Advertisement
ಹೆಸರಾಂತ ಸಂಗೀತಗಾರ ಆನಂದ ಭಾಟೆ, ಪುಣೆಯ ರಾಹುಲ್ ದೇಶ್‌ಪಾಂಡೆ ಹಾಗೂ ಸಾಥಿಗಳಾಗಿದ್ದ ಮೃದಂಗವಾದಕ ಪ್ರಸಾದ್ ಜೋಷಿ, ತಬಲ ವಾದಕ ನಿಖೀಲ್ ಪಾಠಕ್, ಹಾರ್ಮೋನಿಯಂ ವಾದಕ ರಾಹುಲ್ ಗೋಲೆ, ಡ್ರಮ್ಸ್ ವಾದಕ ಉದ್ಧವ್ ಕುಂಭಾರ್ ಅವರನ್ನು ಭಜನ್ ಸಂಗೀತ್ ಸಂಧ್ಯಾ ಕಾರ್ಯಕ್ರಮಕ್ಕೆ ಸಂಗೀತ ಸಭಾದ ಅಧ್ಯಕ್ಷ ಟಿ. ರಂಗ ಪೈ ಸ್ವಾಗತಿಸಿದರು. ಟ್ರಸ್ಟಿಗಳಾದ ಜಗದೀಶ್ ಪೈ, ಅಜಿತ್ ಪೈ, ಸುರೇಶ್, ಅನಂತನಾರಾಯಣ ಭಟ್ ಉಪಸ್ಥಿತರಿದ್ದರು.
ಆನಂದ ಭಾಟೆ ಮತ್ತು ರಾಹುಲ್ ದೇಶ್‌ಪಾಂಡೆ ಆರಂಭದಲ್ಲಿ ದೇವರ ನಾಮದೊಂದಿಗೆ ಜತೆಯಾಗಿ ‘ಜಯ ಜಯ ರಾಮಕೃಷ್ಣ ಹರಿ’ ಅಭಂಗವನ್ನು ವಿಶಿಷ್ಟ ಆಲಾಪನೆಗಳ ಮೂಲಕ ಹಾಡಿ ರಂಜಿಸಿದರು. ಆನಂದ ಭಾಟೆ ಮತ್ತು ರಾಹುಲ್ ದೇಶಪಾಂಡೆ ಜತೆಯಾಗಿ ಮತ್ತು ಸೊಲೊ ಆಗಿ ಸುಮಾರು 3 ತಾಸು ಕಾಲ ಮರಾಠಿ ಅಭಂಗಗಳು ಮತ್ತು ಭಕ್ತಿ ಸಂಗೀತ ಹಾಡಿದರು. ಆನಂದ ಭಾಟೆ ಅವರ ‘ದಯ ಮಾಡೋ ರಂಗ ದಯ ಮಾಡೋ ಕೃಷ್ಣ’ ಎಂಬ ಪುರಂದರದಾಸರ ಕೀರ್ತನೆ ಮೆಚ್ಚುಗೆಗೆ ಪಾತ್ರವಾಯಿತು.