Advertisement

ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ

07:50 PM Dec 31, 2024 | Team Udayavani |

ಉಡುಪಿ: ಸಂಸ್ಕೃತ ಕಾಲೇಜು 120 ವರ್ಷಗಳ ಇತಿಹಾಸ ಹೊಂದಿದದ್ದು ಕಾಲೇಜಿ ವಾರ್ಷಿಕೋತ್ಸವದೊಂದಿಗೆ ಸಂಸ್ಕೃತೋತ್ಸವ ನಡೆಸಿರುವುದು ಶ್ಲಾಘನೀಯ. ಇಷ್ಟೊಂದು ದೀರ್ಘ‌ ಇತಿಹಾಸದ ಸಂಸ್ಥೆಗಳು ಸಿಗುವುದೇ ಅತ್ಯಂತ ವಿರಳ. ಹೀಗಿರುವಾಗ ದೇಶಕ್ಕೆ ಅನೇಕ ಮಹಾಮಹಿಮ ಯತಿಗಳನ್ನು, ಪಂಡಿತರನ್ನು, ಸಂಸ್ಕೃತ ಅಧ್ಯಾಪಕರನ್ನು ನೀಡಿದ ಈ ಸಂಸ್ಥೆಯ 120ನೇ ವರ್ಷದ ಆಚರಣೆಯನ್ನು ವಿಶಿಷ್ಟವಾಗಿ ಆಚರಿಸಬೇಕು. ಇದಕ್ಕಾಗಿ ಪರ್ಯಾಯ ಶ್ರೀಮಠದ ಎಲ್ಲ ಸಹಕಾರವಿದೆ.

Advertisement

ಸಂಸ್ಥೆಯ ಹಳೆ ವಿದ್ಯಾರ್ಥಿಗಳೂ ಕೈ ಜೋಡಿಸಿ ಕಾರ್ಯಕ್ರಮವನ್ನು ರೂಪಿಸಬೇಕಾಗಿದೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ವಿ| ಪ್ರಸನ್ನಾಚಾರ್ಯ ಹೇಳಿದರು.

ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತೋತ್ಸವ ಪ್ರಯುಕ್ತ ಸಂಸ್ಕೃತ ಸ್ಪರ್ಧೆಗಳನ್ನು ಉದ್ಘಾಟಿಸಿ, ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ಸಂಸ್ಕೃತದ ಲಾಭ ಪಡೆದುಕೊಳ್ಳುವಂತಾಗಲಿ ಎಂದು ಶುಭಹಾರೈಸಿದರು.

ಪ್ರಾಂಶುಪಾಲ ಪ್ರೊ| ಸತ್ಯನಾರಾಯಣ ಆಚಾರ್ಯ ಸ್ವಾಗತಿಸಿ ಪ್ರಸ್ತಾವನೆಗೈದರು.ವಿ| ಅನಿಲ ಜೋಷಿ ವಂದಿಸಿ, ಡಾ| ಮಹೇಂದ್ರ ಸೋಮಯಾಜಿ ನಿರೂಪಿಸಿದರು. ವಿದ್ಯಾರ್ಥಿ ಶ್ರೀಕರ ಉಪಾಧ್ಯಾಯ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next