ಉಡುಪಿ: ಆಯುರ್ವೇದ ಗುಣಗಳನ್ನು ಹೊಂದಿರುವ ತುಳಸೀ ಗಿಡಕ್ಕೆ ವಿಶೇಷ ಮಹತ್ವವಿದೆ. ಧಾರ್ಮಿಕವಾಗಿಯೂ ತುಳಸಿಗೆ ವಿಶೇಷ ಮಾನ್ಯತೆ ಇದೆ.
ಈ ನಿಟ್ಟಿನಲ್ಲಿ ಶ್ರೀಕೃಷ್ಣಮಠದಲ್ಲಿ ಪರ್ಯಾಯವನ್ನು ನಿರ್ವಹಿಸುವ ಪುತ್ತಿಗೆ ಮಠದಗರ್ಭಗುಡಿಸುತ್ತನಿರ್ಮಿಸಿದ
ತುಳಸೀ ವನವು ವಿಶೇಷ ಆಕರ್ಷಣೆಯಾಗಿದೆ.
ಪರ್ಯಾಯಕ್ಕೆ ಸಂಬಂಧಿಸಿ ಪುತ್ತಿಗೆ ಮಠ ಆಕರ್ಷಣೆಗಳ ಕೇಂದ್ರ ಬಿಂದುವಾಗಿದ್ದು, ಕಾರ್ಯಚಟುವಟಿಕೆ ನಡುವೆಯೂ ಗಮನ ಸೆಳೆಯುವುದು ಇಲ್ಲಿನ ತುಳಸೀ ವನ. ರಥಬೀದಿಯಿಂದ ಮಠವನ್ನು ಪ್ರವೇಶಿಸುತ್ತಿದ್ದಂತೆ ತುಳಸೀ ಗಿಡಗಳನ್ನು ಹೊಂದಿದ ಕುಂಡಗಳು ಸ್ವಾಗತಿಸುತ್ತವೆ. ಗರ್ಭಗುಡಿಯನ್ನು ಸುತ್ತಿ ಪ್ರಾರ್ಥಿಸುವಾಗ ತುಳಸೀಕಟ್ಟೆಗಳಿಗೂ ಸುತ್ತು ಬಂದಂತಾಗುತ್ತದೆ.
ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಿರಿಯಡಕ ಸಮೀಪ ಪುತ್ತಿಗೆ ಮೂಲಮಠದಲ್ಲಿ ತುಳಸೀ ವನವನ್ನು ವಿಶೇಷ
ಮುತುವರ್ಜಿಯಿಂದ ರೂಪಿಸಿದ್ದಾರೆ. ಅದರಂತೆಯೇ ರಥಬೀದಿಯಲ್ಲಿರುವ ಮಠದಲ್ಲಿಯೂ ತುಳಸೀ ವನ ಇರಬೇಕು ಎಂದು ಶ್ರೀಗಳು ಆಶಿಸಿದ್ದರು. ಅದರಂತೆಯೇ ಈ 100 ತುಳಸೀಗಿಡದ ಕುಂಡಗಳನ್ನುಇಲ್ಲಿಇರಿಸಲಾಗಿದೆ. ಗಾಳಿ, ಬೆಳಕು, ನೀರಿನ ವ್ಯವಸ್ಥೆಗೆ ಪೂರಕವಾಗಿ ತುಳಸೀ ವನ ಮಾಡಲಾಗಿದೆ.