Advertisement

Udupi: “ಸಾಗರ್‌ ಕವಚ್‌’ ಅಣಕು ಕಾರ್ಯಾಚರಣೆ; 21 ಮಂದಿ ಬಂಧನ, 2 ಬೋಟ್‌, ವಾಹನಗಳು ವಶಕ್ಕೆ

01:26 AM Oct 17, 2024 | Team Udayavani |

ಉಡುಪಿ: ಕರಾವಳಿ ಕಡಲತೀರದಲ್ಲಿ ವಿವಿಧ ರೀತಿಯ ವಿಧ್ವಂಸಕ ಕೃತ್ಯಕ್ಕೆ ಸಂಚು ಹಾಗೂ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ 21 ಮಂದಿಯನ್ನು ಬಂಧಿಸಲಾಗಿದ್ದು, 2 ಬೋಟ್‌ಗಳು ಹಾಗೂ 2 ದ್ವಿಚಕ್ರ ವಾಹನ ಮತ್ತು ನಕಲಿ ಬಾಂಬ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಇದು ಅಣಕು ಕಾರ್ಯಾಚರಣೆಯ ವರದಿ.

Advertisement

ಭಾರತೀಯ ನೌಕಾಪಡೆ, ಕರಾವಳಿ ಕಾವಲು ಪಡೆ, ಮಂಗಳೂರು ಕಮಿಷನರೆಟ್‌ ವ್ಯಾಪ್ತಿ, ಉಡುಪಿ, ಕಾರವಾರ ಪೊಲೀಸರು, ಬಂದರು, ಮೀನುಗಾರಿಕೆ ಇಲಾಖೆ, ಗುಪ್ತಚರ ಇಲಾಖೆ ವತಿಯಿಂದ ನಡೆದ “ಸಾಗರ್‌ ಕವಚ್‌’ ಅಣಕು ಕಾರ್ಯಾಚರಣೆ ಗುರುವಾರವೂ ಮುಂದುವರಿಯಲಿದೆ.

ಮಂಗಳೂರಿನ ಹಳೆಬಂದರು, ಹೆಜಮಾಡಿ ಲೈಟ್‌ಹೌಸ್‌, ಮಲ್ಪೆ ಬಂದರು, ಗಂಗೊಳ್ಳಿ, ಕುಮಟ, ಕಾರವಾರ ಬಂದರು ಹಾಗೂ ಉಡುಪಿಯ ಶ್ರೀಕೃಷ್ಣ ಮಠದ ಪರಿಸರದಲ್ಲಿ ಈ ಕಾರ್ಯಾಚರಣೆ ನಡೆಯಿತು. ವಿದ್ವಂಸಕ ಕೃತ್ಯ ನಡೆದಾಗ ನೌಕಪಡೆ, ಕರಾವಳಿ ಕಾವಲು ಪಡೆ ಇತ್ಯಾದಿ ಸ್ಪಂದನೆ, ಕಾರ್ಯಾಚರಣೆ ಹೇಗಿರಲಿದೆ, ಸ್ಥಳೀಯ ಸಹಭಾಗಿತ್ವದ ಬಗ್ಗೆ ಮಾಹಿತಿ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next