Advertisement

‘ಡಿಸೆಂಬರ್‌ ಅಂತ್ಯದೊಳಗೆ ಉಡುಪಿ ಗುಂಡಿಮುಕ್ತ ನಗರ’

02:32 PM Nov 04, 2022 | Team Udayavani |

ಉಡುಪಿ: ನಗರ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಿದ್ದು, 3 ಕೋ. ರೂ. ವೆಚ್ಚದಲ್ಲಿ ಗುಂಡಿಮುಕ್ತ ನಗರಕ್ಕೆ ಯೋಜನೆ ರೂಪಿಸಿದೆ. ವರ್ಷಾಂತ್ಯದೊಳಗೆ ಶ್ರೀಕೃಷ್ಣ ನಗರಿ ಉಡುಪಿಯನ್ನು ಪೂರ್ಣ ಪ್ರಮಾಣದಲ್ಲಿ ಗುಂಡಿಮುಕ್ತಗೊಳಿಸಲು ನಗರಾಡಳಿತ ಮುಂದಾಗಿದೆ.

Advertisement

ಕಳೆದ ಎರಡು ತಿಂಗಳಿನಿಂದ ನಗರದ ರಸ್ತೆ ಅವ್ಯವಸ್ಥೆ ಬಗ್ಗೆ ಜನರು ರೋಸಿ ಹೋಗಿದ್ದಾರೆ. ಈ ಬಗ್ಗೆ ಉದಯವಾಣಿ ನಿರಂತರ ವರದಿ ಪ್ರಕಟಿಸಿ ಆಡಳಿತ ವ್ಯವಸ್ಥೆಯನ್ನು ಎಚ್ಚರಿಸುತ್ತಲೇ ಬಂದಿದೆ.

ಮಳೆಗಾಲ ಮುಗಿದ ಕೂಡಲೇ ಗುಂಡಿಮುಕ್ತ ನಗರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಗರಸಭೆ ಆಡಳಿತ ಭರವಸೆ ನೀಡಿತ್ತು. ಇದೀಗ ಮಳೆ ಮುಗಿದು, ಬಿಸಿಲು ಬಿದ್ದರೂ ರಸ್ತೆ ಗುಂಡಿ ಮುಚ್ಚಲು ಮೀನಮೇಷ ಎಣಿಸಲಾಗುತ್ತಿದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಲ್ಪೆ, ಕಲ್ಮಾಡಿ, ಕೊಡವೂರು, ದೊಡ್ಡಣಗುಡ್ಡೆ, ಪೆರಂಪಳ್ಳಿ, ಮಣಿಪಾಲ, ಗುಂಡಿಬೈಲು, ಅನಂತನಗರ, ಇಂಡಸ್ಟ್ರಿಯಲ್‌ ಏರಿಯ, ಕುಂಜಿಬೆಟ್ಟು, ತೆಂಕಪೇಟೆ, ಕಡಿಯಾಳಿ, ಪರ್ಕಳ, ಬೈಲೂರು, ಚಿಟಾ³ಡಿ, ಇಂದಿರನಗರ ಸಹಿತ ನಗರದ ಮೊದಲಾದ ಕಡೆಗಳ ರಸ್ತೆಗಳಲ್ಲಿ ಗುಂಡಿ ಬಿದ್ದು ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಿದೆ. ಕೆಲವು ರಸ್ತೆಗಳ ಗುಂಡಿಗಳು ದಿನದಿಂದ ದಿನಕ್ಕೆ ಬೃಹತ್‌ ಆಗುತ್ತಿದೆ. ಬಹುತೇಕ ಕಡೆಗಳಲ್ಲಿ ದ್ವಿಚಕ್ರ ವಾಹನ ಸವಾರರು ಗುಂಡಿಗಳಿಂದ ನಿಯಂತ್ರಣ ತಪ್ಪಿ ಅಪಘಾತಕ್ಕೆ ಒಳಪಡುತ್ತಿದ್ದಾರೆ. ಈ ವರ್ಷದ ಮಳೆಗಾಲದಲ್ಲಿ ಶೇ.70ರಷ್ಟು ರಸ್ತೆಗಳು ಹದಗೆಟ್ಟು ಹೋಗಿದ್ದು, ಶೀಘ್ರವೆ ರಸ್ತೆ ಸರಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ಡಾಮರು ಪ್ಯಾಚ್‌ ವರ್ಕ್‌ಗೆ ಅಂದಾಜು ಮೊತ್ತ

ನಗರಸಭೆ ವ್ಯಾಪ್ತಿ ಡಾಮರು ಪ್ಯಾಚ್‌ ವರ್ಕ್‌ ಕಾಮಗಾರಿಗೆ ಬಡಗಬೆಟ್ಟು, ಬೈಲೂರು, ಚಿಟಾ³ಡಿ, ಇಂದಿರ ನಗರ, ಕಸ್ತೂರ್ಬಾನಗರ ವಾರ್ಡ್‌ಗೆ 39 ಲಕ್ಷ ರೂ., ಅಂದಾಜು ಮೊತ್ತ, ಈಶ್ವರ ನಗರ, ಮಣಿಪಾಲ, ಪರ್ಕಳ, ಸರಳೇಬೆಟ್ಟು, ಶೆಟ್ಟಿಬೆಟ್ಟು ವಾರ್ಡ್‌ಗೆ 44.50 ಲಕ್ಷ ರೂ., ಇಂದ್ರಾಳಿ, ಸಗ್ರಿ, ಕಡಿಯಾಳಿ ವಾರ್ಡ್‌ಗೆ 27 ಲಕ್ಷ ರೂ., ತೆಂಕಪೇಟೆ, ಕುಂಜಿಬೆಟ್ಟು ವಾರ್ಡ್‌ 16 ಲಕ್ಷ ರೂ., ಅಜ್ಜರಕಾಡು, ಅಂಬಲಪಾಡಿ, ಬನ್ನಂಜೆ, ಕಿನ್ನಿಮೂಲ್ಕಿ, ಒಳಕಾಡು, ಶಿರಿಬೀಡು ವಾರ್ಡ್‌ 48.97 ಲಕ್ಷ ರೂ., ಕಕ್ಕುಂಜೆ, ಕರಂಬಳ್ಳಿ, ನಿಟ್ಟೂರು, ಮೂಡುಪೆರಂಪಳ್ಳಿ, ಗುಂಡಿಬೈಲು 44 ಲಕ್ಷ ರೂ., ಮೂಡುಬೆಟ್ಟು, ಸುಬ್ರಹ್ಮಣ್ಯ ನಗರ, ಗೋಪಾಲಪುರ, ಕೊಡಂಕೂರು 35 ಲಕ್ಷ ರೂ., ಕಲ್ಮಾಡಿ, ಕೊಳ, ಮಲ್ಪೆ ಸೆಂಟ್ರಲ್‌, ವಡಭಾಂಡೇಶ್ವರ, 44 ಲಕ್ಷ ರೂ., ಅಂದಾಜು ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ಟೆಂಡರ್‌ ಅಂತಿಮ ಗುಂಡಿ ಮುಕ್ತ ನಗರಕ್ಕೆ ಯೋಜನೆ ರೂಪಿಸಲಾಗಿದ್ದು, ಎಲ್ಲ ವಾರ್ಡ್‌ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಪ್ಯಾಚ್‌ವರ್ಕ್‌, ಡಾಮರು ಕಾಮಗಾರಿ ಟೆಂಡರ್‌ ಅಂತಿಮಗೊಂಡಿದೆ. ಕಾಮಗಾರಿ ನಡೆಸುವಾಗ ಸಣ್ಣ ಮಳೆಯಾದರೂ ರಸ್ತೆಯ ಗುಣಮಟ್ಟಕ್ಕೆ ತೊಂದರೆಯಾಗುತ್ತದೆ. ಡಿಸೆಂಬರ್‌ ಒಳಗೆ ವ್ಯವಸ್ಥಿತವಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು. – ಡಾ| ಉದಯ ಶೆಟ್ಟಿ, ಪೌರಾಯುಕ್ತರು, ಉಡುಪಿ ನಗರಸಭೆ

 

Advertisement

Udayavani is now on Telegram. Click here to join our channel and stay updated with the latest news.

Next