Advertisement

Udupi: ರೈಲು ಹತ್ತುತ್ತಿದ್ದಾಗ ಬಿದ್ದ ಮಹಿಳೆಯ ರಕ್ಷಣೆ

08:48 PM Sep 20, 2024 | Team Udayavani |

ಉಡುಪಿ: ಶುಕ್ರವಾರ ಬೆಳಗ್ಗೆ ಮಂಗಳೂರು-ಮಡಗಾಂವ್‌ ಪ್ಯಾಸೆಂಜರ್‌ ರೈಲು ಹತ್ತಲು ಯತ್ನಿಸಿ ಬಿದ್ದ ಮಹಿಳೆಯೊಬ್ಬರನ್ನು ಉಡುಪಿ ರೈಲು ನಿಲ್ದಾಣದಲ್ಲಿ ರೈಲ್ವೇ ರಕ್ಷಣ ಪಡೆ (ಆರ್‌ಪಿಎಫ್) ರಕ್ಷಣೆ ಮಾಡಿದೆ.
ರೈಲು ಚಲಿಸಲು ಪ್ರಾರಂಭಿಸುತ್ತಿದ್ದಂತೆ ಮಹಿಳೆ ತನ್ನ ಸಮತೋಲನವನ್ನು ಕಳೆದುಕೊಂಡು ರೈಲು ಮತ್ತು ಫ್ಲ್ಯಾಟ್‌ಫಾರಂನ ಮಧ್ಯೆ ಬಿದ್ದು ಸಿಲುಕಿಕೊಂಡರು. ಇದನ್ನು ಗಮನಿಸಿದ ಆರ್‌ಪಿಎಫ್ ಅಧಿಕಾರಿ ಅಪರ್ಣಾ ನೇತೃತ್ವದ ಆರ್‌ಪಿಎಫ್ ಪೊಲೀಸರ ತಂಡ ತತ್‌ಕ್ಷಣ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ರಕ್ಷಿಸಿದರು. ಈ ಸಮಯೋಚಿತ ಮಧ್ಯಪ್ರವೇಶದಿಂದ ಸಂಭಾವ್ಯ ಅನಾಹುತ ತಡೆಯಲು ಸಾಧ್ಯವಾಯಿತು. ಸಿಬಂದಿಯ ಕ್ರಮವನ್ನು ಸಹಪ್ರಯಾಣಿಕರು ಶ್ಲಾ ಸಿದರು. ಅಪರ್ಣಾ ಅವರಿಗೆ ರೈಲ್ವೇ ಇಲಾಖೆ ವತಿಯಿಂದ 5 ಸಾವಿರ ರೂ. ಬಹುಮಾನ ಮೊತ್ತ ನೀಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next