Advertisement

Udupi: ರಾಮ್ ಅಡ್ವಟೈಸರ್ಸ್ ಮಾಲಕ ರಾಮಚಂದ್ರ ಆಚಾರ್ಯ ನಿಧನ

05:39 PM May 22, 2024 | Team Udayavani |

ಉಡುಪಿ: ಇಲ್ಲಿನ ರಾಮ್ ಅಡ್ವಟೈಸರ್ಸ್ ಇದರ ಮಾಲಕ ರಾಮಚಂದ್ರ ಆಚಾರ್ಯ (66 ವ) ಅವರು ಮೇ.22ರ ಬುಧವಾರ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.

Advertisement

ಇವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ರಾಮಚಂದ್ರ ಆಚಾರ್ಯ ಅವರು ಕಳೆದ ಸುಮಾರು 25 ವರ್ಷಗಳಿಂದ ಜಾಹಿರಾತು ಏಜೆನ್ಸಿ ನಡೆಸಿಕೊಂಡು ಬಂದಿದ್ದರು. ಇವರು ಉಡುಪಿಯ ರೈಲ್ವೆ ಯಾತ್ರಿ ಸಂಘದ ಖಜಾಂಚಿಯಾಗಿ ಕೆಲಸ ನಿರ್ವಹಿಸಿ ಉಡುಪಿಗೆ ಹೆಚ್ಚಿನ ರೈಲ್ವೆ ಸೌಕರ್ಯಕ್ಕಾಗಿ  ಹೋರಾಟ ನಡೆಸಿದ್ದರು.

ಕಿನ್ನಿಮುಲ್ಕಿ ವೀರಭದ್ರ ದೇವಾಲಯದ ಸಹಾಯಕ ಅರ್ಚಕರಾಗಿಯೂ ಕೆಲಸ ನಿರ್ವಹಿಸಿದ್ದರು. ಅಲ್ಲದೆ ಉಡುಪಿ ಜನಸಂಘದ ಹಾಗೂ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು. ಕಿನ್ನಿಮುಲ್ಕಿ ವಾರ್ಡಿನ ಬೂತ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ಈ ಹಿಂದೆ ಇವರು ಕಾರ್ಕಳದ ಜನತೆ ಪ್ರಧಾನ ಅಂಚೆ ಕಚೇರಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಪ್ರಯಾಣಿಸಬೇಕಾಗಿದ್ದು, ಅದನ್ನು ಕಾರ್ಕಳಕ್ಕೆ ವರ್ಗಾಯಿಸಬೇಕಾಗಿ ಪ್ರಧಾನಮಂತ್ರಿ ಮೋದಿಯವರಿಗೆ ಪತ್ರ ಬರೆದು ಗಮನ  ಸೆಳೆದಿದ್ದರು. ಮೋದಿಯವರು ಅದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸರಿಪಡಿಸುವಂತೆ ಸೂಚಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next