ಉಡುಪಿ: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ ಮುಖ್ಯ ಬೆಳೆ ಭತ್ತವನ್ನು ಗ್ರಾ.ಪಂ. ಮಟ್ಟದಲ್ಲಿ ಹಾಗೂ ಉದ್ದು ಮತ್ತು ನೆಲಗಡಲೆ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭಿಮಾ ಹಿಂಗಾರು ಮತ್ತು ಬೇಸಗೆ ಹಂಗಾಮು 2024-25 ಯೋಜನೆಯ ಬೆಳೆ ವಿಮೆ ಯೋಜನೆಯಡಿ ನೋಂದಣಿಗಾಗಿ ಅಧಿಸೂಚಿಸಲಾಗಿದೆ.
ಭತ್ತದ ಬೆಳೆಗೆ ಉಡುಪಿ ಹಾಗೂ ಕಾಪು ತಾಲೂಕಿನ ತಲಾ 2 ಗ್ರಾ.ಪಂ., ಬ್ರಹ್ಮಾವರ ತಾಲೂಕಿನ 7 ಗ್ರಾ. ಪಂ, ಕುಂದಾಪುರ ತಾಲೂಕಿನ 13 ಗ್ರಾ.ಪಂ., ಬೈಂದೂರು ತಾಲೂಕಿನ 1 ಗ್ರಾ.ಪಂ., ಕಾರ್ಕಳ ತಾಲೂಕಿನ 19 ಗ್ರಾ.ಪಂ. ಹಾಗೂ ಹೆಬ್ರಿ ತಾಲೂಕಿನ 3 ಗ್ರಾ.ಪಂ. ಸಹಿತ ಒಟ್ಟು 47 ಗ್ರಾ.ಪಂ.ಗಳನ್ನು ಬೆಳೆ ವಿಮೆ ಯೋಜನೆಯಡಿ ನೋಂದಣಿಗಾಗಿ ಅಧಿಸೂಚಿಸಲಾಗಿದೆ.
ವಿಮಾ ಮೊತ್ತ ಪ್ರತಿ ಹೆಕ್ಟೇರಿಗೆ 93,250 ರೂ., ವಿಮಾ ಕಂತಿನ ದರ ಪ್ರತಿ ಹೆ.ಗೆ 1,398 ರೂ.ಗಳಾಗಿದ್ದು, ನೋಂದಣಿಗೆ ಡಿ.31 ಕೊನೆಯ ದಿನವಾಗಿದೆ.
ಮಳೆಯಾಶ್ರಿತ ಉದ್ದು ಬೆಳೆಗೆ ಬ್ರಹ್ಮಾವರ, ಕಾಪು, ಕೋಟ, ಉಡುಪಿ, ಕುಂದಾಪುರ, ಬೈಂದೂರು ಮತ್ತು ವಂಡ್ಸೆ ಸಹಿತ ಒಟ್ಟು 7 ಹೋಬಳಿಗಳನ್ನು ಬೆಳೆ ವಿಮೆ ಯೋಜನೆಯಡಿ ನೋಂದಣಿಗಾಗಿ ಅಧಿಸೂಚಿಸಲಾಗಿದ್ದು, ವಿಮಾ ಮೊತ್ತ ಪ್ರತಿ ಹೆ.ಗೆ 32,750 ರೂ. ಗೆ ವಿಮಾ ಕಂತಿನ ದರ 491.25 ರೂ. ಗಳಾಗಿದ್ದು, ನೋಂದಣಿಗೆ ನ.30 ಕೊನೆಯ ದಿನ.