Advertisement

ಲಾಕ್‌ಡೌನ್‌ ಅವಧಿ ಸದುಪಯೋಗ; ಸುಣ್ಣ-ಬಣ್ಣ ಬಳಿಯುವ ಕೆಲಸ

10:57 PM May 29, 2020 | Sriram |

ಉಡುಪಿ: ಶ್ರೀಕೃಷ್ಣಮಠದಲ್ಲಿ ಜನವರಿಯಲ್ಲಿ ನಡೆದ ಪರ್ಯಾಯೋತ್ಸವದ ಸಂದರ್ಭ ಸುಣ್ಣ-ಬಣ್ಣ ಕೊಡಲು ಬಾಕಿ ಇದ್ದ ಕಡೆ ಕೋವಿಡ್ 19 ಲಾಕ್‌ಡೌನ್‌ ಅವಧಿಯಲ್ಲಿ ಸುಣ್ಣ-ಬಣ್ಣ ಕೊಡಲಾಗುತ್ತಿದೆ.

Advertisement

ಪರ್ಯಾಯದ ಸಂದರ್ಭ ಗಡಿಬಿಡಿಯಲ್ಲಿ ಅದಮಾರು ಮಠ ಮತ್ತು ಶ್ರೀಕೃಷ್ಣಮಠದ ಕನಕಗೋಪುರಕ್ಕೆ ಮಾತ್ರ ಪೇಂಟಿಂಗ್‌ ಮಾಡಲಾಗಿತ್ತು. ಸಾಮಾನ್ಯವಾಗಿ ಗಡಿಬಿಡಿಯಲ್ಲಿ ಪೇಂಟಿಂಗ್‌ ಮಾಡುವಾಗ ಇರುವ ಲೇಯರ್‌ ಮೇಲೆ ಇನ್ನೊಂದು ಲೇಯರ್‌ ಬಣ್ಣವನ್ನು ಕೊಡಲಾಗುತ್ತದೆ. ಈಗ ಸಮಯಾವಕಾಶ ಇರುವುದರಿಂದ ಈಗಾಗಲೇ ಹಲವು ವರ್ಷಗಳಿಂದ ಇದ್ದ ಲೇಯರ್‌ಗಳನ್ನು ಸಂಪೂರ್ಣ ತೆಗೆದು ಹೊಸ ಲೇಯರ್‌ ಬಣ್ಣವನ್ನು ಕೊಡಲು ಸಾಧ್ಯವಾಗಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಜನಜಂಗುಳಿ ಇಲ್ಲದ ಕಾರಣ ಸಾಮಾ ಜಿಕ ಅಂತರವನ್ನು ಕಾಪಾಡಿಕೊಂಡು ಕೆಲಸ ಮಾಡಲು ಸಾಧ್ಯ. ಸುಮಾರು ಹತ್ತು ದಿನಗಳಿಂದ ಎಂಟು ಜನ ಪೇಂಟರ್ ಮಾಸ್ಕ್ ಧರಿಸಿ ಕೊಂಡು ಬಣ್ಣ ಕೊಡುತ್ತಿದ್ದಾರೆ. ಅನ್ನಬ್ರಹ್ಮ ಸಭಾಂಗಣ, ಶ್ರೀಕೃಷ್ಣಮಠದ ದ್ವಾರಬಾಗಿಲಿನಿಂದ ಒಳಭಾಗದಲ್ಲಿ ಕೆಲಸ ನಡೆಯುತ್ತಿದೆ.

1988-89ರ ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಅವಧಿಯಲ್ಲಿ ನಿರ್ಮಿಸಿದ ಭೋಜನಶಾಲೆಯ ಕೆಲವೊಂದು ದುರಸ್ತಿ ಕೆಲಸಗಳನ್ನೂ ಈಗ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ತಮ್ಮ ಪ್ರಥಮ ಪರ್ಯಾಯದ ಅವಧಿಯಲ್ಲಿ ಮಾಡಿಸುತ್ತಿದ್ದಾರೆ.

ಸ್ಥಳೀಯರಿಗೆ ಉದ್ಯೋಗ
ಪರ್ಯಾಯೋತ್ಸವದ ಅವಧಿ ಕೆಲವು ಕಡೆ ಬಣ್ಣ ಕೊಟ್ಟಿರಲಿಲ್ಲ. ಗಡಿಬಿಡಿಯಲ್ಲಿ ಬೇಡ, ಅನಂತರ ನೋಡೋಣ ಎಂದುಕೊಂಡಿದ್ದೆವು. ಸ್ಥಳೀಯರಿಗೆ ಉದ್ಯೋಗ ಸಿಗಬೇಕೆಂಬ ಶ್ರೀಈಶಪ್ರಿಯತೀರ್ಥ ಶ್ರೀಪಾದರ ಇಚ್ಛೆಯಂತೆ ಲಾಕ್‌ಡೌನ್‌ ಅವಧಿಯಲ್ಲಿ ಈ ಕೆಲಸಗಳನ್ನು ನಿರ್ವಹಿಸಲಾಗುತ್ತಿದೆ. ಕೋವಿಡ್ 19 ಅವಧಿ ಮುಗಿಯುವ ವೇಳೆಗೆ ಇದು ಪೂರ್ಣಗೊಳ್ಳುತ್ತದೆ.
-ಗೋವಿಂದರಾಜ್‌, ವ್ಯವಸ್ಥಾಪಕರು,
ಶ್ರೀಕೃಷ್ಣಮಠ ಪರ್ಯಾಯ ಶ್ರೀಅದಮಾರು ಮಠ, ಉಡುಪಿ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next