾಶ ನೀಡಿದ ಕಾರಣಕ್ಕಾಗಿ ಬಸ್ ನಿರ್ವಾಹಕನೋರ್ವನಿಗೂ ದಂಡ ವಿದಿಸಿದ್ದಾರೆ.

Advertisement

ಈ ಕುರಿತು ಪ್ರತಿಕ್ರಿಯಿಸಿದ ಉಡುಪಿ ಸಂಚಾರ ಠಾಣಾ ಎಸ್ ಐ ಅಬ್ದುಲ್ ಖಾದರ್ “ಉಡುಪಿಯಲ್ಲಿ ಕೋವಿಡ್ ಪ್ರಕರಣ ಹೆಚ್ಚುತಿದ್ದು ಇತ್ತೀಚಿಗೆ ಜಿಲ್ಲಾಧಿಕಾರಿಗಳು ಕೂಡಾ ನಗರದಲ್ಲಿ ಮಾಸ್ಕ್ ಧರಿಸದವರ‌‌ ವಿರುದ್ದ ದಂಡ ವಿಧಿಸಿದ್ದರು.‌ಈಗಾಗಲೆ ಉಡುಪಿಯಲ್ಲಿ 80 ಶೇಕಡಾ ಜನರು ಮಾಸ್ಕ್ ಧರಿಸುತಿದ್ದಾರೆ. ಮಾಸ್ಕ್ ಧರಿಸದವರಿಗೆ ದಂಡದ ಜೊತೆಗೆ ಅವರಿಗೆ ಮಾಸ್ಕ್ ಅನ್ನು ವಿತರಿಸುವ ಕೆಲಸವನ್ನು ಕೂಡಾ ನಾವು ಮಾಡುತಿದ್ದೇವೆ” ಎಂದರು.

ಇದನ್ನೂ ಓದಿ: ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ತೀವ್ರ: ಮಾರ್ಚ್ 26ರಂದು ಭಾರತ್ ಬಂದ್ ಗೆ ರೈತರ ಕರೆ

Advertisement

Udayavani is now on Telegram. Click here to join our channel and stay updated with the latest news.

Next