Advertisement

ಉಡುಪಿ: ಕೆಲವು ಮಸೀದಿಗಳಲ್ಲಿ ಈದುಲ್‌ ಫಿತ್ರ ಆಚರಣೆ

02:33 AM May 03, 2022 | Team Udayavani |

ಉಡುಪಿ: ಕುಮಟಾದಲ್ಲಿ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಕೆಲವು ಮಸೀದಿ ಗಳಲ್ಲಿ ಸೋಮವಾರ ಈದುಲ್‌ ಫಿತ್ರ ಹಬ್ಬವನ್ನು ಮುಸ್ಲಿಮರು ಆಚರಿಸಿದರು.

Advertisement

ನಗರದ ಜಾಮಿಯಾ ಮಸೀದಿ ಯಲ್ಲಿ ಮೌಲಾನ ಅಬ್ದುರ್ರಶೀದ್‌ ನದ್ವಿ ನೇತೃತ್ವದಲ್ಲಿ ಹಾಗೂ ಬ್ರಹ್ಮಗಿರಿ ನಾಯರ್‌ಕೆರೆ ಹಾಶಿಮಿ ಮಸೀದಿಯಲ್ಲಿ ಮೌಲಾನ ಸಯೀದ್‌ ಹುಸೇನ್‌ ನೇತೃತ್ವದಲ್ಲಿ ಈದ್‌ ನಮಾಝ್ ನಡೆಯಿತು.

ಮಲ್ಪೆ ಅಬೂಬಕ್ಕರ್‌ ಸಿದ್ದೀಕ್‌ ಮಸೀದಿ, ಹೂಡೆಯ ಅಬು ಮಾವಿಯ ಮಸೀದಿ, ಹೂಡೆ ಜಮಾಅತೆ ಹದೀಸ್‌ ಮಸೀದಿ, ತೋನ್ಸೆ ಜದೀದ್‌ ಜುಮಾ ಮಸೀದಿ, ಕೋಡಿಬೆಂಗ್ರೆ ಜಾಮೀಯ ಮಸೀದಿ, ಗಂಗೊಳ್ಳಿ ಕೇಂದ್ರ ಜುಮಾ ಮಸೀದಿ, ಮೊಹಿಯುದ್ದೀನ್‌ ಜುಮಾ ಮಸೀದಿ, ಶಾಹಿ ಜುಮ್ಮಾ ಮಸೀದಿ, ಮಸ್ಜಿದೆ ಅಹ್ಲೇ ಹದೀಸ್‌ಗಳಲ್ಲಿ ಹಬ್ಬದ ವಿಶೇಷ ನಮಾಝ್ ನಿರ್ವಹಿಸಿದರು.

ಹೈಕಾಡಿ, ಕುಕ್ಕಿಕಟ್ಟೆ, ಶಿರೂರು ಸೇರಿದಂತೆ ಕೆಲವು ಮಸೀದಿಗಳಲ್ಲಿ ಆಯಾ ಜಮಾಅತ್‌ನ ಮುಸ್ಲಿಮರು ಈದ್‌ ನಮಾಜು ನಿರ್ವಹಿಸಿದರು. ಜಿಲ್ಲೆಯ ಉಳಿದ ಮಸೀದಿಗಳ ಜಮಾಅತ್‌ ವ್ಯಾಪ್ತಿಯಲ್ಲಿ ಮಂಗಳವಾರ ಈದುಲ್‌ ಫಿತ್ರ ಆಚರಿಸಲಾಗುತ್ತದೆ.

ದ.ಕ. ಜಿಲ್ಲೆಯಲ್ಲಿ ಇಂದು ಆಚರಣೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ “ಈದುಲ್‌ ಫಿತ್ರ’ ಆಚರಿಸಲು ಸಿದ್ಧತೆ ನಡೆಸಲಾಗಿದೆ.ಬೆಳಗ್ಗೆ 8ಕ್ಕೆ ನಗರದ ಬಾವುಟಗುಡ್ಡೆ ಈದ್ಗಾ ಮಸೀದಿ, ಬಂದರ್‌ ಝೀನತ್‌ ಬಕ್ಷ್ ಕೇಂದ್ರ ಜುಮಾ ಮಸೀದಿಯಲ್ಲಿ ಈದ್‌ ನಮಾಝ್ ಮತ್ತು ಖುತ್ಬಾ ಪಾರಾಯಣ ನೆರವೇರಲಿದೆ. ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್‌ನಲ್ಲಿ ಬೆಳಗ್ಗೆ 8.30ಕ್ಕೆ ಈದ್‌ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಲಿದೆ. ಉಳಿದಂತೆ ಜಿಲ್ಲೆಯ ಎಲ್ಲ ಮಸೀದಿ ಮತ್ತು ಈದ್ಗಾಗಳಲ್ಲಿ ಈದ್‌ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next