ಧರ್ಮದ ಜಿಜ್ಞಾಸೆಯನ್ನು ಕೊನೆ ಮುಟ್ಟಿಸಬೇಕಾದರೆ ಸ್ವತಂತ್ರನಾದ ಭಗವಂತನ ಅಸ್ತಿತ್ವವನ್ನು ಒಪ್ಪಿಕೊಳ್ಳಬೇಕು. ಇಲ್ಲದೆ ಹೋದರೆ ಚರ್ಚೆಗೆ ಅವಕಾಶಗಳಿಲ್ಲ. ಧರ್ಮಾಧರ್ಮಗಳ ಮೂಲಸ್ಥಾನವಾದ ಭಗವಂತನನ್ನು ಒಪ್ಪಿಕೊಳ್ಳದಿದ್ದರೆ ಲೋಕದ ವ್ಯವಸ್ಥೆಯೇ ದಿಕ್ಕುತಪ್ಪುತ್ತದೆ. ದ್ರೌಪದಿ ವಸ್ತ್ರಾಪಹರಣ, ಕೃಷ್ಣನನ್ನು ಕಟ್ಟಿ ಹಾಕಲು ಯತ್ನ ಹೀಗೆ ವಿವಿಧ ಸಂದರ್ಭಗಳಲ್ಲಿ ದುರ್ಯೋಧನನನ್ನು ಹೊಡೆದು ಹಾಕಬಹುದಿತ್ತು.
ಯುದ್ಧದಲ್ಲಿ ಎಲ್ಲ ದುಷ್ಟರನ್ನು ಒಂದೆಡೆ ಸೇರಿಸಿಯೇ ಮುಗಿಸುವುದು ಭಗವತ್ಸಂಕಲ್ಪ. ಕಸವೆಲ್ಲವನ್ನು ಒಂದೆಡೆ ಸೇರಿಸಿ ಸ್ವತ್ಛಗೊಳಿಸಿದಂತೆ ಇದು. ಭೀಷ್ಮರು ಕೌರವರ ಪರವಾಗಿ ನಿಂತು ಯುದ್ಧ ಮಾಡಿದ್ದೂ ಭಗವದಿಚ್ಛೆಯೇ. ಇಲ್ಲವಾದರೆ ದುರ್ಯೋಧನ ಯುದ್ಧಕ್ಕೆ ಬರುತ್ತಿರಲಿಲ್ಲ. ಇದರರ್ಥ ಯುದ್ಧ ಮಾಡುವುದೇ ಧರ್ಮವೆಂದಲ್ಲ. ಜಗತ್ತಿನ ಮಾಲಕ ಬಯಸಿದ್ದನ್ನು ಮಾಡುವುದು ಧರ್ಮ.
ದೇಶದ ಪರವಾಗಿ ಬೇರೆ ದೇಶಗಳಲ್ಲಿ ಗುಪ್ತಚರರಾಗಿ ಕೆಲಸ ಮಾಡುವುದು ಧರ್ಮವೇ. ದೇಶದ ಮುಖ್ಯಸ್ಥ ಇದನ್ನು ಆತನಿಂದ ಬಯಸಿದ್ದಾನೆ. ಭಗವಂತನನನ್ನು ಬದಿಗಿಟ್ಟು ಧರ್ಮದ ನಿರ್ಧಾರ ಮಾಡುತ್ತೇವೆಂದರೆ ತಪ್ಪಾಗುತ್ತದೆ. ದೇವರ ಇಚ್ಛೆಯನ್ನು ತಿಳಿಯುವುದು ಹೇಗೆ? ಭಗವಂತನ ಇಚ್ಛೆ ಏನು ಎಂದು ನಿರಂತರ ಮನನ ಮಾಡುವುದೇ ಇದಕ್ಕೆ ದಾರಿ ಎಂದು ಧರ್ಮಶಾಸ್ತ್ರಗಳು ಸಾರುತ್ತವೆ.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811