ಉಡುಪಿ: ಉಡುಪಿ ಜಿಲ್ಲೆಯ ಪ್ರಸಿದ್ಧ ದೈವ ನರ್ತಕ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಧು ಪಾಣಾರ ಮಂಚಿಕೆರೆ ಅವರು ಅಲ್ಪಕಾಲದ ಅಸೌಖ್ಯದಿಂದ ಆ.12ರಂದು ನಿಧನ ಹೊಂದಿದರು.
ಉಡುಪಿ ಜಿಲ್ಲೆಯ ಅಲೆವೂರು ಗ್ರಾಮದ ಮಂಚಿಕೆರೆಯ ದೈವಾರಾಧಕ ಸಾಧು ಪಾಣಾರ ಅವರು ದಿ| ಜೋಗು ದಿ| ಕರ್ಗಿ ದಂಪತಿಯ ಪುತ್ರ. 68ರ ಹರೆಯದ ಅವರು 45 ವರ್ಷಗಳಿಂದ ದೈವಾರಾಧನೆಯಲ್ಲಿ ತೊಡಗಿಸಿಕೊಂಡಿದ್ದರು.
ಇದನ್ನೂ ಓದಿ:ಪುರುಷರ ಲೈಂಗಿಕ ಸಮಸ್ಯೆಯ ಜಾಹೀರಾತಿನಲ್ಲಿ ಜಾನಿ ಸಿನ್ಸ್ ಜೊತೆ ಕಾಣಿಸಿಕೊಂಡ ರಣ್ವೀರ್ ಸಿಂಗ್
ಉಡುಪಿ ಜಿಲ್ಲೆ ಹಾಗೂ ಹೊರ ಊರುಗಳಲ್ಲಿ ದೈವಾರಾಧನೆ ನಡೆಸಿದ್ದ ಅವರು ಮುಖ್ಯವಾಗಿ ಜುಮಾದಿ, ವ್ಯಾಘ್ರ ಚಾಮುಂಡಿ, ಕಲ್ಲುಕುಟ್ಟಿಗ, ಪಂಜುರ್ಲಿ, ಬಗ್ಗು ಪಂಜುರ್ಲಿ, ಬೊಬ್ಬರ್ಯ, ಮಲೆಧೂಮಾವತಿ ದೈವಗಳ ಸೇವೆ ಸಲ್ಲಿಸಿದ್ದಾರೆ.
ಅವರ ಕಲಾ ಸೇವೆಯನ್ನು ಗುರುತಿಸಿ ಈಗಾಗಲೇ ಹಲವು ಸಂಘ-ಸಂಸ್ಥೆಗಳು ಗೌರವಿಸಿವೆ. ಸಾಧು ಪಾಣಾರ ಅವರು ಪತ್ನಿ ವಸಂತಿ ಪಾಣಾರ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.