Advertisement

Udupi;ಪಿಒಕೆ ಶಾರದಾ ಪೀಠ: ಪೇಜಾವರ ಶ್ರೀ ಕಳಕಳಿ

12:16 AM Jan 06, 2024 | Team Udayavani |

ಉಡುಪಿ: ಪಾಕ್‌ ಆಕ್ರಮಿತ ಕಾಶ್ಮೀರದ ಭಾಗದಲ್ಲಿರುವ ಶಾರದಾ ಪೀಠದ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಅಲ್ಲಿಗೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

Advertisement

ಜಮ್ಮು ಕಾಶ್ಮೀರ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಎಚ್‌. ರಾಜೇಶ್‌ ಪ್ರಸಾದ್‌ ಅವರು ಪೇಜಾವರ ಶ್ರೀಗಳನ್ನು ಭೇಟಿಯಾಗಿ ಪ್ರಸಾದ ಸ್ವೀಕರಿಸಿದ ಸಂದರ್ಭ ಈ ಕುರಿತು ಚರ್ಚಿಸಿದರು.

ಶಾರದಾ ಪೀಠ ಈಗ ಪಿಒಕೆ ಭಾಗದಲ್ಲಿರುವುದರಿಂದ ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಒಂದು ವೇಳೆ ಭಾರತ ಆ ಪ್ರದೇಶವನ್ನು ವಶಕ್ಕೆ ಪಡೆದುಕೊಂಡರೆ ಸಾಧ್ಯ ಎಂದು ರಾಜೇಶ್‌ ಪ್ರಸಾದ್‌ ತಿಳಿಸಿದರು.

ಜಮ್ಮು ಕಾಶ್ಮೀರದ ದೇವಸ್ಥಾನಗಳ ಜೀರ್ಣೋದ್ಧಾರದ ಬಗ್ಗೆ ವಿಚಾರಿಸಿದ ಶ್ರೀಗಳು, ಅಲ್ಲಿ ಈ ಕೆಲಸ ಕಷ್ಟ
ಸಾಧ್ಯವಾದರೆ ಇತರೆಡೆಯ ಮಠಾಧೀಶರು ದೇವಸ್ಥಾನಗಳನ್ನು ಅಭಿವೃದ್ಧಿ ಗೊಳಿಸಲು ಯತ್ನಿಸುವ ಯೋಜನೆ ರೂಪಿಸ ಬಹುದು ಎಂದು ಅಭಿಪ್ರಾಯಪಟ್ಟರು. “ದೇವಸ್ಥಾನಗಳ ಅಭಿವೃದ್ಧಿಯನ್ನು ಮಾಡಬೇಕೆಂದು ಸರಕಾರದ ಇಚ್ಛೆ ಇದೆ. ಆದರೆ ಇದನ್ನು ಹೇಗೆ ಸಾಧಿಸಬೇಕೆಂಬ ಕುರಿತು ಯೋಜನೆ ರೂಪುಗೊಂಡಿಲ್ಲ ಎಂದರು ಪ್ರಸಾದ್‌.

ಜ. 9: ಅಯೋಧ್ಯೆಗೆ
ಪೇಜಾವರ ಶ್ರೀಗಳ ಬೀಳ್ಕೊಡುಗೆ
ಮಂಗಳೂರು: ಶ್ರೀ ರಾಮಚಂದ್ರನ ಪ್ರಾಣಪ್ರತಿಷ್ಠೆಗೆ ತೆರಳಲಿರುವ ಶ್ರೀರಾಮ ಜನ್ಮಭೂಮಿ ವಿಶ್ವಸ್ಥ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಕಣ್ವತೀರ್ಥ ಶ್ರೀ ರಾಮಾಂಜನೇಯ ಕ್ಷೇತ್ರದಿಂದ ಜ. 9ರಂದು ಬೆಳಗ್ಗೆ 11ಕ್ಕೆ ಬೀಳ್ಕೊಡಲಾಗುವುದು.

Advertisement

ಪತ್ರಿಕಾಗೋಷ್ಠಿಯಲ್ಲಿ ಪ್ರದೀಪ್‌ ಕುಮಾರ ಕಲ್ಕೂರ ಅವರು ಮಾತನಾಡಿ, ಬೆಳಗ್ಗೆ 10ಕ್ಕೆ ಸ್ವಾಮೀಜಿಯವರು ಸಮುದ್ರ ಸ್ನಾನಗೈಯ್ಯುವ ಕಾರ್ಯಕ್ರಮವೂ ಆಯೋಜಿಸಲಾಗಿದೆ. ಈ ಸಂದರ್ಭ ಕಣ್ವತೀರ್ಥ ಮಠ ಶ್ರೀ ರಾಮಾಂಜನೇಯ ಕ್ಷೇತ್ರದ ನೂತನ ಸುತ್ತಪೌಳಿ ಮತ್ತು ಇತರ ಅಭಿವೃದ್ಧಿ ಕಾರ್ಯಗಳ ಸಮರ್ಪಣ ಕಾರ್ಯಕ್ರಮ ಜರಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next