Advertisement

Udupi; ಪರ್ಕಳ ಅಪಘಾತದಲ್ಲಿ ಗಾಯಗೊಂಡಿದ್ದ ಪಾದಚಾರಿ ಸಾವು

01:39 PM Aug 22, 2024 | Team Udayavani |

ಉಡುಪಿ: ರಾಷ್ಟ್ರೀಯ ಹೆದ್ದಾರಿ 169 ಎ ಪರ್ಕಳದ ಹೃದಯ ಭಾಗದಲ್ಲಿ 80ನೇ ಬಡಗುಬೆಟ್ಟು ಹಾಗೂ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ ತಿರುವಿನಲ್ಲಿ ನಡೆದಿದ್ದ ಕಾರು ಮತ್ತು ರಿಕ್ಷಾ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಪಾದಚಾರಿಯೊಬ್ಬರು ಆಸ್ಪತ್ರೆಯಲ್ಲಿ ಗುರುವಾರ (ಆ.22) ನಿಧನರಾಗಿದ್ದಾರೆ.

Advertisement

ಮೃತರನ್ನು ಅಶೋಕ್‌ ಶೆಟ್ಟಿಗಾರ್‌ ಎಂದು ಗುರುತಿಸಲಾಗಿದೆ. ಮೂರು ದಿನಗಳ ಹಿಂದೆ ನಡೆದಿದ್ದ ಅಪಘಾತದಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು.

ಕಾರು ಮತ್ತು ರಿಕ್ಷಾ ನಡುವಿನ ಅಪಘಾತದ ವೇಳೆ ನಡೆದುಕೊಂಡು ಹೋಗುತ್ತಿದ್ದ ಅಶೋಕ್‌ ಶೆಟ್ಟಿಗಾರ್‌ ಅವರ ಮೇಲೆ ರಿಕ್ಷಾ ಎರಗಿ ಬಿದ್ದಿತ್ತು. ಇದರಿಂದ ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದ್ದಾರೆ.

ಮೃತರು ಎಂಐಟಿ ಮಾಜಿ ಉದ್ಯೋಗಿಯಾಗಿದ್ದು. ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಅವರು ಬಿಜೆಪಿ ಪಕ್ಷದಲ್ಲಿ ತೊಡಗಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next