Advertisement
ಬಾಳೆಗಿಡದ ಆಕರ್ಷಣೆಪುರಪ್ರವೇಶಕ್ಕೆ ಮಾಡಿದ ಅಲಂಕಾರ ಕೆಲ ಭಾಗಗಳನ್ನು ಪರ್ಯಾಯ ದಿನದ ಮೆರವಣಿಗೆಗೆ ಬದಲಾಯಿ ಸಲಾಗುತ್ತದೆ. ಜ. 17ರಂದು ಇಲ್ಲಿ ತಳಿರುತೋರಣ, ಬಾಳೆಗಿಡಗಳನ್ನು ಹಾಕಲಾಗುವುದು. ಪುರಪ್ರವೇಶಕ್ಕೆ ಹಾಕಿದ ಬಾಳೆಗಿಡಗಳನ್ನು ಬುಡಸಹಿತ ಕಿತ್ತು ತಂದ ಕಾರಣ ಅವನ್ನು ವಾಪಸು ನೆಡಲಾಗಿದೆ. ಪರ್ಯಾಯ ಮೆರವಣಿಗೆ ದಿನವೂ ಬೇರುಸಹಿತ ಕಿತ್ತ ಬಾಳೆಗಿಡಗಳನ್ನು ತಂದು ನೆಡಲಾಗುವುದು ಮತ್ತು ಬಳಿಕ ವಾಪಸು ಆ ಗಿಡಗಳನ್ನು ತಂದ ಸ್ಥಳದಲ್ಲಿಯೇ ನೆಡಲಾಗುವುದು. ಬಾಳೆಗಿಡಗಳು ಹಾಳಾಗಬಾರದೆಂದು ಹೀಗೆ ಮಾಡಲಾಗಿದೆ.
ಉಡುಪಿ ರಥಬೀದಿಯಿಂದ ಜೋಡುಕಟ್ಟೆವರೆಗೆ 400 ಕಂಬಗಳಲ್ಲಿ 800 ಗೂಡುದೀಪಗಳನ್ನು ಅಳವಡಿಸುವ ಕೆಲಸ ಶುಕ್ರವಾರ ರಾತ್ರಿಯಿಂದ ಆರಂಭಗೊಂಡಿದೆ. 100 ದೊಡ್ಡ ಬ್ಯಾನರ್‌ಗಳನ್ನು ಉಡುಪಿ ಸುತ್ತಮುತ್ತ, 70 ದೊಡ್ಡ ಬ್ಯಾನರ್‌ಗಳು ಮಂಗಳೂರಿನಿಂದ ಕುಂದಾಪುರದ ವರೆಗೆ, 200 ಸಣ್ಣ ಬ್ಯಾನರ್‌ಗಳು ಮಂಗಳೂರಿನಿಂದ ಕುಂದಾಪುರ, ಉಡುಪಿಯಿಂದ ಕಾರ್ಕಳ ದವರೆಗೆ ಕಟ್ಟಲಾಗಿದೆ. ಕಮಾನು ಗಳ ಸುತ್ತ ಪ್ಲಾಸ್ಟಿಕ್‌ನಿಂದ ತಯಾರಿಸಿದ ಬಣ್ಣದ ಹೊದಿಕೆಯ ಬದಲು ಬಟ್ಟೆಗಳನ್ನೇ ಬಳಸಲಾಗಿದೆ. ಜನಪದ, ದೇಸೀ ಶೈಲಿ ಕಮಾನುಗಳಲ್ಲಿ ಕಾಣುತ್ತಿದೆ. ಶುಕ್ರವಾರ ರಾತ್ರಿಯಿಂದ ಬಂಟಿಂಗ್ಸ್ ಹಾಕಲಾಗುತ್ತಿದೆ.
Related Articles
Advertisement
ಇನ್ನು ಕಲ್ಸಂಕ, ಬಡಗುಪೇಟೆ, ಪಾರ್ಕಿಂಗ್ ಪ್ರದೇಶದಲ್ಲಿ ಹಾಕಲಾಗುತ್ತದೆ. ಬಂಟಿಂಗ್ಸ್ ಎಲ್ಲವೂ ಬಟ್ಟೆಯಿಂದ ತಯಾರಿಸಿದ್ದಾಗಿದೆ. ಒಟ್ಟು 100 ಕೆ.ಜಿ. ಬಂಟಿಂಗ್ಸ್‌ಗಳನ್ನು ತರಿಸಲಾಗಿದೆ.
100ಕೆ.ಜಿ. ಬಟ್ಟೆಒಟ್ಟು 100 ಕೆ.ಜಿ. ಬಟ್ಟೆಯ ಬಂಟಿಂಗ್ಸ್ ತರಿಸಿ ಪರ್ಯಾಯ ಮೆರವಣಿಗೆ ಬರುವ ಸ್ಥಳಗಳಲ್ಲಿ ಹಾಕಲಾಗುತ್ತಿದೆ. ಮುಂದೆ ಕಲ್ಸಂಕ ಮತ್ತು ರಾಜಾಂಗಣ ಪಾರ್ಕಿಂಗ್ ಪ್ರದೇಶ, ಬಡಗುಪೇಟೆಗೆ ಹಾಕಲಾಗುತ್ತದೆ.
-ಸುವರ್ಧನ ನಾಯಕ್, ಶ್ರೀಕೃಷ್ಣ ಸೇವಾ ಬಳಗ.