Advertisement
ದ್ವಾದಶಿಯಾದ ಕಾರಣ ಮುಂಜಾವ ಶ್ರೀದಿಂದಲೇ ಪೂಜೆಗಳು ಆರಂಭಗೊಂಡಿತು. ಮಹಾಪೂಜೆ ಯನ್ನು, ಬಳಿಕ ತುಳಸೀ ಪೂಜೆಯನ್ನು ಪರ್ಯಾಯ ಶ್ರೀಈಶಪ್ರಿಯತೀರ್ಥ ಶ್ರೀಪಾದರು ನೆರವೇರಿಸಿದರು. ಇದಕ್ಕೂ ಮುನ್ನ ಒಂದು ತಿಂಗಳಿಂದ ನಡೆಯುತ್ತಿದ್ದ ಪಶ್ಚಿಮಜಾಗರ ಪೂಜೆಯನ್ನು ಸಮಾಪನಗೊಳಿಸಿದರು. ಸಂಜೆ ಮಧ್ವಸರೋವರದ ಮಧ್ಯದ ಮಂಟಪದಲ್ಲಿಕ್ಷೀರಾಬ್ಧಿವನ್ನು ನೀಡಲಾಯಿತು.
Related Articles
Advertisement
ಇದನ್ನೂ ಓದಿ:ಹಸಿವು ನೀಗಿಸುವ ಯೋಜನೆ ಜಾರಿ ಮಾಡಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್
ಪೌರಕಾರ್ಮಿಕರಿಗೂ ಸೇವಾವಕಾಶನಿತ್ಯ ರಥಬೀದಿಯನ್ನು ಶುಚಿಗೊಳಿಸುವ ಪೌರಕಾರ್ಮಿಕರಿಗೂ ಲಕ್ಷದೀಪೋತ್ಸವದಲ್ಲಿ ಇತರ ಕಾರ್ಯಕರ್ತರ ಜತೆ ದೀಪಗಳನ್ನು ಬೆಳಗಿಸಲು ಬುಧವಾರ ಅವಕಾಶ ಕಲ್ಪಿಸಲಾಗುತ್ತಿದೆ. ಪ್ರಕೃತಿ ಸೊಬಗಿನಲ್ಲಿ ತೆಪ್ಪೋತ್ಸವ
ತೆಪ್ಪವನ್ನು ಪ್ರಕೃತಿ ಸಂಕೇತವಾಗಿ ಮಾವಿನ ತೋರಣಗಳಿಂದ ಅಲಂಕರಿಸಲಾಗಿತ್ತು. ಮಧ್ವಸರೋವರದಲ್ಲಿ ಮತ್ತು ತೆಪ್ಪಕ್ಕೆ ಯಾವುದೇ ವಿದ್ಯುತ್ ಅಲಂಕಾರವನ್ನು ಮಾಡದೆ ಕೇವಲ ಎಣ್ಣೆ ದೀಪದಲ್ಲಿಯೇ ಉತ್ಸವವನ್ನು ನಡೆಸಲಾಯಿತು. ತೆಪ್ಪ ಹಿಲಾಲಿ ಬೆಳಕಿನಲ್ಲಿ ಕಂಗೊಳಿಸಿತು. 4 ದಿನಗಳ ಉತ್ಸವ
ಪರಿಶುದ್ಧವಾಗಿ ತಯಾರಿಸಿದ ಎಳ್ಳೆಣ್ಣೆಯಲ್ಲಿ ಲಕ್ಷದೀಪೋತ್ಸವವನ್ನು ಆಚರಿಸಲಾಯಿತು. ನ. 16ರಿಂದ ಆರಂಭಗೊಂಡ ಲಕ್ಷದೀಪೋತ್ಸವ ನ. 19ರ ವರೆಗೆ ನಾಲ್ಕು ದಿನ ನಡೆಯಲಿದೆ.