Advertisement

ಉಡುಪಿ –ಪರ್ಕಳ ರಸ್ತೆ ಮಳೆಗಾಲಕ್ಕೆ ಮೊದಲು ಪೂರ್ಣಗೊಳಿಸುವ ಗುರಿ’

04:00 AM Nov 23, 2018 | Team Udayavani |

ಉಡುಪಿ: ಈಗಾಗಲೇ ಆರಂಭಗೊಂಡಿರುವ ಪರ್ಕಳದಿಂದ ಉಡುಪಿಯವರೆಗಿನ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯನ್ನು ಮುಂದಿನ ಜೂನ್‌ ತಿಂಗಳೊಳಗೆ ಪೂರ್ಣಗೊಳಿಸುವ ಗುರಿ ಇಟ್ಟುಕೊಂಡು ಶರವೇಗದಿಂದ ಕಾಮಗಾರಿಯನ್ನು ಮುಂದುವರಿಸಲಾಗುತ್ತಿದೆ ಎಂದು ಶಾಸಕ ಭಟ್‌ ತಿಳಿಸಿದರು.

Advertisement

ಬುಧವಾರ ಪರ್ಕಳ ಶಾಲೆಯಲ್ಲಿ ನಡೆದ ರಾ.ಹೆದ್ದಾರಿ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಅಭಿವೃದ್ಧಿಗಾಗಿ ಸಹಕರಿಸಿ ಭೂಮಿಯನ್ನು ಸರಕಾರಕ್ಕೆ ನೀಡುವ ಸಂತ್ರಸ್ತರಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸಿ, ಸಾರ್ವಜನಿಕರಿಗೆ ಎದುರಾಗುವ ಸಣ್ಣ ಪುಟ್ಟ ತೊಂದರೆಗಳನ್ನು ಕಾನೂನು ತೊಡಕಾಗದಂತೆ ನೋಡಿಕೊಳ್ಳುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜನಪ್ರತಿನಿಧಿಯಾಗಿ ಸೂಚನೆ ನೀಡುತ್ತೇನೆ ಮತ್ತು ಈ ಕಾಮಗಾರಿಯ ಪ್ರಗತಿ ಪರಿಶೀಲನೆಯನ್ನು ನಿರಂತರವಾಗಿ ಮಾಡಲಿದ್ದೇನೆ ಎಂದರು. ಈಶ್ವರ ನಗರದಿಂದ ದೇವಿನಗರದವರೆಗೆ  ಕಾಲ್ನಡಿಗೆ ಮೂಲಕ ತೆರಳಿ, ಆ ಭಾಗದ ಸಾರ್ವಜನಿಕರಿಂದ ಕಾಮಗಾರಿಯಿಂದ ಉಂಟಾದ ಸಮಸ್ಯೆ ಗಳನ್ನು ಶಾಸಕರು ಆಲಿಸಿದರು.

ಈ ಸಂದರ್ಭ ಮಾಜಿ ನಗರಸಭಾ ಸದಸ್ಯರಾದ ದಿನಕರ್‌ ಶೆಟ್ಟಿ ಹೆರ್ಗ, ಮಹೇಶ್‌ ಠಾಕೂರ್‌, ನಗರಸಭಾ ಸದಸ್ಯ ಗಿರೀಶ್‌ ಅಂಚನ್‌,  ಸುಮಿತ್ರಾ ನಾಯಕ್‌, ಅಶ್ವಿ‌ನಿ ಅರುಣ್‌ ಪೂಜಾರಿ, ವಿಜಯಲಕ್ಷ್ಮೀ ಮಂಜುನಾಥ್‌ ಮಣಿಪಾಲ, ಮಾಜಿ ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಉಪೇಂದ್ರ ನಾಯಕ್‌, ಶಾಲಾ ಮುಖ್ಯೋಪಾಧ್ಯಾಯಿನಿ ವಿನಯ ಸರೋಜಾ ಕುಮಾರಿ ಮತ್ತು ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next