Advertisement

Hunsur: ಮಹಿಳೆಯನ್ನು ನಂಬಿಸಿ ಅತ್ಯಾಚಾರವೆಸಗಿದ್ದ ಅನ್ಯಧರ್ಮಿಯನ ಬಂಧನ

04:35 PM Sep 12, 2024 | Team Udayavani |

ಹುಣಸೂರು: ಪತಿಯಿಂದ ಪರಿತ್ಯಕ್ತಳಾಗಿದ್ದ ಕೇರಳ ಮೂಲದ ಹಿಂದೂ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ, ಆಕೆ ಬಳಿಯಿದ್ದ ಹಣ, ಒಡವೆಗಳನ್ನು ಪಡೆದುಕೊಂಡು ಅತ್ಯಾಚಾರವೆಸಗಿದ್ದ ಅನ್ಯಧರ್ಮಿಯನನ್ನು ಬಂಧಿಸುವಲ್ಲಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

Advertisement

ಕೊಡಗು ಜಿಲ್ಲೆಯ ಕುಶಾಲನಗರ ನಿವಾಸಿ ಮೂಸಾರವರ ಪುತ್ರ ಬಂಧಿತ ರವೂಫ್ ಆರೋಪಿ.

ಘಟನೆ ವಿವರ:
ಆರೋಪಿ ರವೂಫ್ ಸಾಲ ಕೊಡಿಸುವ ವ್ಯವಹಾರ ನಡೆಸುತ್ತಿದ್ದು, ಮೈಸೂರಿನ ಖಾಸಗಿ ಕಂಪನಿಯ ಮಹಿಳಾ ಉದ್ಯೋಗಿ ಪರಿಚಯ ಮಾಡಿಕೊಂಡು ತಾನು ಅವಿವಾಹಿತನಾಗಿದ್ದು, ವಿವಾಹವಾಗುವುದಾಗಿ ನಂಬಿಸಿ ಮಹಿಳೆಯೊಂದಿಗೆ ಸುತ್ತಾಡಿಕೊಂಡಿದ್ದ. ಈ ವೇಳೆ ಆಕೆಯ ಒಡವೆಗಳನ್ನು ಗಿರವಿ ಇಟ್ಟಿದ್ದ.

ಕಳೆದ ನಾಲ್ಕು ದಿನಗಳ ಹಿಂದೆ ಹುಣಸೂರಿಗೆ ಆಗಮಿಸಿದ ಇಬ್ಬರು ಲಾಡ್ಜ್ನಲ್ಲಿ ತಂಗಿದ್ದರು. ಈ ವೇಳೆ ಆತನ ಬ್ಯಾಗಿನಲ್ಲಿದ್ದ ಆಧಾರ್ ಕಾರ್ಡ್ ಮತ್ತಿತರ ದಾಖಲಾತಿಗಳಲ್ಲಿ ಈತನ ಹೆಸರು ಅನ್ಯಧರ್ಮಿಯನ ಹೆಸರಿನಲ್ಲಿರುವುದನ್ನು ಕಂಡ ಮಹಿಳೆ ಅನುಮಾನಗೊಂಡು ಪರಿಶೀಲಿಸಿದ ವೇಳೆ ಈತ ಅನ್ಯಧರ್ಮಿಯ ಹಾಗೂ ವಿವಾಹಿತನೆಂದು ತಿಳಿದು ವಿರೋಧ ವ್ಯಕ್ತಪಡಿಸಿದ ವೇಳೆ ತನ್ನ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾನೆಂದು ಸಂತ್ರಸ್ತೆ ಮಹಿಳೆ ಹುಣಸೂರು ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಸದ್ಯ ಪೊಲೀಸರು ವಿಚಾರಣೆ ನಡೆಸಿ ಆರೋಪಿಯ ವಿರುದ್ದ ಅತ್ಯಾಚಾರ ಹಾಗೂ ಕೊಲೆ ಯತ್ನ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next