Advertisement

“ಮಮತಾ ಬ್ಯಾನರ್ಜಿ ಉಡುವ ಸೀರೆ ನಮಗೇಕೆ ಬೇಡ?’

07:55 AM Sep 16, 2020 | mahesh |

ಉಡುಪಿ: ಉಡುಪಿ ಸೀರೆಯನ್ನು ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಅವರು ಉಡುತ್ತಾರೆ. ಹೀಗಿರುವಾಗ ಸ್ಥಳೀಯರಾದ ನಾವು ಉಡುಪಿ ಸೀರೆಗೆ ಪ್ರೋತ್ಸಾಹ ನೀಡುವುದು ಕರ್ತವ್ಯ. ಸ್ಥಳೀಯ ಉದ್ಯಮವಾದ ಕೈಮಗ್ಗ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ಮಹತ್ತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಜಿ.ಪಂ. ಅಧ್ಯಕ್ಷ ದಿನಕರ್‌ ಬಾಬು ಹೇಳಿದರು.

Advertisement

ಕೈಮಗ್ಗ ಸೀರೆಗಳ ಉತ್ಪಾದನೆ, ಮಾರಾಟ ಪ್ರೋತ್ಸಾಹಿಸಲು ಜಿ.ಪಂ., ಜಿಲ್ಲಾ ಕೈಮಗ್ಗ ಮತ್ತು ಜವುಳಿ ಇಲಾಖೆ ಮತ್ತು ಕೈಮಗ್ಗ ನೇಕಾರರ ಸಹಕಾರಿ ಸಂಘಗಳ ಆಶ್ರಯದಲ್ಲಿ ಮಂಗಳವಾರ ಜಿ.ಪಂ.ನಲ್ಲಿ ಆಯೋಜಿಸಿದ್ದ ಉಡುಪಿ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಕೋವಿಡ್ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಳೀಯ ಉದ್ಯಮಗಳಿಗೆ ಪ್ರೋತ್ಸಾಹ ನೀಡುವಂತೆ ಕರೆ ನೀಡಿದ್ದಾರೆ. ಉಡುಪಿ ಜಿ.ಪಂ. ಸದಸ್ಯರು ಒಂದಾಗಿ ಜಿ.ಪಂ. ಕಚೇರಿಯಲ್ಲಿ ಮಾರಾಟ ಮೇಳ ವನ್ನು ಆಯೋಜಿಸಿದ್ದಾರೆ. ಉಡುಪಿ ಸೀರೆ ಯನ್ನು ಪಶ್ಚಿಮ ಬಂಗಾಲ ಸಿಎಂ ಅವರು ಧರಿಸುತ್ತಾರೆ. ಹಾಗಿರುವಾಗ ಸ್ಥಳೀಯರಾದ ನಾವು ನಮ್ಮ ಉಡುಪಿ ಸೀರೆಗೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಕೈಮಗ್ಗ ಸೀರೆಗಳು ಸ್ಥಳೀಯ ನೇಕಾರರ ಕಲೆಯಾಗಿದ್ದು, ಇದನ್ನು ಪ್ರೋತ್ಸಾಹಿಸಲು ಪ್ರದರ್ಶನ ಆಯೋಜಿಸಲಾಗಿದೆ ಎಂದು ಕೈಮಗ್ಗ ಜವುಳಿ ಇಲಾಖೆಯ ಸಹಾಯಕ ಶಿವಶಂಕರ್‌ ತಿಳಿಸಿದರು.

ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸಾಮಾಜಿಕ ನ್ಯಾಯ ಸಮಿತಿ ಸದಸ್ಯೆ ಶೋಭಾ, ಸಿಇಒ ಪ್ರೀತಿ ಗೆಹೊÉàತ್‌, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್‌ ರಾವ್‌ ಉಪಸ್ಥಿತರಿದ್ದರು.

Advertisement

ಬ್ರಹ್ಮಾವರ ಪ್ರಾಥಮಿಕ ನೇಕಾರರ ಸಂಘ, ಉಡುಪಿ, ಶಿವಳ್ಳಿ ಪ್ರಾಥಮಿಕ ನೇಕಾರರ ಸಂಘದ ಸದಸ್ಯರು ಕೈಮಗ್ಗ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಭಾಗವಹಿಸಿ ದ್ದಾರೆ. ಕೈ ಮಗ್ಗದ ಶರ್ಟ್‌, ಶಾಲು, ಸಹಜ ಸೌಂದರ್ಯದ ಉಡುಪಿ ಸೀರೆ, ಸೇರಿದಂತೆ ವಿವಿಧ ಕೈಮಗ್ಗದಿಂದ ತಯಾರಿಸಿದ ಸೀರೆ ಮಾರಾಟ ಹಾಗೂ ಪ್ರದರ್ಶನದಲ್ಲಿತ್ತು. ಜಿ.ಪಂ. ಹಾಗೂ ಡಿಸಿ ಕಚೇರಿ ಸಿಬಂದಿ ಕೈಮಗ್ಗದ ಉಡುಪುಗಳನ್ನು ಖರೀದಿರಿಸಿದರು.

ಉಡುಪಿ ಸೀರೆಗೆ ಹೊಸ ವಿನ್ಯಾಸ
ಉಡುಪಿ ಸೀರೆಗೆ ಮನಸೋತು ಎಂಬಿಎ ಪದವೀಧರರೊಬ್ಬರು ಅವು ಗಳನ್ನು ಹೊರ ಜಗತ್ತಿಗೆ ಪರಿಚಯಿಸುವ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಮಣಿಪಾಲದ ಮಹಾಲಸ ಕಿಣಿ ಟ್ಯಾಪ್ಮಿಯಲ್ಲಿ ಎಂಬಿಎ ಪದವಿಯನ್ನು ಪಡೆದುಕೊಂಡಿದ್ದು, ಕೈಮಗ್ಗದ ಉತ್ಪನ್ನಗಳ ಮೇಲೆ ಆಸಕ್ತಿ ಹೊಂದಿರುವ ಹಿನ್ನೆಲೆಯಲ್ಲಿ ಉಡುಪಿ ಸೀರೆಗಳಿಗಾಗಿಯೇ ವಿಶೇಷ ವಿನ್ಯಾಸ ತಯಾರಿಸಿ, ಇನ್ನಷ್ಟು ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಯುವತಿಯರಿಗೆ ಇಷ್ಟವಾಗುವ ಕೆಲವೊಂದು ಸೀರೆ ವಿನ್ಯಾಸಗಳನ್ನು ಸಿದ್ಧಪಡಿಸುತ್ತಾರೆ. ಆ ಎಲ್ಲ ಸೀರೆಗಳನ್ನು ಅವರೇ ಖರೀದಿಸಿ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಾರೆ. ಜತೆಗೆ ನೇಕಾರರು ಇತರ ಸೀರೆಗಳನ್ನು ಮಾರಾಟ ಮಾಡಲು ಆನ್‌ಲೈನ್‌ನಲ್ಲಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next