Advertisement

ಉಡುಪಿ: 2ನೇ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಲಯಕ್ಕೆ ಚಾಲನೆ

07:21 AM Dec 01, 2017 | Team Udayavani |

ಉಡುಪಿ: ಉಡುಪಿ ಜಿಲ್ಲಾ ನೂತನ 2ನೇ ಹೆಚ್ಚುವರಿ ಹಿರಿಯ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಉಡುಪಿ ಜಿಲ್ಲಾ ಕೋರ್ಟ್‌ ಸಂಕೀರ್ಣದ 2ನೇ ಮಹಡಿಯಲ್ಲಿ ನ. 30ರಂದು ಕಾರ್ಯಾರಂಭ ಮಾಡಿದೆ.

Advertisement

ಮಾನ್ಯ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ. ವೆಂಕಟೇಶ್‌ ನಾಯ್ಕ ಅವರು ನೂತನ 2ನೇ ಹೆಚ್ಚುವರಿ ಹಿರಿಯ 
ಸಿವಿಲ್‌ ನ್ಯಾಯಾ ಲಯವನ್ನು ಉದ್ಘಾಟಿಸಿ ಮಾತನಾಡಿದರು. 2ನೇ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶೆ ನೂರುನ್ನೀಸಾ, ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶ ವಿ.ಎಸ್‌. ಪಂಡಿತ್‌, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್‌ ನ್ಯಾಯಾಧೀಶೆ ಲತಾ, ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶೆ ಲಾವಣ್ಯಾ, ಉಡುಪಿ ವಕೀಲರ ಸಂಘದ ಅಧ್ಯಕ್ಷ ಎಚ್‌. ರತ್ನಾಕರ ಶೆಟ್ಟಿ, ಕಾರ್ಯದರ್ಶಿ ಎ. ಸಂತೋಷ್‌ ಹೆಬ್ಟಾರ್‌ ಹಾಗೂ ನ್ಯಾಯಾಧೀಶರು, ವಕೀಲರು ಉಪಸ್ಥಿತರಿದ್ದರು.

ನೂತನ ನ್ಯಾಯಾಧೀಶೆ: ನೂತನ ನ್ಯಾಯಾಲಯಕ್ಕೆ ನೂರುನ್ನೀಸಾ ಅವರು ನ್ಯಾಯಾಧೀಶೆಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ವಿಷಾದ: ಯಾವೆಲ್ಲ ಪ್ರಕರಣಗಳು ನೂತನ ನ್ಯಾಯಾ ಲಯಕ್ಕೆ ವರ್ಗಾವಣೆಗೊಳ್ಳುತ್ತವೆ ಎನ್ನುವಲ್ಲಿ ಜಿಲ್ಲಾ ನ್ಯಾಯಾಧೀಶರು  ವರ್ಗಾವಣೆಗೊಂಡಿದ್ದಾರೆ ಎಂದು ನ. 29ರ ಪತ್ರಿಕೆಯಲ್ಲಿ  ಪ್ರಮಾದವಶಾತ್‌ ತಪ್ಪಾಗಿ ಪ್ರಕಟಗೊಂಡಿತ್ತು. ಅದಕ್ಕಾಗಿ ವಿಷಾದಿಸುತ್ತೇವೆ.

Advertisement

Udayavani is now on Telegram. Click here to join our channel and stay updated with the latest news.

Next