Advertisement

Udupi  ಶ್ರೀಕೃಷ್ಣ ಮಾಸೋತ್ಸವ: ಶ್ರೀಕೃಷ್ಣ ಜಯಂತಿ : ವಿಟ್ಲಪಿಂಡಿ ಸ್ಪರ್ಧೆ ಬಹುಮಾನ ವಿತರಣೆ

01:07 AM Aug 21, 2024 | Team Udayavani |

ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಶ್ರೀಕೃಷ್ಣ ಜಯಂತಿ ಹಾಗೂ ವಿಟ್ಲಪಿಂಡಿ ಸಂಭ್ರಮ “ಶ್ರೀಕೃಷ್ಣಮಾಸೋತ್ಸವ’ದ ಪ್ರಯುಕ್ತ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತರಾದವರಿಗೆ ರಾಜಾಂಗಣದಲ್ಲಿ ಬಹುಮಾನ ವಿತರಣೆಯನ್ನು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮಾಡಿ ಹರಸಲಿದ್ದಾರೆ.

Advertisement

ಆ. 23ರ ಸಂಜೆ 5ಕ್ಕೆ ಕುಣಿತ ಭಜನ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಬತ್ತಿ ಮಾಡುವ ಸ್ಪರ್ಧೆ, ರಸಪ್ರಶ್ನೆ Ó³‌ರ್ಧೆ, ಪ್ರಬಂಧ ಸ್ಪರ್ಧೆ, ಆ. 24ರ ಸಂಜೆ 5ಕ್ಕೆ ಭಗವದ್ಗೀತೆ ಕಂಠಪಾಠ ಸ್ಪರ್ಧೆ, ಶಂಖ ಊದುವ ಸ್ಪರ್ಧೆ, ದಾಸ ಸಂಗೀತ ಸ್ಪರ್ಧೆ, ಶಾಲಾ ಭಜನ ಸ್ಪರ್ಧೆ, ಆ. 25ರ ಸಂಜೆ 5ಕ್ಕೆ ನಿಧಾನ ಸೈಕಲ್‌ ರೇಸ್‌ (10ನೇ ತರಗತಿ ಒಳಗೆ ಮತ್ತು ಮೇಲ್ಪಟ್ಟು), ತಟ್ಟೆ ಓಟ, ಬೆಲ್ಚೆಂಡು, ಟೊಂಕ ಬಿಲ್ಲೆ, ವಿಶಲ್‌ ಚೇರ್‌, ಗೋಣಿಚೀಲ ಓಟ (8ನೇ ತರಗತಿ ಒಳಗೆ ಮತ್ತು ಮೇಲ್ಪಟ್ಟು), ಸೈಕಲ್‌ ಬಂಡಿ (8ನೇ ತರಗತಿ ಒಳಗೆ ಮತ್ತು ಮೇಲ್ಪಟ್ಟು), ಹಗ್ಗ ಗಂಟು, ದೇವರನಾಮ ಸ್ಪರ್ಧೆ, ಕಾಳು ಬೇರ್ಪಡಿಸುವಿಕೆ, ಟೊಂಕ ಆಟ, ಸೊಪ್ಪಿನ ಆಟ ನಡೆಯಲಿದ್ದು, ಈ ಎಲ್ಲ ಸ್ಪರ್ಧೆಗಳಿಗೆ ಆಯಾ ದಿನಗಳಲ್ಲಿ ಆಗಮಿಸಿ ಪರ್ಯಾಯ ಶ್ರೀಪಾದರಿಂದ ಬಹುಮಾನ ಸ್ವೀಕರಿಸುವುದು.

ಆ. 24ರಿಂದ 27ರ ವರೆಗೆ ನಡೆಯಲಿರುವ ವಿವಿಧ ಸ್ಪರ್ಧೆಗಳ ಬಹುಮಾನಗಳನ್ನು ಆ. 28ರ ಸಂಜೆಯ ಸಮಾರೋಪದಲ್ಲಿ ಪರ್ಯಾಯ ಶ್ರೀಪಾದರು ವಿತರಿಸಲಿದ್ದಾರೆ. ಸ್ಪರ್ಧೆಗಳ ವಿವರಗಳನ್ನು ಶ್ರೀಕೃಷ್ಣ ಮಠದ ಬಡಗು ಮಾಳಿಗೆಯ ಕಚೇರಿ ಹಾಗೂ ರಾಜಾಂಗಣದ ಸೂಚನ ಫ‌ಲಕದಲ್ಲೂ ಪಡೆಯಬಹುದು ಎಂದು ಶ್ರೀ ಮಠದ ಪ್ರಕಟನೆ ತಿಳಿಸಿದೆ.

ಸ್ಪರ್ಧೆಗಳು -ವಿಜೇತರ ಪಟ್ಟಿ
ಕುಣಿತ ಭಜನೆ ಸ್ಪರ್ಧೆ: ಶ್ರೀ ಬಾಲಕೃಷ್ಣ ಭಜನ ಮಂದಿರ ಶಾಸ್ತ್ರಿನಗರ, ಕುಚ್ಚಾರು-ಹೆಬ್ರಿ (ಪ್ರ), ಶ್ರೀಕೃಷ್ಣ ಮಹಿಳಾ ಕುಣಿತ ಭಜನ ಸಂಘ ಕುಂಟೂರು-ಕಾಸರಗೋಡು (ದ್ವಿ), ಶ್ರೀ ಗಣೇಶ ಮಹಿಳಾ ಭಜನ ಮಂಡಳಿ ಹಿರಿಯಡಕ (ತೃ), ಚಿತ್ರಕಲಾ ಸ್ಪರ್ಧೆ-3ರಿಂದ 5ನೇ ತರಗತಿ: ನಿಧೀಶ್‌ ಜೆ. ನಾಯಕ್‌ (ಪ್ರ), ನಿಹಾರ್‌ ಜೆ. ಎಸ್‌. (ದ್ವಿ), ಪ್ರಿಯದರ್ಶಿನಿ (ತೃ), 6ರಿಂದ 7ನೇ ತರಗತಿ: ವಿನೀಶ್‌ ಆಚಾರ್ಯ (ಪ್ರ), ಅವನಿ ಎ. ಶೆಟ್ಟಿಗಾರ್‌ (ದ್ವಿ) ಸಾನಿಧ್ಯ ಆಚಾರ್ಯ (ತೃ), 8ರಿಂದ 10ನೇ ತರಗತಿ: ಅವನಿ ಎ. ಅಡಿಗ (ಪ್ರ), ಧರಿತ್ರಿ ಎಸ್‌. (ದ್ವಿ), ಕೃಷ್ಣಪ್ರಸಾದ್‌ ಭಟ್‌ (ತೃ), ಸಾರ್ವಜನಿಕ ವಿಭಾಗ: ಪ್ರತಿಷ್ಠಾ ಶೇಟ್‌ (ಪ್ರ), ರಜಿತ ಉಲ್ಲಾಳ್‌ (ದ್ವಿ), ಹರ್ಷಿತ ಎಸ್‌.ಎಸ್‌. (ತೃ), ಆಶುಭಾಷ‌ಣ ಸ್ಪರ್ಧೆ: ಪ್ರೌಢಶಾಲಾ ವಿಭಾಗ-ಆಕರ್ಷ್‌ ಭಟ್‌ (ಪ್ರ), ಕೃಷ್ಣ ವಿಜಯ (ದ್ವಿ), ಶ್ರೀವತ್ಸ ನಿಂಜೂರು (ತೃ), ಪ.ಪೂ. ವಿಭಾಗ-ಐಶ್ವರ್ಯ (ಪ್ರ), ಶಿವಕೃಷ್ಣ (ದ್ವಿ), ಸ್ಫೂರ್ತಿ (ತೃ), ಬತ್ತಿ ಮಾಡುವ ಸ್ಪರ್ಧೆ: ನಾಗರತ್ನಾ ಕುಕ್ಕಿಕಟ್ಟೆ (ಪ್ರ), ಜಯಾ ಭಟ್‌ ಶೀರೂರು (ದ್ವಿ), ಮಾಲತಿ ಗುಂಡಿಬೈಲು (ತೃ), ಪ್ರಬಂಧ ಸ್ಪರ್ಧೆ: ಪ್ರಾಥಮಿಕ ಶಾಲಾ ವಿಭಾಗ-ಚಿನ್ಮಯೀ (ಪ್ರ), ಅಪ್ರಮೇಯ (ದ್ವಿ), ಸಮೃದ್ಧ್ (ತೃ), ಪ್ರೌಢಶಾಲಾ ವಿಭಾಗ-ಶ್ರೀಕೃಷ್ಣ ನಿಂಜೂರ್‌ (ಪ್ರ), ಅದಿತಿ (ದ್ವಿ), ಸುಧನ್ವ ರಾವ್‌ (ತೃ), ರಸಪ್ರಶ್ನೆ ಸ್ಪರ್ಧೆ: 5ರಿಂದ 7ನೇ ತರಗತಿ-ಅದಿತಿ (ಪ್ರ), ಅನುಶ್ರೀ (ದ್ವಿ), ಮಧ್ವ ದಾಸ (ತೃ), 8ರಿಂದ 10ನೇ ತರಗತಿ-ಅಶ್ವತ್ಥ್ (ಪ್ರ), ಪ್ರಣವ್‌ (ದ್ವಿ), ಶ್ರೀಕೃಷ್ಣ (ತೃ) ಬಹುಮಾನ ಗಳಿಸಿದ್ದಾರೆ. ಎಲ್ಲ ವಿಜೇತರಿಗೆ ಆ. 23ರ ಸಂಜೆ 5ಕ್ಕೆ ರಾಜಾಂಗಣದಲ್ಲಿ ಬಹುಮಾನ ವಿತರಣೆ ಜರಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next