Advertisement

ಉಡುಪಿ: ಏಕಕಂಠದಲ್ಲಿ ಶತಕಂಠಗಾಯನ !

10:47 AM Feb 24, 2017 | Team Udayavani |

ಉಡುಪಿ: ರೋಟರಿ ಜಿಲ್ಲೆ 3182 ವಲಯ 4ರ ನೇತೃತ್ವದಲ್ಲಿ ರೋಟರಿ ಪ್ರತಿಷ್ಠಾನ ಶತಮಾನೋತ್ಸವದ ಅಂಗವಾಗಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಗುರುವಾರ ಮಹಿಳೆಯರು, ಮಕ್ಕಳು ಸೇರಿದಂತೆ ನೂರಕ್ಕೂ ಹೆಚ್ಚು ಕಲಾವಿದರು ಶತಕಂಠ ಗಾಯನದಲ್ಲಿ ಪಾಲ್ಗೊಂಡು ಸುಶ್ರಾವ್ಯವಾಗಿ ಹಾಡಿದರು. 

Advertisement

ವಿದ್ವಾನ್‌ ಮಧೂರು ಬಾಲಸುಬ್ರಹ್ಮಣ್ಯಂ ನಿರ್ದೇಶನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರೂ ಸ್ವಯಂ ಹಾಡಿದರು. “ಗಜವದನ ಬೇಡುವೆ…’, “ಬೇಗ ಬಾರೋ ನೀಲಮೇಘವರ್ಣ…’, “ಹರಿಕುಣಿದ ನಮ್ಮ ಹರಿ ಕುಣಿದ…’,”ಸಕಲಗ್ರಹ ಬಲ ನೀನೇ ಸರಸಿ ಜಾಕ್ಷ…’, “ಎಂದರೋ ಮಹಾನು ಭಾವಲು…’, “ಮುರಹರನಗದರ ಮುಕುಂದಮಾಧವ…’, “ಜೋಜೋ ಶ್ರೀಕೃಷ್ಣ…’ ಈ ಹಾಡುಗಳು ಏಕಕಂಠದಲ್ಲಿ ಮೂಡಿಬಂದವು. 

ಅನಂತರ ಜರಗಿದ ಜಾಗತಿಕ ತಿಳಿವಳಿಕೆ ದಿನ, ವಿಶ್ವಶಾಂತಿ ಸಂದೇಶ, ರೋಟರಿ ಸಾರ್ವತ್ರಿಕ ಘನತೆ ಅನಾವರಣ ಕಾರ್ಯಕ್ರಮದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಬಾರಕೂರು ಸೈಂಟ್‌ ಪೀಟರ್ ಚರ್ಚ್‌ ಧರ್ಮಗುರು ರೆ| ಫಾ| ವಲೇರಿಯನ್‌ ಮೆಂಡೋನ್ಸ, ಹಂಗಾರಕಟ್ಟೆ ಎಚ್‌. ಇಬ್ರಾಹಿಂ ಸಾಹೇಬ್‌, ರೋಟರಿ ಜಿಲ್ಲಾ ಸಭಾಪತಿ ಡಾ| ಪಿ. ನಾರಾಯಣ, ರೋಟರಿ ಪ್ರಮುಖರಾದ ಸದಾನಂದ ಚಾತ್ರ, ಡಾ| ಭರತೇಶ್‌, ಅಭಿನಂದನ ಶೆಟ್ಟಿ, ಮಂಜುನಾಥ ಉಪಾಧ್ಯ, ಡಾ| ಭವಾನಿ ಶಂಕರ ಕೆ.ಆರ್‌., ಸುಬ್ರಹ್ಮಣ್ಯ ಬಾಸ್ರಿ, ಡಾ| ಜಿ.ಎಸ್‌.ಜೆ. ಭಟ್‌, ಸುರೇಶ ಬೀಡು, ಜಗದೀಶ ಕಾಮತ್‌, ಕರುಣಾಕರ ಶೆಟ್ಟಿ, ರಾಮಚಂದ್ರ ಉಪಾಧ್ಯ ಮೊದಲಾದವರು ಪಾಲ್ಗೊಂಡರು. 
 

Advertisement

Udayavani is now on Telegram. Click here to join our channel and stay updated with the latest news.

Next