Advertisement
ಮಧ್ಯಾಹ್ನದ ಬಳಿಕ ರಾತ್ರಿವರೆಗೂ ಹಲವು ಕಡೆಗಳಲ್ಲಿ ಬಿಟ್ಟುಬಿಟ್ಟು ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಕಳೆದ ಮೂರ್ನಾಲ್ಕು ದಿನಗಳ ಮಳೆಗೆ ಕುಂದಾಪುರ ಮತ್ತು ಕಾರ್ಕಳ ತಾಲೂಕಿನ ಹಲವೆಡೆ 41ಕ್ಕೂ ಅಧಿಕ ಮನೆಗಳಿಗೆ ಹಾನಿ ಸಂಭವಿಸಿದೆ.
ಮಣಿಪಾಲದಲ್ಲಿ ಕಾರಿನ ಮೇಲೆ ಬೃಹತ್ ಬ್ಯಾನರ್ ಬಿದ್ದ ಘಟನೆ ಸಂಭ ವಿಸಿದೆ. ಮಣಿಪಾಲ ಡಿಸಿ ಕಚೇರಿ ರಸ್ತೆಯ ಬದಿಯಲ್ಲಿ ಕಾರೊಂದನ್ನು ನಿಲ್ಲಿಸಲಾಗಿತ್ತು. ಸಂಜೆ ಸುರಿದ ಗಾಳಿ ಮಳೆಗೆ ಜಾಹೀರಾತು ಹೋರ್ಡಿಂಗ್ ಅಳವವಡಿಸಲಾಗಿದ್ದು, ಅದರ ಮೇಲೆ ಬ್ಯಾನರ್ ಬಿದ್ದಿದೆ.
Related Articles
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಮಳೆ ಮುಂದುವರಿದಿದೆ. ಜಿಲ್ಲೆಯ ಕೆಲವು ಕಡೆಗಳಲ್ಲಿ ಗಾಳಿ-ಮಳೆಯಾಗಿದ್ದು, ಕೆಲವೆಡೆ ನಷ್ಟ ಉಂಟಾಗಿದೆ. ಮಂಗಳೂರು ನಗರದಲ್ಲಿ ದಿನವಿಡೀ ಬಿಟ್ಟು ಬಿಟ್ಟು ಮಳೆಯಾಗಿದೆ. ಉಳಿದಂತೆ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಜು. 25ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಜು. 26, 27ರಂದು ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
Advertisement