Advertisement

Udupi: ಶ್ರೀವಿದ್ಯೇಶತೀರ್ಥರ ಕೃತಿ ಕೃಷ್ಣನಿಗೆ ಅರ್ಪಣೆ ಐತಿಹಾಸಿಕ

02:06 AM Sep 14, 2024 | Team Udayavani |

ಉಡುಪಿ: ಶ್ರೀವಿದ್ಯೇಶತೀರ್ಥರು ರಚಿಸಿದ ಹಾಡನ್ನು ಅವರೆದುರೇ ಶ್ರೀಕೃಷ್ಣನಿಗೆ ಸಮರ್ಪಿ ಸಿರುವುದು ಐತಿಹಾಸಿಕ. ಶ್ರೇಷ್ಠ ಯತಿಗಳಾಗಿ ಪರಿಪೂರ್ಣರಾದ ಶ್ರೀಗಳಿಗೆ ಸಪ್ತತಿ ಪೂರ್ಣಗೊಂಡಿದೆ. ಭಗವಂತನ ಮೇಲೆ ವಿಶೇಷವಾದ ಭಕ್ತಿ ಹೊಂದಿ ಗುರುಗಳ ಅನುಗ್ರಹಕ್ಕೆ ಪಾತ್ರರಾಗಿ ಅತ್ಯಂತ ಶ್ರೇಷ್ಠ ಸಾಧನೆ ಮಾಡಿದ್ದಾರೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನುಡಿದರು.

Advertisement

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಶುಕ್ರವಾರ ರಾಜಾಂಗಣದಲ್ಲಿ ಜರಗಿದ ಶ್ರೀವಿದ್ಯೇಶಸಪ್ತತಿ ಸಂಭ್ರಮ ಮತ್ತು ಶ್ರೀ ವಿದ್ಯೇಶನಾದನೀರಾಜನಮ್‌ ಕಾರ್ಯಕ್ರಮದಲ್ಲಿ ಶ್ರೀ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರನ್ನು ಸಮ್ಮಾನಿಸಿ ಮಾತನಾಡಿದರು.
ಕೃಷ್ಣಮಠದ ಮುಂಭಾಗದಿಂದ ಕೋದಂಡರಾಮ ದೇವರ ಮೂರ್ತಿಯೊಂದಿಗೆ ಶ್ರೀಪಾದತ್ರಯರನ್ನು ಮೆರವಣಿಗೆಯಲ್ಲಿ ರಾಜಾಂಗಣಕ್ಕೆ ಕರೆತರ ಲಾ ಯಿತು. ಗಾಯನ, ನರ್ತನ, ವ್ಯಾಖ್ಯಾನದ ಮೂಲಕ ವಿದ್ಯೇಶತೀರ್ಥರು ರಚಿಸಿರುವ ಶ್ರೀವಿದ್ಯೇಶ ವಿಠಲಾಂಕಿತ ಕೃತಿಗಳ ಸಾಮೂಹಿಕ ಗಾಯನದ ಶ್ರೀವಿದ್ಯೆàಶನಾದನೀರಾಜನಮ್‌ ನೆರವೇರಿತು.

ಉಷಾ ಹೆಬ್ಟಾರ್‌, ವೀಣಾ ಶಾನುಭಾಗ್‌ ಸಂಘಟನೆ ಯಲ್ಲಿ ನೂರಾರು ಮಹಿಳಾ ಭಜಕರು ಹಾಡಿದ್ದು, ಪಂಚ ದಾಸರು ಕೈಯಲ್ಲಿ ಚಿಟಿಕೆ ಹಿಡಿದು ನರ್ತಿಸಿ, ಶ್ರೀಪಾದತ್ರಯರು ಕೃತಿಗಳ ವ್ಯಾಖ್ಯಾನ ನಡೆಸಿದರು. ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಮುರಳೀಧರ ಆಚಾರ್ಯ ಅವರು ವಿದ್ಯೆàಶತೀರ್ಥರಿಗೆ ಮಾಲಿಕೆ ಮಂಗಳಾರತಿ ಸಮರ್ಪಿಸಿದರು.

ವಿದ್ಯಾಮಾನ್ಯ ಶ್ರೀಚರಣ ಅರ್ಚಿಸಿರೋ…ಎನ್ನುವ ಕೃತಿ ಯನ್ನು ಪುತ್ತಿಗೆ ಶ್ರೀಪಾದರು ವ್ಯಾಖ್ಯಾನಿಸಿ, ವಿದ್ಯಾಮಾನ್ಯರು ಕಣ್ಣಿನಲ್ಲಿ ತೇಜ ಪ್ರಭೆಯುಳ್ಳವರು ಎಂದು ಗುರುಗಳ ಸ್ವರೂಪವನ್ನು ಹಾಡಿನಲ್ಲಿ ವಿದ್ಯೇಶತೀರ್ಥರು ಚಿತ್ರಿಸಿದ್ದಾರೆ. ದೇವರ ಏಕಾಗ್ರತೆಯನ್ನು ಸಂಪಾದಿಸಲು ಸಾಧ್ಯವಾದರೆ ಅದು ಬಹಳ ದೊಡ್ಡ ಸಾಧನೆ. ಜೀವನದಲ್ಲಿ ಕೊಂಡೊಯ್ಯ ಬಹುದಾದ ಏಕೈಕ ಸಂಪಾದನೆಯೇ ದೇವರಲ್ಲಿ ಏಕಾಗ್ರತೆ. ಏಕಾಗ್ರಚಿತ್ತನಾಗಿ ಸ್ಮರಿಸಿ ದೇವರ ದರ್ಶನ ಪಡೆದವರು ವಿದ್ಯಾಮಾನ್ಯರು ಎಂದರು.

ಹರಿಕೃಥಾಮೃತವ ಸ್ಮರಿಸಿರೋ… ಎನ್ನುವ ಕೃತಿಯನ್ನು ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ವ್ಯಾಖ್ಯಾನಿಸಿ, ಮನುಷ್ಯನಾಗಿ ಹುಟ್ಟಿದವನಿಗೆ ಭಗವಂತನನ್ನು ಒಲಿಸಿಕೊಳ್ಳುವ ಗುರಿ ಇರಬೇಕು. ಇದನ್ನು ಹರಿಕಥಾಮೃತದ ಮೂಲಕ ಅದರ ಪ್ರಾಮುಖ್ಯ, ವೈಶಿಷ್ಟ್ಯಗಳನ್ನು ಶ್ರೀಗಳು ಹಾಡಿನಲ್ಲಿ ತಿಳಿಸಿಕೊಟ್ಟಿದ್ದಾರೆ ಎಂದರು. ಶಿವನ ನಮಿಸಿ ಭಜಿಸಿ ಭಾಗ್ಯವಂತನಾಗಿರೋ… ಎನ್ನುವ ಹಾಡಿಗೆ ಶ್ರೀ ವಿದ್ಯೇಶತೀರ್ಥರು ವ್ಯಾಖ್ಯಾ ನಿಸಿ, ಶಿವ ಮಂತ್ರ ಜಪಿಸಿದವರು ಜೀವನದಲ್ಲಿ ಶ್ರೇಯಸ್ಸನ್ನು ಪಡೆಯುತ್ತಾರೆ ಎಂದರು. ಹುಬ್ಬಳ್ಳಿ ಉದ್ಯಮಿ ಶ್ರೀಕಾಂತ್‌ ಕೆಮೂ¤ರು, ರಮೇಶ್‌ ಭಟ್‌, ರವಿರಾಜ್‌ ಆಚಾರ್ಯ, ಮಹಿತೋಷ್‌ ಆಚಾರ್ಯ ಉಪಸ್ಥಿತರಿದ್ದರು. ಡಾ| ಬಿ. ಗೋಪಾಲಾಚಾರ್ಯ ನಿರೂಪಿಸಿದರು. ಷಣ್ಮುಖ ಹೆಬ್ಟಾರ್‌ ಸಮ್ಮಾನ ಪತ್ರ ವಾಚಿಸಿದರು.

Advertisement

“ಭಾಗವತ ಭಾಸ್ಕರ’ ಬಿರುದು-ಸಮ್ಮಾನ
ಶ್ರೀವಿದ್ಯೇಶತೀರ್ಥರ ಚಾತುರ್ಮಾಸ ವ್ರತ ಹಾಗೂ ಸಪ್ತತಿ ಸಂಭ್ರಮದ ಪ್ರಯುಕ್ತ ಅವರಿಗೆ “ಭಾಗವತ ಭಾಸ್ಕರ’ ಎಂಬ ಬಿರುದು ನೀಡಿ ನಾಣ್ಯಗಳ ಮೂಲಕ ತುಲಾಭಾರ ನಡೆಸಿ, ಯಕ್ಷಗಾನ ಕಿರೀಟವನ್ನು ಹೋಲುವ ಪೀಠದಲ್ಲಿ ಕುಳ್ಳಿರಿಸಿ ಸಮ್ಮಾನ ನೆರವೇರಿಸಲಾಯಿತು. ಜೋ ಜೋ ಕೌಸಲ್ಯರಾಮ…ಹಾಡಿಗೆ ಮಧ್ವಾಚಾರ್ಯ ಕರಾರ್ಚಿತ ಭಂಡಾರಕೇರಿ ಮಠದ ಪಟ್ಟದ ದೇವರಾದ ಕೋದಂಡರಾಮನನ್ನು ತೊಟ್ಟಿಲಿನಲ್ಲಿಟ್ಟು ಯತಿತ್ರಯರು ತೂಗಿದಾಗ ಮಾತೆಯರು ತುಪ್ಪದ ದೀಪ ಬೆಳಗಿದರು.

Advertisement

Udayavani is now on Telegram. Click here to join our channel and stay updated with the latest news.

Next