ಶ್ರೀಕೃಷ್ಣ ಅವತರಿಸಿದ್ದ ಮಥುರಾ ಕ್ಷೇತ್ರದಲ್ಲಿ 3 ವರ್ಷದ ಹಿಂದೆ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಬುಧವಾರ ಪರ್ಯಾಯ ಮಠಾಧೀಶರಾಗಿ ಮಹಾಪೂಜೆ ನೆರವೇರಿಸಿದರು. ಉಡುಪಿಯ ಸಂಭ್ರಮವನ್ನು ಸವಿಯಲು ಬುಧವಾರ ದಿಂದಲೇ ನಾಡಿನೆಲ್ಲೆಡೆಯಿಂದ ಭಕ್ತ ಜನರು ಬರುತ್ತಿದ್ದಾರೆ.
Advertisement
ನಿರ್ಜಲ ಉಪವಾಸದಲ್ಲಿದ್ದ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಬೆಳಗ್ಗೆ ಮತ್ತು ರಾತ್ರಿ ಮಹಾಪೂಜೆ ನಡೆಸಿ ಮಧ್ಯರಾತ್ರಿ ಕೃಷ್ಣಾಘÂì ಪ್ರದಾನ ಮಾಡಿದರು. ಭಕ್ತರು ದೇವರ ದರ್ಶನ ಪಡೆದರು.
ಮಂಗಳವಾರ ರಾತ್ರಿ ಉಡುಪಿಯೆಲ್ಲೆಡೆ ಜೋರು ಮಳೆಯಾಗಿತ್ತು. ಆ ಕ್ಷಣವನ್ನು ನೋಡಿದರೆ ಬುಧ ವಾರ ಭಾರೀ ಮಳೆಯಾಗುವ ಸಂಭವವೇ ಹೆಚ್ಚೆಂದು ಭಕ್ತರು ಆಡಿಕೊಂಡಿದ್ದರು. ಆದರೆ ಬುಧವಾರ ಇಡೀ ದಿನ ವರುಣನ ಆಗಮನವಾಗದೆ ಭಕ್ತರು ಸಲೀಸಾಗಿ ಶ್ರೀಕೃಷ್ಣ ದೇವರ ದರ್ಶನ ಪಡೆದರು. ಏಕಾದಶಿಯಂತೆ ನಿರ್ಜಲ ಉಪವಾಸವಿರುವ ಕಾರಣ ಶ್ರೀಪಾದರು ರಾತ್ರಿಯೂ ಶ್ರೀಕೃಷ್ಣನಿಗೆ ತುಳಸೀ ಅರ್ಚನೆ ನಡೆಸಿ ಮಹಾಪೂಜೆ ಸಲ್ಲಿಸಿದರು. ಮಧ್ಯರಾತ್ರಿ ಶ್ರೀಪಾದರು ಕೃಷ್ಣಾಘÂì ಪ್ರದಾನ ಮಾಡಿದರು. ಅನಂತರ ಭಕ್ತ ಜನಸ್ತೋಮ ಕೃಷ್ಣಾಘÂì ಪ್ರದಾನ ಮಾಡಿದರು. ಉಂಡೆ, ಚಕ್ಕುಲಿ ಸಮರ್ಪಣೆ
ಬೆಳಗ್ಗೆ ಮಹಾಪೂಜೆ ಬಳಿಕ ರಾತ್ರಿಯ ದೇವರ ನೈವೇದ್ಯಕ್ಕಾಗಿ ಉಂಡೆ ಕಟ್ಟಲು ಶ್ರೀಪಾದರು ಮುಹೂರ್ತ ಮಾಡಿದರು. ಬಾಣಸಿಗರು ತಯಾ ರಿಸಿದ ಚಕ್ಕುಲಿ, ಲಡ್ಡುಗಳನ್ನು ರಾತ್ರಿ ಪೂಜೆ ವೇಳೆ ದೇವರಿಗೆ ನಿವೇದಿಸಲಾಯಿತು. ಹಲವು ದೇವಸ್ಥಾನ, ಮನೆಗಳಲ್ಲಿಯೂ ರಾತ್ರಿ ಪೂಜೆ ನಡೆಸಿ ಅಘÂì ಪ್ರದಾನ ಮಾಡಲಾಯಿತು.
Related Articles
ವಿಟ್ಲಪಿಂಡಿಯ ಮುನ್ನಾ ದಿನವಾದ ಬುಧವಾರ ನಗರದೆಲ್ಲೆಡೆ ವೇಷಗಳ ಕಾರುಬಾರು ಕಂಡುಬಂದಿತು. ಹುಲಿವೇಷದಿಂದ ಹಿಡಿದು ಬಗೆಬಗೆಯ ವೇಷಗಳು ಇದ್ದವು. ಶ್ರೀಕೃಷ್ಣ ಮಠದಲ್ಲಿ ನಡೆದ ಮುದ್ದುಕೃಷ್ಣ ವೇಷ ಸ್ಪರ್ಧೆಯಲ್ಲಿ 400ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು.
Advertisement
ನಿರಂತರ ಭಜನೆಉಡುಪಿ, ಕುಂದಾಪುರ, ಹಂಗಾರಕಟ್ಟೆ ಮೊದ ಲಾದೆಡೆಗಳ ಭಜನಾ ತಂಡಗಳಿಂದ ಮಠದ ಮಧ್ವ ಮಂಟಪದಲ್ಲಿ ದಿನವಿಡೀ ಭಜನ ಕಾರ್ಯಕ್ರಮ ನಡೆಯಿತು. ಭಜನ ಕಾರ್ಯಕ್ರಮಕ್ಕೆ ಪೇಜಾವರ ಶ್ರೀಗಳು ಚಾಲನೆ ನೀಡಿದರು. ಸ್ಯಾಕೊÕàಫೋನ್ ವಾದನವೂ ಇತ್ತು. ಇಂದು ವಿಟ್ಲಪಿಂಡಿ ಉತ್ಸವ
ಶ್ರೀಕೃಷ್ಣ ಮಠದಲ್ಲಿ ಇಂದು (ಗುರುವಾರ) ವಿಟ್ಲಪಿಂಡಿ (ಮೊಸರು ಕುಡಿಕೆ) ಉತ್ಸವ ಅಪರಾಹ್ನ 3.30ಕ್ಕೆ ಜರಗಲಿದೆ. ವಿವಿಧ ವೇಷಗಳ ಪ್ರದರ್ಶನ, ಸ್ಪರ್ಧೆ ಇರಲಿದೆ. ಶ್ರೀಕೃಷ್ಣ ಮೃಣ್ಮಯ ಪ್ರತಿಮೆಯ ರಥೋತ್ಸವ ಸಹಿತ ಲೀಲೋತ್ಸವ (ವಿಟ್ಲಪಿಂಡಿ) ಜರಗಲಿದ್ದು, ಬೆಳಗ್ಗೆ ಮಹಾಪೂಜೆ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಶ್ರೀಕೃಷ್ಣ ಲೀಲೋತ್ಸವದ ಭವ್ಯ ಮೆರವಣಿಗೆ 3 ಗಂಟೆಗೆ ಹೊರಡಲಿದೆ. ಮಣ್ಣಿನಿಂದ ತಯಾರಿಸಿದ ಮೂರ್ತಿಯನ್ನು ಉತ್ಸವ ಮೆರವಣಿಗೆಯಲ್ಲಿ ತರುತ್ತಾರೆ. ಗೋವಳರಿಂದ ಮೊಸರು ಕುಡಿಕೆ ಒಡೆಯುವ ದೃಶ್ಯ ಕಣ್ತುಂಬಲಿದೆ. ಗುರುವಾರ ಬೆಳಗ್ಗೆಯಿಂದಲೇ ಭೋಜನ ಪ್ರಸಾದ ವಿತರಣೆ ಇರಲಿದೆ. ಉತ್ಸವದಲ್ಲಿ ಶ್ರೀಕೃಷ್ಣನ ಮಣ್ಣಿನ ಮೂರ್ತಿ, ಶ್ರೀ ಅನಂತೇಶ್ವರ, ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದ ಉತ್ಸವಮೂರ್ತಿಗಳು ಪಾಲ್ಗೊಳ್ಳಲಿವೆ.