ಯಾವುದು ಧರ್ಮ ಎಂದು ತಿಳಿದ ಬಳಿಕ ಯಾವುದು ಅಧರ್ಮ ಎಂದು ತಿಳಿಯುವುದೂ ಮುಖ್ಯವೇ. “ತನ್ನ ಪಾಲಿಗೆ ಬಂದ ಕಾರ್ಯವನ್ನು ಭಗವಂತನ ಪೂಜೆ ಎಂದು ಮಾಡುವುದು ಶ್ರೇಷ್ಠ ಧರ್ಮ’ ಎಂಬ “ಧರ್ಮ’ ಕುರಿತಾದ ಒಂದು ವಾಕ್ಯದ ವ್ಯಾಖ್ಯೆ ಬಳಿಕ “ತದ್ವಿರುದ್ಧ ಅಧರ್ಮಃ’ ಎಂಬ ಮಾತಿದೆ.
ತನ್ನ ಪಾಲಿಗೆ ಬಂದ ಕೆಲಸವನ್ನು ಭಗವಂತನ ಪೂಜೆ ಎಂದು ಶ್ರದ್ಧೆಯಿಂದ ಮಾಡದೆ ಇರುವುದು ಅಧರ್ಮವಾಗಿದೆ. ಮುಖ್ಯವಾಗಿರುವುದು ಮಾಡುವ ಕರ್ಮವು ಭಗವಂತನ ಇಚ್ಛೆಗೆ ಪೂರಕವಾಗಿದೆಯೋ? ಇಲ್ಲವೋ? ಎಂಬುದು.
ಇಲ್ಲಿ ಭಗವಂತನ ಇಚ್ಛೆಯೇ ಮುಖ್ಯ. ಕೆಲವು ಕರ್ಮಗಳು ವಿಹಿತವೂ ಅಲ್ಲ, ವಿರುದ್ಧವೂ ಅಲ್ಲ ಮೂರನೆಯದಾದ ತಟಸ್ಥ ಕರ್ಮಗಳು ಇರುತ್ತವೆ. ಇದು ಪೂರಕವಾಗಿದ್ದರೆ ಧರ್ಮ ಎಂದು ಪರಿಗಣಿಸಬೇಕು. ಅರ್ಜುನ ಒಂದೆಡೆ ತನ್ನ ಮನಸ್ಸು ಬಂಧುಬಳಗದವರನ್ನು ಹೊಡೆಯಲು ಒಪ್ಪುವುದಿಲ್ಲ ಎನ್ನುತ್ತಾನೆ, ಶ್ರೀಕೃಷ್ಣ ಅದೇ ಹೊತ್ತಿಗೆ “ನಾನು ಎಲ್ಲರನ್ನೂ ಕೊಂದಾಗಿದೆ.
ನೀನು ಹೊಡೆಯುವುದಷ್ಟೆ ಬಾಕಿ’ (ಮಯಾಹತಾನ್) ಎನ್ನುತ್ತಾನೆ. ಇಲ್ಲಿ ಅರ್ಜುನನ ಮನಸ್ಸು ಏನು ಹೇಳುತ್ತದೆ ಎನ್ನುವುದು ಮುಖ್ಯವಲ್ಲ. ಭಗವಂತನ ದೃಷ್ಟಿಯೇನು ಎನ್ನುವುದು ಮುಖ್ಯ. ಆದ್ದರಿಂದಲೇ “ಧರ್ಮಸ್ಯ ಪ್ರಭುಃ ಅಚ್ಯುತಃ’ ಎಂಬು ಬಣ್ಣಿಸಲಾಗಿದೆ.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811