Advertisement
ಜನರ ಬಹು ಬೇಡಿಕೆ ಮೇರೆಗೆ ಶೀಂಬ್ರಾ ಸೇತುವೆಯನ್ನು ಕೆಲ ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಬ್ರಹ್ಮಾವರ, ಕೊಕ್ಕರ್ಣೆ, ಮಂದಾರ್ತಿ, ಉಪ್ಪೂರು ಭಾಗದಿಂದ ಮಣಿಪಾಲಕ್ಕೆ ಆರೋಗ್ಯ, ಶಿಕ್ಷಣ, ಉದ್ಯೋಗ ನಿಮಿತ್ತ ಸಂಚರಿಸಲು ಈ ಪರ್ಯಾಯ ಮಾರ್ಗ ಸಾಕಷ್ಟು ಅನುಕೂಲಗಳಿಂದ ಕೂಡಿದೆ. ಆದರೆ ಸಂಜೆಯಾಗುತ್ತಿದ್ದಂತೆ ಇಲ್ಲಿ ಸಂಚರಿಸಲು ಇರುಸು ಮುರುಸು, ಆತಂಕದ ವಾತಾವರಣ ಇದೆ.
Related Articles
Advertisement
- ಸೇತುವೆ ಮೇಲಿರುವ ಬೀದಿದೀಪದ ವ್ಯವಸ್ಥೆ ಸರಿಪಡಿಸಬೇಕು
- ಸೇತುವೆ ಮೇಲೆ ಅಕ್ರಮ ಕೂಟಗಳು ನಡೆಯದಂತೆ ಸಿಸಿಟಿವಿ ಕೆಮರಾ ಅಳವಡಿಕೆ
- ಪೊಲೀಸ್ ಬೀಟ್ ವ್ಯವಸ್ಥೆ ಇನ್ನಷ್ಟು ಬಿಗಿಯಾಗಬೇಕು, ತಡರಾತ್ರಿಯೂ ನಿಗಾವಿಡಬೇಕು.
- ಸಾರ್ವಜನಿಕವಾಗಿ ಮದ್ಯ ಸೇವಿಸುವರಿಗೆ ಕೇಸು ದಾಖಲಿಸಬೇಕು.
- ಸೇತುವೆ ಸಂಪರ್ಕಿಸುವ ರಸ್ತೆಯ ಎರಡು ಬದಿಗಳಲ್ಲಿ ಬೆಳೆದ ಹುಲ್ಲು, ಗಿಡಗಂಟಿಗಳ ತೆರವುಗೊಳಿಸುವುದು.
ಶೀಂಬ್ರಾ ಸೇತುವೆ ಬೀದಿದೀಪ ವ್ಯವಸ್ಥೆ ಸರಿಪಡಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಸಿಸಿಟಿವಿ ಅಳವಡಿಕೆ ಮತ್ತು ಅಕ್ರಮಗಳಿಗೆ ಕಡಿವಾಣವಾಕುವ ಸಂಬಂಧ ಸೂಕ್ತ ಕ್ರಮವಹಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು.
– ಯಶ್‌ಪಾಲ್ ಸುವರ್ಣ, ಶಾಸಕರು ಕಾನೂನು ಕ್ರಮದ ಎಚ್ಚರಿಕೆ
ಶೀಂಬ್ರಾ ಸೇತುವೆ ಪರಿಸರದಲ್ಲಿ ಇಲಾಖೆಯಿಂದ ನಿತ್ಯ ಗಸ್ತು ಸಿಬಂದಿ ಪರಿಶೀಲನೆ ನಡೆಸುತ್ತಾರೆ. ರಾತ್ರಿ ವೇಳೆ ಸೇತುವೆ ಮೇಲೆ ಸಮಯ ಕಳಿಯುವ ಕೆಲವರಿಗೆ ಎಚ್ಚರಿಕೆಯನ್ನು ಕೊಟ್ಟಿದ್ದೇವೆ. ಸಾರ್ವಜನಿಕರ ಓಡಾಟಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನಿಗಾವಹಿಸಲಾಗುತ್ತಿದೆ. ಬೀಟ್‌ವ್ಯವಸ್ಥೆ ಮತ್ತಷ್ಟು ಬಿಗಿಗೊಳಿಸಿ, ಸೂಕ್ತ ಕಾನೂನು ಕ್ರಮ ಜರಗಿಸುತ್ತೇವೆ.
-ಟಿ. ದೇವರಾಜ್, ಪೊಲೀಸ್ ನಿರೀಕ್ಷಕರು, ಮಣಿಪಾಲ ಬೀದಿದೀಪ, ಸಿಸಿಟಿವಿ ಅಳವಡಿಸಿ
ರಾತ್ರಿ ಬೀದಿದೀಪ ವ್ಯವಸ್ಥೆ ಇಲ್ಲದೆ ಶೀಂಬ್ರಾ ಸೇತುವೆ ಮೇಲೆ ಅಕ್ರಮ ಕೂಟ ಹೆಚ್ಚುತ್ತಿದೆ. ಜನರು ಓಡಾಡಲು ಭಯದ ವಾತಾವರಣ ಇದೆ. ಬೀದಿದೀಪ ವ್ಯವಸ್ಥೆ ಸರಿಪಡಿಸಿದಲ್ಲಿ ಅಕ್ರಮಕ್ಕೆ ಕಡಿವಾಣ ಬೀಳಲಿದೆ. ಜತೆಗೆ ಸಿಸಿಟಿವಿ ಕೆಮರಾ ಅಳವಡಿಸಬೇಕು. ಪೊಲೀಸ್ ಇಲಾಖೆ ಗಸ್ತು ಇದ್ದು, ಪೊಲೀಸರು ಹೋದ ಅನಂತರ ಮತ್ತೆ ಅಕ್ರಮ ಕೂಟ ಸೇರಿ ತಡರಾತ್ರಿವರೆಗೂ ಸೇತುವೆ ಮೇಲೆ ಮದ್ಯ ಸೇವಿಸುತ್ತಾರೆ.
– ಸತೀಶ್ ಪೂಜಾರಿ ಕೀಳಂಜೆ, ಸ್ಥಳೀಯರು