Advertisement

Udupi; ಆತ್ಮವಿಶ್ವಾಸ, ನಿಶ್ಚಿತ ಗುರಿಯಿಂದ ಯಶಸ್ಸು: ದೀಪಕ್‌ ಶೆಟ್ಟಿ

11:50 PM Jan 07, 2024 | Team Udayavani |

ಉಡುಪಿ: ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಸ್ಫೂರ್ತಿ ತುಂಬಲು ವಿದ್ಯಾರ್ಥಿವೇತನ ಸಹಕಾರಿಯಾಗುತ್ತದೆ. ಆತ್ಮವಿಶ್ವಾಸದಿಂದ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ನಿಶ್ಚಿತ ಗುರಿ ಇರಿಸಿಕೊಂಡು ಮುನ್ನುಗ್ಗಿದರೆ ಯಶಸ್ಸು ಕಾಣಬಹುದು ಎಂದು ಜೆಸಿಬಿ ಇಂಡಿಯಾ ಸೌತ್‌ ಏಷ್ಯಾ ಆ್ಯಂಡ್‌ ಆಫ್ರಿಕಾ ಈಸ್ಟ್‌ ಸಿಇಒ ಮತ್ತು ಎಂಡಿ ದೀಪಕ್‌ ಶೆಟ್ಟಿ ಅಭಿಪ್ರಾಯಪಟ್ಟರು.

Advertisement

ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಉಡುಪಿ ತಾಲೂಕು ಸಮಿತಿ ವ್ಯಾಪ್ತಿಯ ಬಂಟರ ಸಂಘಗಳ ಆಶ್ರಯದಲ್ಲಿ ಅಮ್ಮಣಿ ರಾಮಣ್ಣ ಶೆಟ್ಟಿ ಸ್ಮಾರಕ ಸಭಾಭವನದಲ್ಲಿ ರವಿವಾರ ನಡೆದ ದಿ| ಕೆ. ಸತೀಶ್ಚಂದ್ರ ಹೆಗ್ಡೆ ವಿದ್ಯಾರ್ಥಿವೇತನ ವಿತರಣೆ, ಬಂಟ ಸಮ್ಮಿಲನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದತ್ತು ಸ್ವೀಕಾರ ಕಾರ್ಯಕ್ರಮವನ್ನು ರಿಮೋಟ್‌ ಒತ್ತುವ ಮೂಲಕ ಉದ್ಘಾಟಿಸಿದ ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಅವರು, ಕಷ್ಟದಲ್ಲಿರುವವರನ್ನು ಗುರುತಿಸಿ ಅವರಿಗೆ ಸಹಾಯಹಸ್ತ ನೀಡುವುದು ದೇವರು ಮೆಚ್ಚುವ ಕಾರ್ಯ. ನಮ್ಮ ಬದುಕು ದೇವರಿಗೆ ಸಮರ್ಪಣೆಯಾಗುವಂತೆ ಇರಬೇಕು ಎಂದು ಹೇಳಿದರು.

ವಿದ್ಯಾರ್ಥಿವೇತನಕ್ಕೆ ಚಾಲನೆ ನೀಡಿದ ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಮಾತನಾಡಿ, ವ್ಯಕ್ತಿಯ ಸತ್ಕಾರ್ಯದಿಂದ ಅವರ ಹೆಸರು ಶಾಶ್ವತವಾಗಿ ನೆಲೆಗೊಳ್ಳಲಿದೆ ಎಂಬುದಕ್ಕೆ ಸತೀಶ್ಚಂದ್ರ ಹೆಗ್ಡೆಯವರು ಸಾಕ್ಷಿ ಎಂದು ತಿಳಿಸಿದರು.

ವಿದ್ಯಾರ್ಥಿ ದೆಸೆಯಿಂದಲೇ ಸಾಧನಶೀಲ ವ್ಯಕ್ತಿಯಾಗಬೇಕೆನ್ನುವ ದೃಢ ಸಂಕಲ್ಪ ಹೊಂದಬೇಕು ಎಂದು ಅದಾನಿ ಗ್ರೂಪ್‌ನ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್‌ ಆಳ್ವ ಆಶಯ ವ್ಯಕ್ತಪಡಿಸಿದರು.

Advertisement

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ ಕುಮಾರ್‌ ರೈ ಮಾಲಾಡಿ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.

ಬಂಟರ ಸಂಘದ ನಿಕಟ ಪೂರ್ವಾಧ್ಯಕ್ಷ ಬಿ. ಜಯರಾಜ್‌ ಹೆಗ್ಡೆ, ಟ್ರಸ್ಟ್‌ ಅಧ್ಯಕ್ಷೆ ಪ್ರೇಮಲತಾ ಸತೀಶ್ಚಂದ್ರ ಹೆಗ್ಡೆ, ವಿವಿಧ ಬಂಟರ ಸಂಘಗಳ ಅಧ್ಯಕ್ಷರಾದ ವಾಸುದೇವ ಶೆಟ್ಟಿ ಕಾಪು, ಪುರುಷೋತ್ತಮ ಶೆಟ್ಟಿ, ಶಾಂತಾರಾಮ ಸೂಡ ಕೆ., ವೀರೇಂದ್ರ ಶೆಟ್ಟಿ, ಮನೋಹರ ಎಸ್‌. ಶೆಟ್ಟಿ, ತಾರಾನಾಥ ಹೆಗ್ಡೆ, ನಿತೀಶ್‌ ಕುಮಾರ್‌ ಶೆಟ್ಟಿ, ಡಾ| ದೇವಿಪ್ರಸಾದ್‌ ಶೆಟ್ಟಿ, ಸುಧಾಕರ ಶೆಟ್ಟಿ ಮೈರ್ಮಾಡಿ, ಡಾ| ಎಚ್‌.ಬಿ. ಶೆಟ್ಟಿ, ವೀಣಾ ಶೆಟ್ಟಿ, ದಯಾನಂದ ಶೆಟ್ಟಿ, ಮನೋಹರ ಶೆಟ್ಟಿ, ಶಿವಪ್ರಸಾದ್‌ ಶೆಟ್ಟಿ, ಸೀತಾರಾಮ ಶೆಟ್ಟಿ, ಮಹಾಬಲ ಶೆಟ್ಟಿ, ಡಾ| ಪ್ರಶಾಂತ ಶೆಟ್ಟಿ, ಅಶೋಕ್‌ ಕುಮಾರ್‌ ಶೆಟ್ಟಿ, ಪ್ರಸಾದ್‌ ಹೆಗ್ಡೆ, ಶಂಕರ ಶೆಟ್ಟಿ, ಸದಸ್ಯರಾದ ಭುಜಂಗ ಶೆಟ್ಟಿ, ನಿತೀಶ್‌ ಕುಮಾರ್‌ ಶೆಟ್ಟಿ, ಸುಭಾಸ್‌ ಬಲ್ಲಾಳ್‌, ಮಿಥುನ್‌ ಆರ್‌. ಹೆಗ್ಡೆ, ನಾಮನಿರ್ದೇಶಿತ ಸದಸ್ಯರಾದ ಕಿಶೋರ್‌ ಶೆಟ್ಟಿ ಎರ್ಮಾಳು, ನಿರುಪಮಾ ಪ್ರಸಾದ್‌ ಶೆಟ್ಟಿ, ಪ್ರಸಾದ್‌ ಹೆಗ್ಡೆ ಮಾರಾಳಿ ಉಪಸ್ಥಿತರಿದ್ದರು.

ಕಾಪು ಲೀಲಾಧರ ಶೆಟ್ಟಿ ದಂಪತಿ, ಸುಧಾಕರ ಶೆಟ್ಟಿ ಉಡುಪಿ ಅವರ ನಿಧನಕ್ಕೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ನವೀನ್‌ ಶೆಟ್ಟಿ, ಸ್ವಾತಿ ಶೆಟ್ಟಿ, ಅರ್ಪಿತಾ ಶೆಟ್ಟಿ ನಿರೂಪಿಸಿದರು. ಸಂಚಾಲಕ ಎಚ್‌. ಶಿವಪ್ರಸಾದ್‌ ಹೆಗ್ಡೆ ಸ್ವಾಗತಿಸಿ, ಭುಜಂಗ ಶೆಟ್ಟಿ ವಂದಿಸಿದರು. ಸದಸ್ಯರಾದ ಹರೀಶ್‌ ಶೆಟ್ಟಿ ಚೇರ್ಕಾಡಿ, ಶ್ರೀಧರ ಕೆ. ಶೆಟ್ಟಿ ಕುತ್ಯಾರುಬೀಡು ಪ್ರಸ್ತಾವನೆಗೈದರು. ಸಹಸಂಚಾಲಕ ದಿನೇಶ್‌ ಹೆಗ್ಡೆ, ಸದಸ್ಯೆ ಇಂದಿರಾ ಸುಬ್ಬಯ್ಯ ಹೆಗ್ಡೆ ಸಮ್ಮಾನ ಪತ್ರ ವಾಚಿಸಿದರು.

ದತ್ತು ಸ್ವೀಕಾರ, ಸಮ್ಮಾನ, ಅಭಿನಂದನೆ
ದಾನಿಗಳಿಂದ ಮುಂದಿನ ಶೈಕ್ಷಣಿಕ ವ್ಯವಸ್ಥೆಗಾಗಿ ದತ್ತು ಸ್ವೀಕರಿಸಲ್ಪಟ್ಟ 15 ವಿದ್ಯಾರ್ಥಿಗಳಾದ ದರ್ಶನ್‌ ಎಸ್‌. ಶೆಟ್ಟಿ, ಸಾಕ್ಷಿ ಡಿ. ಶೆಟ್ಟಿ, ಕೆ. ಖುಷಿ ಶೆಟ್ಟಿ, ಕಶೀಶ್‌ ಶೆಟ್ಟಿ, ಶೆಟ್ಟಿ ಈಶಾನ್‌ ಗಣೇಶ್‌, ನಿಹಾಲ್‌, ಸುದೀಪ್‌, ಸಂಜನಾ, ಕೀರ್ತನ್‌ ಶೆಟ್ಟಿ, ಅನ್ವಿತಾ ಬಿ. ಶೆಟ್ಟಿ, ಅನುಷ್‌ ಎಸ್‌. ಶೆಟ್ಟಿ, ಮೇಘಾ, ಛಾಯಾ ಕೆ. ಶೆಟ್ಟಿ, ಶಿವಾನಿ, ರವಿತೇಜ್‌ ಡಿ. ಶೆಟ್ಟಿ ಅವರಿಗೆ ವಿದ್ಯಾರ್ಥಿವೇತನದ ಚೆಕ್‌ ಹಸ್ತಾಂತರಿಸಲಾಯಿತು.

ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಅವರನ್ನು ಗೌರವಿಸಲಾಯಿತು. ಕೆಎಂಸಿ ಡೀನ್‌ ಡಾ| ಪದ್ಮರಾಜ್‌ ಹೆಗ್ಡೆ, ಯುಪಿಎಸ್‌ಸಿ ಪದವೀಧರೆ ನಿವೇದಿತಾ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಸಾಧಕರಾದ ಪಿಎಚ್‌ಡಿ ಪದವೀಧರೆ ಸುಲೋಚನಾ ಕೊಡವೂರು, ಮಕ್ಕಳ ರಾಜ್ಯೋತ್ಸವ ಬಾಲ ಪ್ರಶಸ್ತಿ ಪುರಸ್ಕೃತೆ ಸಮೀಯಾ ಹೆಗ್ಡೆ ಅವರನ್ನು ಅಭಿನಂದಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next