ಮಂದಿರ ಮಠದ ಪ್ರಥಮ ವರ್ಧಂತ್ಯುತ್ಸವದ ಪ್ರಯುಕ್ತ ಜ. 15 ಮತ್ತು 16ರಂದು ಶ್ರೀ ಭಗವಾನ್
ನಿತ್ಯಾನಂದ ಮೂರ್ತಿ ಪ್ರಥಮ ಪ್ರಾಣ ಪ್ರತಿಷ್ಠಾ ಮಹೋತ್ಸವ ನೆರವೇರಲಿದೆ.
Advertisement
ಜ. 15ರಂದು ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಕಪ್ಪೆಟ್ಟು ಸೂರ್ಯಪ್ರಕಾಶ್, ವಿಶ್ವನಾಥ್ಸನಿಲ್ ಕಡೆಕಾರ್, ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರ ನೇತೃತ್ವದಲ್ಲಿ ಭಜನೆ, ಬೆಳಗ್ಗೆ 8, ಮಧ್ಯಾಹ್ನ 12, ರಾತ್ರಿ
8ಕ್ಕೆ ಮಹಾಪೂಜೆ, ಪ್ರತಿ 2 ಗಂಟೆಗೆ ಜಾಮ ಪೂಜೆ, ಸಂಜೆ 5ಕ್ಕೆ ನಡೆಯಲಿರುವ ಪಲ್ಲಕಿ ಮೆರವಣಿಗೆಯು
ನಿತ್ಯಾನಂದ ಮಂದಿರದಿಂದ ತ್ರಿವೇಣಿ ಸರ್ಕಲ್, ಚಿತ್ತರಂಜನ್ ಸರ್ಕಲ್‌ನಿಂದ ವುಡ್‌ಲ್ಯಾಂಡ್ಸ್ ಹೊಟೇಲ್
ಬದಿಯಿಂದ ತೆಂಕಪೇಟೆಯಾಗಿ ಕೊಳದ ಪೇಟೆಯಿಂದ ಹಳೇ ಡಯಾನ ಸರ್ಕಲ್‌ನಿಂದ ಜೋಡುರಸ್ತೆಗೆ
ಅಲ್ಲಿಂದ ಹಿಂತಿರುಗಿ ಕವಿ ಮುದ್ದಣ್ಣ ಮಾರ್ಗವಾಗಿ ಮಂದಿರಕ್ಕೆ ತಲುಪುವುದು. ಮೆರವಣಿಗೆಯಲ್ಲಿ ಶ್ರೀ
ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ನೇತೃತ್ವದಲ್ಲಿ ಕುಣಿತ ಭಜನ
ತಂಡಗಳು ಭಾಗವಹಿಸಲಿವೆ.
ನೇತೃತ್ವದಲ್ಲಿ ಬೆಳಗ್ಗೆ 4.30ಕ್ಕೆ ಭಗವಾನ್ ನಿತ್ಯಾನಂದ ಸ್ವಾಮಿಗೆ ಭಕ್ತರಿಂದ ಸೀಯಾಳಾಭಿಷೇಕ, 5ಕ್ಕೆ
ಮಹಾಪೂಜೆ, 8ಕ್ಕೆ ಪ್ರಥಮ ಆರತಿ, 9ಕ್ಕೆ ಶ್ರೀ ಗಣೇಶಯಜ್ಞ ಪ್ರಾರಂಭ, ಮಧ್ಯಾಹ್ನ 12ಕ್ಕೆ ಮಹಾಪೂಜೆ,
12.30ರಿಂದ ಬಾಲ ಭೋಜನ ಮತ್ತು ಅನ್ನಸಂತರ್ಪಣೆ, 2ರಿಂದ ಗಣೇಶಯಜ್ಞ ಮುಂದುವರಿಕೆ, ಸಂಜೆ
4ಕ್ಕೆ ಗಣೇಶಯಜ್ಞದ ಪೂರ್ಣಾಹುತಿ, ರಾತ್ರಿ 8ಕ್ಕೆ ಮಹಾಪೂಜೆ ನಡೆಯಲಿದೆ. ಜ. 16ರ ಸಂಜೆ 5ರಿಂದ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಶ್ರೀಧಾಮ ಮಾಣಿಲ ಮೋಹನದಾಸ
ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು. ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ
ಮಠ ಉಡುಪಿಯ ಮ್ಯಾನೇಜಿಂಗ್ ಟ್ರಸ್ಟಿ ಕೆ.ಕೆ. ಆವರ್ಶೇಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ
ಅತಿಥಿಗಳಾಗಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್, ಮಂದಿರ ಮಠದ
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪುರುಷೋತ್ತಮ ಪಿ. ಶೆಟ್ಟಿ, ಟ್ರಸ್ಟಿ ಸುರೇಂದ್ರ ಕಲ್ಯಾಣಪುರ,
ಕಾಂಝಾಂಗಾಡ್ ಶ್ರೀ ನಿತ್ಯಾನಂದ ವಿದ್ಯಾಕೇಂದ್ರದ ಅಧ್ಯಕ್ಷ ಕೆ. ದಿವಾಕರ ಶೆಟ್ಟಿ ಉಪಸ್ಥಿತರಿರಲಿದ್ದಾರೆ.
Related Articles
ಸೊರಕೆ, ಹಿರಿಯ ಪತ್ರಕರ್ತ ರವೀಂದ್ರ ಶೆಟ್ಟಿ, ಕಾಂಝಾಂಗಾಡ್ ಶ್ರೀ ನಿತ್ಯಾನಂದ ಆಶ್ರಮದ ಅಧ್ಯಕ್ಷ
ನಿತ್ಯಾನಂದ ಖೋಡೆ, ಬೆಂಗಳೂರು ಎಂಜಿಆರ್ ಗ್ರೂಪ್‌ನ ಬಂಜಾರ ಪ್ರಕಾಶ ಶೆಟ್ಟಿ, ನವೀನ್ ಶೆಟ್ಟಿ ತೋನ್ಸೆ
ಮುಂಬಯಿ, ವಿ.ಕೆ. ಡೆವಲಪರ್ನ ಎಂಡಿ ಕೆ.ಎಂ. ಶೆಟ್ಟಿ, ಕಿದಿಯೂರ್ ಹೊಟೇಲ್ಸ್ ಪ್ರೈ.ಲಿ.ನ ಚೇರ್‌ಮನ್
ಮತ್ತು ಎಂಡಿ ಭುವನೇಂದ್ರ ಕಿದಿಯೂರು, ಕಾಪು ಮಾರಿಗುಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಾಪು
ವಾಸುದೇವ ಶೆಟ್ಟಿ, ಸಾಯಿರಾಧಾ ಸಮೂಹ ಸಂಸ್ಥೆಯ ಎಂಡಿ ಮನೋಹರ ಎಸ್. ಶೆಟ್ಟಿ, ರಿಲಯನ್ಸ್
ಟಿವಿ ನಿರ್ದೇಶಕ ಎ.ಪಿ. ಗಿರೀಶ್, ಲಂಡನ್ ಉದ್ಯಮಿ ಪೃಥ್ವಿರಾಜ್ ಶೆಟ್ಟಿ, ಮುಂಬಯಿ ಹೊಟೇಲ್
ಉದ್ಯಮಿ ಸಿಬಿಡಿ ಭಾಸ್ಕರ ಶೆಟ್ಟಿ, ಬೊಯಿಸರ್ ನಿತ್ಯಾನಂದ ಆಶ್ರಮದ ಟ್ರಸ್ಟಿ ಸತ್ಯ ಕೋಟ್ಯಾನ್, ಥಾಣೆ
ಉದ್ಯಮಿ ಕುಶಾಲ್ ಭಂಡಾರಿ, ಧನಂಜಯ ಶೆಟ್ಟಿ ಮುಂಬಯಿ, ಎಂಐಟಿ ಮಾಜಿ ನಿರ್ದೇಶಕ ಪ್ರೊ|
ರಘುವೀರ್ ಪೈ, ಕಾಂಝಾಂಗಾಡ್ ಶ್ರೀ ನಿತ್ಯಾನಂದ ವಿದ್ಯಾಕೇಂದ್ರದ ಕಾರ್ಯದರ್ಶಿ ನರಸಿಂಹ ಶೆಣೈ
ಎಂ., ಬಂಟರ ಮಾತೃ ಸಂಘದ ಉಡುಪಿ ಸಂಚಾಲಕ ಎಚ್. ಶಿವಪ್ರಸಾದ ಶೆಟ್ಟಿ, ವಿಶ್ವ ಬಂಟ್ಸ್
ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಉದ್ಯಮಿಗಳಾದ ದಯಾನಂದ
ಶೆಟ್ಟಿ ಬಂಟಕಲ್, ಜಯರಾಜ್ ಹೆಗ್ಡೆ ಮಣಿಪಾಲ ಭಾಗವಹಿಸುವರು.
Advertisement
ಕಾರ್ಯಕ್ರಮದಲ್ಲಿ ವಿವಿಧ ನಿತ್ಯಾನಂದ ಮಂದಿರಗಳ ಪ್ರಮುಖರನ್ನು ಸಮ್ಮಾನಿಸಲಾಗುವುದು ಎಂದುಮಂದಿರ ಮಠದ ಪ್ರಕಟನೆ ತಿಳಿಸಿದೆ.