ಉಡುಪಿ : ಸರ್ವಿಸ್ ಮತ್ತು ಎಕ್‌ಸ್ ಪ್ರೆಸ್ ಬಸ್ ಗಳು ಜು.1 ರಿಂದ ಉಡುಪಿ ಜಿಲ್ಲೆಯಲ್ಲಿ ಕಾರ್ಯಾಚರಣೆ ಆರಂಭಿಸಲಿವೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಖಾಸಗಿ ಬಸ್ ಮಾಲಕರೊಂದಿಗೆ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು(ಶುಕ್ರವಾರ) ಸಭೆ ನಡೆಸಲಾಗಿದ್ದು, ಜು.1 ರಿಂದ ಜಿಲ್ಲೆಯಲ್ಲಿ ಬಸ್ ಸೇವೆ ಪ್ರಾಾರಂಭಿಸಲು ತೀರ್ಮಾನಿಸಲಾಯಿತು. ಶಾಸಕ ಕೆ.ರಘುಪತಿ ಭಟ್ ಮತ್ತು ಜಿಲ್ಲಾಾಧಿಕಾರಿ ಜಿ. ಜಗದೀಶ್ ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ : ಕೋವಿಡ್ : ರಾಜ್ಯದಲ್ಲಿಂದು 6524 ಸೋಂಕಿತರು ಗುಣಮುಖ; 3310 ಹೊಸ ಪ್ರಕರಣ ಪತ್ತೆ
ಜುಲೈ 1 ರಿಂದ ಜಿಲ್ಲೆಯಲ್ಲಿ ಬಸ್ ಕಾರ್ಯಾಚರಣೆಯನ್ನು ಪ್ರಾಾರಂಭಿಸಲು ನಾವು ನಿರ್ಧರಿಸಿದ್ದೇವೆ. ಎಲ್ಲ ಕೊರೊನಾ ಪ್ರೊಟೋಕಾಲ್ ಅನ್ನು ಅನುಸರಿಸಲಾಗುವುದು. ಬಸ್ ಗಳಲ್ಲಿ ಕೇವಲ 50 ಶೇ.ಪ್ರಯಾಣಿಕರಿಗೆ ಮಾತ್ರ ಪ್ರಯಾಣಿಸಲು ಅವಕಾಶ ಒದಗಿಸಲಾಗುವುದು. ಬಸ್ ಶುಲ್ಕವನ್ನು 25ಶೇ.ಗೆ ಹೆಚ್ಚಿಸಲಾಗುವುದು. ಜು.1 ರಂದು ಸುಮಾರು 30 ಶೇ. ಬಸ್ಸುಗಳು ಓಡಾಟ ಮಾಡಲಿವೆ ಎಂದು ಉಡುಪಿ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಉಡುಪಿ ಆರ್ ಟಿ ಒ ಜೆಪಿ ಗಂಗಾಧರ್ ಮಾತನಾಡಿ, ಬಸ್ ಗಳು ಶೇ. 50ಪ್ರಯಾಣಿಕರನ್ನು ಕೊಂಡೊಯ್ಯಲು ಅನುಮತಿ ಇರುವ ಕಾರಣದಿಂದಾಗಿ ದರ ಹೆಚ್ಚಳದೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಇದು ಕೋವಿಡ್ -19 ಸಮಯದ ಅವಧಿಗೆ ಮಾತ್ರ ಅನ್ವಯವಾಗುತ್ತದೆ. ಬಸ್ ಗಳಲ್ಲಿ ಶೇ. 100 ಪ್ರಯಾಣಿಕರಿಗೆ ಪ್ರಯಾಣ ನಡೆಸಲು ಅನುಮತಿಸಿದ ಅನಂತರ ಬಸ್ಸು ದರಗಳು ಕಡಿಮೆಯಾಗಲಿವೆ ಎಂದರು.
ಎಡಿಸಿ ಸದಾಶಿವ ಪ್ರಭು, ರಾಜ್ಯ ಬಸ್ ಮಾಲಕರ ಒಕ್ಕೂಟದ ಸದಸ್ಯ ಸದಾನಂದ ಛಾತ್ರ ಮತ್ತು ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ಪರೋಪಕಾರಾರ್ಥಂ ಇದಂ ಶರೀರಂ: ಉದಯವಾಣಿ ಜೊತೆ ನೆರವಿನ ಅನುಭವ ಹಂಚಿಕೊಂಡ ಭುವನ್,ಹರ್ಷಿಕಾ ಜೋಡಿ