Advertisement

ಉಡುಪಿ: ಸರ್ವಧರ್ಮ ದೀಪಾವಳಿ ಆಚರಣೆ

11:38 AM Nov 09, 2018 | Team Udayavani |

ಉಡುಪಿ: ನಮ್ಮ ಪರಂಪರೆಯೇ ಸೌಹಾರ್ದದಿಂದ ಕೂಡಿದ್ದು. ಸರ್ವಧರ್ಮದವರು ಜತೆಗೂಡಿ ಹಬ್ಬಗಳನ್ನು ಆಚರಿಸುವುದು ಹೊಸತೇನಲ್ಲ. ಆದರೆ ಈ ಕಾಲಘಟ್ಟದಲ್ಲಿ ಮತ್ತೂಮ್ಮೆ ನಮ್ಮ ಪರಂಪರೆಯನ್ನು ನೆನಪು ಮಾಡಿಕೊಂಡು ಸೌಹಾರ್ದದಿಂದ ಆಚರಿಸುವಂತಾಗ ಬೇಕು ಎಂದು ಹೆಬ್ರಿ ಸರಕಾರಿ ಜೂನಿಯರ್‌ ಕಾಲೇಜಿನ ಪ್ರಾಧ್ಯಾಪಕಿ ಸುಮಾ ಎಸ್‌. ಅಭಿಪ್ರಾಯಪಟ್ಟರು.

Advertisement

ಗುರುವಾರ ಉಡುಪಿಯ ಶೋಕ ಮಾತಾ ಇಗರ್ಜಿ ವಠಾರದಲ್ಲಿ ಸೌಹಾರ್ದ ಸಮಿತಿ, ಕೆಥೋಲಿಕ್‌ ಸಭಾ ಉಡುಪಿ ಘಟಕ, ಶೋಕಮಾತಾ ಇಗರ್ಜಿ ಉಡುಪಿ, ಲಯನ್ಸ್‌ ಡಿಸ್ಟ್ರಿಕ್ಟ್ 317ಸಿ ಹಾಗೂ ಲಯನ್ಸ್‌ ಕ್ಲಬ್‌ ಉಡುಪಿ ಸಂಗಮ ವತಿಯಿಂದ ಜರಗಿದ ಸರ್ವಧರ್ಮ ದೀಪಾವಳಿ ಆಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಹಣತೆಯ ದೀಪ ಬೆಂಕಿಯಲ್ಲ, ಅದು ಬೆಳಕು. ಆ ದೀಪವನ್ನು ಸುಡುವುದಕ್ಕೆ ಹಚ್ಚುವುದಲ್ಲ, ಬೆಳಗುವುದಕ್ಕಾಗಿ ಹಚ್ಚುತ್ತೇವೆ. ನಮ್ಮೊಳಗೂ ಬೆಂಕಿ ಇದೆ. ಅದನ್ನು ಹಣತೆಯ ಬೆಳಕನ್ನಾಗಿಸಿ ಭಗವದ್ಭಕ್ತಿಯೊಂದಿಗೆ ಸಮರ್ಪಿಸಿ ಸಹಬಾಳ್ವೆ ನಡೆಸಬೇಕಾಗಿದೆ ಎಂದು ಸುಮಾ ಹೇಳಿದರು.

ಎಲ್ಲರ ಒಳಿತಿಗೆ ಪ್ರಾರ್ಥನೆ
ಶುಭಾಶಂಸನೆಗೈದ ರಂಗಿನಕೆರೆ ನೂರುಲ್‌ ಹುದಾ ಮಸೀದಿಯ ಧರ್ಮ ಗುರು ಮೌಲಾನಾ ಮಹಮ್ಮದ್‌ ಶರ್ವಾಣಿ ರಜ್ವಿ ಅವರು, “ಎಲ್ಲ ಧರ್ಮಗಳು ಕೂಡ ಇತರರನ್ನು ಪ್ರೀತಿಸುವುದನ್ನು ಹೇಳುತ್ತದೆಯೇ ಹೊರತು ದ್ವೇಷಿಸಲು ಹೇಳುವುದಿಲ್ಲ. ನೈಜ ಮುಸಲ್ಮಾನ ಕೂಡ ಎಲ್ಲರ ಒಳಿತಿಗಾಗಿ ಪ್ರಾರ್ಥಿಸುತ್ತಾನೆ’ ಎಂದರು. ಮಲ್ಪೆ ಯುಬಿಎಂ ಎಬಿಜರ್‌ ಚರ್ಚ್‌ ಪಾಸ್ಟರ್‌ ರೆ| ಸಂತೋಷ್‌ ಎ., ಲಯನ್ಸ್‌ ಜಿಲ್ಲಾ ಗವರ್ನರ್‌ ಡಾ| ತಲ್ಲೂರು ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು. ಶೋಕಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ವಂ| ವಲೇರಿಯನ್‌ ಮೆಂಡೋನ್ಸ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಅಲೊನ್ಸ್‌ ಡಿ’ಕೋಸ್ಟಾ ನಿರ್ವಹಿಸಿದರು. ಸೌಹಾರ್ದ ಸಮಿತಿಯ ಸಂಚಾಲಕ ಮೈಕಲ್‌ ಡಿ’ಸೋಜಾ ವಂದಿಸಿದರು.

ಚರ್ಚ್‌ ವಠಾರದಲ್ಲಿ ಎತ್ತರದ ಹಣತೆಯಲ್ಲಿ ನೂರಾರು ದೀಪಗಳನ್ನು ಹಚ್ಚುವ ಮೂಲಕ ದೀಪಾ
ವಳಿ ಆಚರಿಸಲಾಯಿತು. ಗೂಡುದೀಪ ಗಳು, ದೀಪಗಳ ಸಾಲು ಚರ್ಚ್‌ ಆವರಣದಲ್ಲಿ ಬೆಳಕಿನ ಹಬ್ಬದ ಸಂಭ್ರಮ ಮೂಡಿಸಿತು.

Advertisement

ಜ್ಞಾನದತ್ತ ಒಯ್ಯುವ ಬೆಳಕು
ಅಧ್ಯಕ್ಷತೆ ವಹಿಸಿದ್ದ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ| ಜೆರಾಲ್ಡ್‌ ಐಸಾಕ್‌ ಲೋಬೋ ಮಾತನಾಡಿ, “ತಾನು ಬೆಳಗಿ ಬೇರೆಯವರನ್ನು ಬೆಳಗಿಸುವ ಶಕ್ತಿ ದೀಪಕ್ಕಿದೆ. ಅಜ್ಞಾನದ ಕತ್ತಲೆಯಿಂದ ಜ್ಞಾನದ ದಿಕ್ಕಿಗೆ ದೀಪ ನಮ್ಮನ್ನು ಕೊಂಡೊಯ್ಯುತ್ತದೆ. ಸುಖ, ಶಾಂತಿ, ನಲಿವು, ಜ್ಞಾನ, ಸೌಹಾರ್ದದ ಸಂಕೇತವಾದ ದೀಪಾವಳಿಯನ್ನು ಎಲ್ಲರೂ ಸೇರಿಕೊಂಡು ಆಚರಿಸೋಣ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next