Advertisement
ಚುನಾವಣಾ ಬಂದೋಬಸ್ತ್, ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಕಿರು ಮಾಹಿತಿಯನ್ನು ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ ಅವರು “ಉದಯವಾಣಿ’ ಸಂವಾದದಲ್ಲಿ ವಿವರಿಸಿದ್ದಾರೆ.
ಜಿಲ್ಲೆಯಾದ್ಯಂತ ಕಣ್ಗಾವಲಿಗೆ ಪ್ರಸ್ತುತ 17 ಕಡೆಗಳಲ್ಲಿ ಪೊಲೀಸ್ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ. ರಾ.ಹೆ. 66ರಲ್ಲಿ ಹೆಜಮಾಡಿ, ಸಾಸ್ತಾನ (ತೆಕ್ಕಟ್ಟೆ) ಮತ್ತು ಶಿರೂರಿನಲ್ಲಿ ಹಾಗೂ ಉಳಿದಂತೆ ರಾಜ್ಯ, ಪಿಡಬ್ಲೂéಡಿ ರಸ್ತೆಗಳಲ್ಲಿ 14 ಕಡೆ ಚೆಕ್‌ಪೋಸ್ಟ್ ಹಾಕಲಾಗಿದೆ. ಚೆಕ್‌ಪೋಸ್ಟ್ ನಲ್ಲಿ ದಿನದ 24 ಗಂಟೆ 3 ಪಾಳಿಯಲ್ಲಿ ಪೊಲೀಸರ 51 ತಂಡಗಳು ಕಾರ್ಯì ನಿರ್ವಹಿಸಲಿದೆ. ಕೆಲ ಕಡೆಗಳಲ್ಲಿ ಸಿಸಿ ಟಿವಿ ಕೆಮರಾವನ್ನೂ ಅಳವಡಿಸಲಾಗಿದೆ. ಅಧಿಕಾರಿ/ಸಿಬಂದಿ ಕಾರ್ಯನಿರ್ವಹಿಸಲು ಪೆಂಡಾಲ್ ನಿರ್ಮಿಸಲಾಗಿದೆ. ತಂಡದಲ್ಲಿ ಪೊಲೀಸರ ಜತೆಗೆ ಕಂದಾಯ ಸಹಿತ ವಿವಿಧ ಇಲಾಖೆಗಳ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಅಧಿಕಾರ ವಿರುವ ಅಧಿಕಾರಿಗಳನ್ನೂ ನಿಯೋಜಿಸಿಕೊಳ್ಳಲಾಗಿದೆ. ಪೊಲೀಸರ ತಪಾಸಣೆಯ ವೇಳೆ ವಾಹನದ ವಾರಸುದಾರರು ಸಹಕರಿಸಬೇಕು. ಯಾರೂ ಅಡ್ಡಿಪಡಿಸಬಾರದು ಎಂದರು.
Related Articles
1 ವಿಧಾನಸಭಾ ಕ್ಷೇತ್ರದಲ್ಲಿ 9 ಫ್ಲೈಯಿಂಗ್ ಸ್ಕ್ವಾಡ್, ಹೀಗೆ ಒಟ್ಟು 5 ಕ್ಷೇತ್ರದಲ್ಲಿ 45 ಫ್ಲೆ „ಯಿಂಗ್ ಸ್ಕ್ವಾಡ್‌ಗಳು ಕಾರ್ಯಾಚರಿಸುತ್ತಲಿವೆ. ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಇಟ್ಟುಕೊಳ್ಳಲಾಗಿದೆ. ಫೋನ್,ವಾಟ್ಸ್‌ಆ್ಯಪ್ ಮೂಲಕ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತಿದೆ. ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿ ಜಿಲ್ಲೆಯಾದ್ಯಂತ ಆಯಾ ಠಾಣೆಗಳಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. ವಾಹನ ತಪಾಸಣೆಯ ವೇಳೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 59,000 ರೂ. ನಗದನ್ನು ನೇಜಾರಿನ ಚೆಕ್‌ಪೋಸ್ಟ್‌ನಲ್ಲಿ ಹಾಗೂ 3,56,600 ರೂ. ನಗದನ್ನು ಸಾಸ್ತಾನದ ಚೆಕ್‌ಪೋಸ್ಟ್‌ನಲ್ಲಿ ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ. ಇದನ್ನು ಜಿಲ್ಲಾ ಸಮಿತಿಗೆ ಹಸ್ತಾಂತರಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದವರು ಹೇಳಿದರು.
Advertisement
ಮುಚ್ಚಳಿಕೆ ಪ್ರಕ್ರಿಯೆಕೋವಿಗಳನ್ನು ಸ್ಥಳೀಯ ಠಾಣೆಗಳಲ್ಲಿ ಜಮಾ ಮಾಡುವಂತೆ ಸೂಚಿಸಲಾಗಿದೆ. ಶೇ. 95ರಷ್ಟು ಮಂದಿ ಸೂಚನೆ ಪಾಲಿಸಿದ್ದಾರೆ. ಶೇ. 5 ಮಂದಿ ಇನ್ನೂ ಡಿಪಾಸಿಟ್ ಮಾಡಿಲ್ಲ. ಕಾನೂನು ಉಲ್ಲಂ ಸಿದರೆ ಕೋವಿ ಲೈಸನ್ಸ್ ರದ್ದತಿಗೆ ಕ್ರಮ ಕೈಗೊಳ್ಳ ಲಾಗುತ್ತದೆ. ರೌಡಿ, ಗೂಂಡಾ, ಕಮ್ಯೂನಲ್ ಗೂಂಡಾ, ಮತದಾರರ ಮೇಲೆ ಪ್ರಭಾವ ಬೀರುವವರು, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರ ವಿರುದ್ಧ ಸೆಕ್ಯೂರಿಟಿಯಾಗಿ ಮುಚ್ಚಳಿಕೆ ಬರೆಯಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಲಿದೆ. ಸಮಾಜಘಾತಕ ಶಕ್ತಿಗಳು ಜನರಲ್ಲಿ ಭಯ ಹುಟ್ಟಿಸಲು ಪ್ರಯತ್ನ ಪಡುತ್ತಲೇ ಇರುತ್ತಾರೆ. ಆ ಭಯವನ್ನು ಹೋಗಲಾಡಿಸಿ ಜನರು ವಿಶ್ವಾಸ ಮತ್ತು ನಂಬಿಕೆಯಿಂದ ಶಾಂತಿಯುತವಾಗಿ ಗರಿಷ್ಠ ಮತದಾನ ಮಾಡುವಂಥ ಸಮಾಜ ನಿರ್ಮಿಸಬೇಕಿದೆ. ಮುಕ್ತ, ನಿರ್ಭೀತ, ಸುಗಮ ಚುನಾವಣೆಯ ಉದ್ದೇಶ ಈಡೇರಬೇಕು. ಎಲ್ಲಿ ಯಾದರೂ ಚುನಾವಣಾ ನೀತಿ ಸಂಹಿತೆ ಉಲ್ಲಂ ಸುತ್ತಿರುವುದು ಕಂಡುಬಂದರೆ ಆ ಕೂಡಲೇ ಜಿಲ್ಲಾ ಚುನಾವಣಾಧಿಕಾರಿಗಳು ಬಿಡುಗಡೆಗೊಳಿಸಿರುವ ದೂರವಾಣಿ ಸಂಖ್ಯೆಗೆ ಸಾರ್ವಜನಿಕರು ಕರೆ ಮಾಡಿ ಮಾಹಿತಿ ಕೊಡಬೇಕು. ಬರಲಿದೆ ಪ್ಯಾರಾ ಮಿಲಿಟರಿ ಪಡೆ
ಒಂದೊಂದು ವಿಧಾನಸಭಾ ಕ್ಷೇತ್ರಕ್ಕೆ 2 ತಂಡದ ಕಂಪೆನಿಯಂತೆ ಕೇಂದ್ರೀಯ ಪ್ಯಾರಾ ಮಿಲಿಟರಿ ಫೋರ್ಸ್ ಬರಬಹುದೆಂಬ ನೆಲೆಯಲ್ಲಿ ಯೋಜನೆ ಹಾಕಿಕೊಳ್ಳಲಾಗಿದೆ. ಲಭ್ಯವಿರುವಷ್ಟು ಫೋರ್ಸ್ ಹಂತ- ಹಂತವಾಗಿ ಜಿಲ್ಲೆಗೆ ಆಗಮಿಸಲಿದೆ. ಪ್ಯಾರಾ ಮಿಲಿಟರಿಯ 1 ಕಂಪೆನಿ ಬಂದಿದ್ದು, ಕುಂದಾಪುರ ಭಾಗದಲ್ಲಿ ನಿಯೋಜಿಸಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿಯೂ ಶಸ್ತ್ರಸಜ್ಜಿತರಾಗಿ ಕಾರ್ಯನಿರ್ವಹಿಸಲಿದ್ದಾರೆ. – ಚೇತನ್ ಪಡುಬಿದ್ರಿ